ಮೈಸೂರು ಭೂ ಹಗರಣದ ತನಿಖೆ ಜುಲೈಗೆ ಅಂತ್ಯ

ಮೈಸೂರು, ಮೇ. 21 : ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ 2,000 ಎಕರೆ ಭೂ ಹಗರಣ ತನಿಖೆ ನಡೆಸುತ್ತಿರುವ ತಂಡ ಜುಲೈನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಭೂಮಿಯ ಪರಭಾರೆ ಮುಂತಾದ ವಿಚಾರಗಳ ಕುರಿತ ಅಗತ್ಯ ದಾಖಲೆಗಳನ್ನು ಪರಿಶೀಲಿಸುತ್ತಿರುವುದರಿಂದ ಜುಲೈನಲ್ಲಿ ವರದಿ ನೀಡುವ ಸಾಧ್ಯತೆ ಇದೆ.

ಭೂ ಹಗರಣದ ತನಿಖೆ ನಡೆಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಜಿ.ಎಸ್.ನಾರಾಯಣಸ್ವಾಮಿ ಮತ್ತು ಕೆಎಎಸ್ ಅಧಿಕಾರಿ ಜಯರಾಂ ಅವರು ಜುಲೈನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದು ಹೇಳಿದ್ದಾರೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ 1950ರಿಂದಲೂ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಾಗಿದೆ. ವಡೆಯರ್, ಕೇಂದ್ರ ಸರ್ಕಾರದ ನಡುವೆ ನಡೆದ ಒಪ್ಪಂದದ ಪ್ರತಗಳಿವೆ ಆದ್ದರಿಂದ ಜುಲೈ ತನಕ ಕಾಲಾವಕಾಶ ಬೇಕಾಗುತ್ತದೆ ಎಂದರು. [ಚಾಮುಂಡಿ ಬೆಟ್ಟದ ಭೂ ವಿವಾದ]

ಮೈಸೂರಿನ ಕಾರಂಜಿಕೆರೆ,ಲಲಿತ ಮಹಲ್ ಅರಮನೆ, ಎಸ್‌ಐ ಆರ್ ಡಿ ಸಿದ್ದಾರ್ಥನಗರ ಬಡಾವಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಹಗರಣದಲ್ಲಿ ರಾಮದಾಸ್ ಅವರ ಕೈವಾಡವಿದೆ ಎಂದು ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಆರೋಪಿಸಿದ್ದರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ 449 ಎಕರೆ ಜಮೀನು ಕಬಳಿಸಲು ಸಚಿವ ರಾಮದಾಸ್ ಸಂಚು ನಡೆಸಿದ್ದಾರೆ ಎಂಬ ಆರೋಪವಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಕರ್ನಾಟಕದ ಇತರ ಜಿಲ್ಲಾಸುದ್ದಿಗಳು

ಭೂ ಹಗರಣದ ವರದಿ ಜುಲೈನಲ್ಲಿ

ಭೂ ಹಗರಣದ ವರದಿ ಜುಲೈನಲ್ಲಿ

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ 2,000 ಎಕರೆ ಭೂ ಹಗರಣ ತನಿಖೆ ನಡೆಸುತ್ತಿರುವ ತಂಡ ಜುಲೈನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಮೈಸೂರಿನ ಕಾರಂಜಿಕೆರೆ,ಲಲಿತ ಮಹಲ್ ಅರಮನೆ, ಎಸ್‌ಐ ಆರ್ ಡಿ ಸಿದ್ದಾರ್ಥನಗರ ಬಡಾವಣೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಹಗರಣದಲ್ಲಿ ರಾಮದಾಸ್ ಅವರ ಕೈವಾಡವಿದೆ ಎಂದು ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಮುಂದುವರೆದ ಆರ್ ಟಿಪಿಎಸ್ ದುರಸ್ತಿ

ಮುಂದುವರೆದ ಆರ್ ಟಿಪಿಎಸ್ ದುರಸ್ತಿ

ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದ 5ನೇ ಘಟಕದ ದುರಸ್ತಿ ಮುಂದುವರಿದಿದೆ. ಟರ್ಬೈನ್‌ ನಲ್ಲಿ ಸ್ಟೀಮ್ ಸೋರಿಕೆ ಕಾರಣ ಪತ್ತೆ ಹಚ್ಚಿದ ಬಿಎಚ್ ಇಎಲ್ ತಜ್ಞರ ತಂಡ, ದುರಸ್ತಿ ಕಾರ್ಯ ಮುಂದೆವರೆಸಿದೆ. ಸದ್ಯ ದುರಸ್ತಿಯಾಗುತ್ತಿರುವ 5ನೇ ಘಟಕ ಮತ್ತು 2ನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಪ್ರತಿದಿನ ಸರಾಸರಿ 1,040 ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದ್ದು, ಎರಡೂ ಘಟಕಗಳು ಪುನರ್ ಆರಂಭವಾದರೆ ವಿದ್ಯುತ್ ಉತ್ಪಾದನೆ ಹೆಚ್ಚಾಗಲಿದೆ.

