ಒಂದು ವರ್ಷದಲ್ಲಿ ಅನರ್ಹ ಶಾಸಕರ ಆದಾಯ ಎಷ್ಟು ಹೆಚ್ಚಳವಾಗಿದೆ?
ಬೆಂಗಳೂರು, ಡಿಸೆಂಬರ್ 03: ಕೇವಲ ಒಂದೂವರೆ ವರ್ಷದಲ್ಲಿ ಅನರ್ಹ ಶಾಸಕರ ಆಸ್ತಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕೆಲವು ಅನರ್ಹರ ಆಸ್ತಿಯಲ್ಲಿ ಭಾರಿ ಏರಿಕೆ ಕಂಡು ಬಂದಿದ್ದರೆ, ಕೆಲವು ಅನರ್ಹರದ್ದು ಸಾಮಾನ್ಯ ಏರಿಕೆ ಆಗಿದೆ ಕೆಲವರ ಆಸ್ತಿ ಇಳಿಕೆಯೂ ಆಗಿದೆ.
ಈಗ ಅನರ್ಹಗೊಂಡಿರುವ ಎಲ್ಲರೂ 2018 ಏಪ್ರಿಲ್-ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಚುನಾವಣಾ ಆಯೋಗಕ್ಕೆ ಆಸ್ತಿ ವಿವರವನ್ನು ಸಲ್ಲಿಸಿದ್ದರು. ಅಂತೆಯೇ ಈಗಲೂ ಉಪಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿ, ಆಸ್ತಿ ವಿವರವನ್ನು ಆಯೋಗಕ್ಕೆ ಸಲ್ಲಿಸಿದ್ದಾರೆ.
ಬಿಜೆಪಿಯಿಂದ ಉಪ ಚುನಾವಣೆಗೆ ಸ್ಪರ್ಧಿಸಿರುವ 13 ಅನರ್ಹ ರ ಆಸ್ತಿ 2018 ರ ಚುನಾವಣೆ ಸಮಯದಲ್ಲಿ ಎಷ್ಟಿತ್ತು. 2019 ರ ವೇಳೆಗೆ ಅಂದರೆ ಕೇವಲ ಒಂದು ವರ್ಷದಲ್ಲಿ ಎಷ್ಟು ಹೆಚ್ಚಳವಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಮಹಾಲಕ್ಷ್ಮಿ ಲೇಔಟ್ ನಿಂದ ಸ್ಪರ್ಧಿಸಿರುವ ಕೆ.ಗೋಪಾಲಾಯ್ಯ ಅವರು 2018 ರಲ್ಲಿ ನೀಡಿದ್ದ ಮಾಹಿತಿಯಂತೆ ಅವರ ಆಸ್ತಿ 10 ಕೋಟಿ ಇತ್ತು. ಈಗ ನೀಡಿರುವ ಮಾಹಿತಿ ಪ್ರಕಾರ ಅವರ ಆಸ್ತಿ 17 ಕೋಟಿ ಕೇವಲ ಒಂದು ವರ್ಷದಲ್ಲಿ 7 ಕೋಟಿ ಆಸ್ತಿ ಹೆಚ್ಚಳವಾಗಿದೆ.

ಸೋಮಶೇಖರ್ ಆಸ್ತಿ ಹೆಚ್ಚೆಷ್ಟಾಗಿದೆ?
ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಬಿ.ಸಿ.ಪಾಟೀಲ್ ಹಾಗೂ ಅವರ ಪತ್ನಿಯ ಆಸ್ತಿ ಒಟ್ಟಾಗಿ 2018 ರಲ್ಲಿ 5.93 ಕೋಟಿ ಇತ್ತು. ಆದರೆ ಒಂದೇ ವರ್ಷದಲ್ಲಿ ಅವರ ಆಸ್ತಿ 8.59 ಕೋಟಿ ಆಗಿದೆ. ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಸ್.ಟಿ.ಸೋಮಶೇಖರ್ ಆಸ್ತಿ 2018 ರಲ್ಲಿ 8.4 ಕೋಟಿ ಇತ್ತು. ಈಗಲೂ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ. ಆದರೆ ಅವರ ಪತ್ನಿ ಮತ್ತು ಪುತ್ರ ಆಸ್ತಿಯಲ್ಲಿ ಒಟ್ಟು ಎರಡು ಕೋಟಿಗಳಷ್ಟು ಏರಿಕೆ ಆಗಿದೆ.