 ಮೈಸೂರು ಸೈನಿಕ ಶಾಲೆಗೆ ಅರ್ಜಿ ಆಹ್ವಾನ

ಮೈಸೂರು ಸೈನಿಕ ಶಾಲೆಗೆ ಅರ್ಜಿ ಆಹ್ವಾನ

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಮೈಸೂರು ನಗರದಲ್ಲಿರುವ ಮಿಲಿಟರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 2014-15ನೇ ಶೈಕ್ಷಣಿಕ ವರ್ಷಕ್ಕಾಗಿ 6ನೇ ತರಗತಿಯಿಂದ 10ನೇ ತರಗತಿಯವರಿಗೆ ಓದುತ್ತಿರುವ ಕರ್ನಾಟಕ ರಾಜ್ಯದ ಮಾಜಿ ಸೈನಿಕರ ಮತ್ತು ಅವಲಂಬಿತರ ಗಂಡು ಮಕ್ಕಳಿಗೆ ಆದ್ಯತೆ ಹಾಗೂ ಅರ್ಹತೆ ಮೇರೆಗೆ ಉಚಿತ ಪ್ರವೇಶವನ್ನು ಪಡೆಯಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ನಮೂನೆಯನ್ನು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಮೀಪ, ಜೆ.ಎಲ್.ಬಿ. ರಸ್ತೆ, ಮೈಸೂರು 570 005 ಇಲ್ಲಿ ಪಡೆಯಬಹುದಾಗಿದೆ. ಮೇ 31 ಅರ್ಜಿ ಸಲ್ಲಿಸಲು ಕೊನೆಯ ದಿನ.

ಲೋಕಾಯುಕ್ತರ ಪ್ರವಾಸ

ಲೋಕಾಯುಕ್ತರ ಪ್ರವಾಸ

ಧಾರವಾಡ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯಲ್ಲಿ ಮೇ 23, 24 ಹಾಗೂ 26 ರಂದು ಪ್ರವಾಸ ಮಾಡಿ ಸಾರ್ವಜಿನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಮೇ 23 ರಂದು ಧಾರವಾಡ ಹಳೇ ಸರ್ಕಿಟ್ ಹೌಸ್‍ನಲ್ಲಿ, ಮತ್ತು ಕಲಘಟಗಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ, ಮೇ 24 ರಂದು ಹುಬ್ಬಳ್ಳಿ ಸಕ್ರ್ಯೂಟ್ ಹೌಸ್‍ನಲ್ಲಿ ಹಾಗೂ ಕುಂದಗೋಳ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರ ವರೆಗೆ, ಹಾಗೂ ನವಲಗುಂದ ಪ್ರವಾಸಿ ಮಂದಿರದಲ್ಲಿ ಮೇ 26 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುತ್ತದೆ.

ಬಿಎಸ್ಎನ್ಎಲ್ ಗ್ರಾಹಕರಿಗೆ ಸೂಚನೆ

ಬಿಎಸ್ಎನ್ಎಲ್ ಗ್ರಾಹಕರಿಗೆ ಸೂಚನೆ

ಶಿವಮೊಗ್ಗ ಜಿಲ್ಲೆಯಲ್ಲಿ ಭಾರತ ಸಂಚಾರ ನಿಗಮವು ಗ್ರಾಮೀಣ ಪ್ರದೇಶದಲ್ಲಿರುವ ಸಾರ್ವಜನಿಕ ದೂರವಾಣಿಯ ತಿಂಗಳ ಕನಿಷ್ಠ ಖಾತರಿ ಮೊತ್ತವನ್ನು ರೂ. 120ಕ್ಕೆ ಏರಿಸಲಾಗಿದ್ದು, ಪರಿಷ್ಕತ ದರಗಳು ಮೇ 1ರಿಂದ ಜಾರಿಗೆ ಬರಲಿವೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು WWW.bsnl.co.in ವೆಬ್ ಸೈಟಿಗೆ ಭೇಟಿ ನೀಡಬಹುದಾಗಿದೆ. ಅಥವಾ 08182-261247 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಕಲುಷಿತ ನೀರು ಕುಡಿದು ಬಾಲಕ ಬಲಿ

ಕಲುಷಿತ ನೀರು ಕುಡಿದು ಬಾಲಕ ಬಲಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಯರಲ ಬನ್ನಿಕೋಡು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಓವರ್‌ ಹೆಡ್ ಟ್ಯಾಂಕ್‌ ನಿಂದ ಬಂದ ಕಲುಷಿತ ನೀರು ಕುಡಿದ ಪರಿಣಾಮ 4 ವರ್ಷದ ಬಾಲಕನೊಬ್ಬ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದು, ಸುಮಾರು 30ಕ್ಕೂ ಹೆಚ್ಚು ಮಂದಿ ವಾಂತಿ, ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮದಲ್ಲಿ 10 ಸಾವಿರ ಲೀಟರ್ ಸಾಮರ್ಥ್ಯದ ಓವರ್‌ ಹೆಡ್ ಟ್ಯಾಂಕ್ ಅನ್ನು ನೂತನವಾಗಿ ನಿರ್ಮಿಸಲಾಗಿತ್ತು. ಕಳೆದ ಭಾನುವಾರದಿಂದ ಟ್ಯಾಂಕ್ ಗೆ ನೀರು ತುಂಬಿಸಿ, ಪ್ರತಿ ದಿನ ಗ್ರಾಮಸ್ಥರಿಗೆ ನೀರು ಪೂರೈಸಲಾಗುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+