ಎಂಟಿಬಿ ನಾಗರಾಜ್ ಆಸ್ತಿಯಲ್ಲಿ ಹೆಚ್ಚಳ
ಎಂಟಿಬಿ ಮತ್ತು ಅವರ ಪತ್ನಿ ಶಾಂತಕುಮಾರಿ ಅವರ ಒಟ್ಟು ಆಸ್ತಿ 1,201.50 ಕೋಟಿ ರೂ. ಎನ್ನುತ್ತದೆ ಇತ್ತೀಚಿನ ಅಫಿಡವಿಟ್. ಅವರು 2018ರ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಸಲ್ಲಿಸಿದ್ದ ಅಫಿಡವಿಡ್‌ಗೆ ಹೋಲಿಸಿದರೆ ಇದು ಶೇ 15.5ರಷ್ಟು ಸಂಪತ್ತು ಪ್ರಮಾಣ ಹೆಚ್ಚಳವಾಗಿರುವುದನ್ನು ತೋರಿಸುತ್ತದೆ.

ಆನಂದ್ ಸಿಂಗ್ ಆಸ್ತಿಯಲ್ಲಿ ಹೆಚ್ಚಳವಾಗಿದೆ
ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ 'ಅನರ್ಹ' ಆನಂದ್ ಸಿಂಗ್ ಅವರ 2018 ರ ಆಸ್ತಿ 71 ಕೋಟಿ ಇತ್ತು ಅವರ ಆಸ್ತಿಯ ಮೌಲ್ಯ 104 ಕೋಟಿ. ಆನಂದ್ ಸಿಂಗ್ ಒಂದು ವರ್ಷದಲ್ಲಿ 12 ಕೋಟಿ ಸಾಲ ಮಾಡಿರುವುದು ಆಸ್ತಿ ವಿವರದಿಂದ ಗೊತ್ತಾಗಿದೆ.

ಸಾಹುಕಾರ್ ರಮೇಶ್ ಆಸ್ತಿ ಗಣನೀಯ ಇಳಿಕೆ
ಬೆಳಗಾವಿಯ ಗೋಖಾಕ್ ನಿಂದ ಕಣಕ್ಕೆ ಇಳಿದಿರುವ ರಮೇಶ್ ಜಾರಕಿಹೊಳಿ ಅವರ ಆಸ್ತಿಯಲ್ಲಿ ಭಾರಿ ಇಳಿಕೆ ಆಗಿದೆ. 2018 ರಲ್ಲಿ ಇವರ ಆಸ್ತಿ 122 ಕೋಟಿ ಇತ್ತು. ಆದರೆ ಒಂದೇ ವರ್ಷದಲ್ಲಿ 32 ಕೋಟಿ ಕಳೆದುಕೊಂಡು 90 ಕೋಟಿಗೆ ಬಂದಿದೆ.

ಸುಧಾಕರ್ ಆಸ್ತಿಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಸುಧಾಕರ್ ಅವರು 2018 ರ ವೇಳೆ ತಮ್ಮ ಬಳಿ 3.37 ಕೋಟಿ ಆಸ್ತಿ ಇರುವುದಾಗಿ ಘೋಷಿಸಿದ್ದರು. ಆದರೆ ಈಗ ಅವರ ಆಸ್ತಿ 2.68 ಕೋಟಿ. ಆದರೆ ಅವರ ಪತ್ನಿಯ ಹೆಸರನಲ್ಲಿನ ಆಸ್ತಿ ಮೌಲ್ಯ 3 ಕೋಟಿ ಏರಿಕೆ ಆಗಿದೆ.

ಬೈರತಿ ಬಸವರಾಜು ಆಸ್ತಿಯಲ್ಲಿ ಹೆಚ್ಚವೆಷ್ಟು?
ಕೆ.ಆರ್.ಪುರಂ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಬೈರತಿ ಬಸವರಾಜು ಅವರ ಆಸ್ತಿಯಲ್ಲಿ ಕೇವಲ ಎರಡು ಕೋಟಿ ಹೆಚ್ಚಳವಾಗಿದೆ. 2018 ರಲ್ಲಿ ಅವರ ಆಸ್ತಿ 91 ಕೋಟಿ ಇತ್ತು. ಈಗ ಅವರ ಆಸ್ತಿ 93 ಕೋಟಿ ಆಗಿದೆ. ಅವರ ಪತ್ನಿಯ ಆಸ್ತಿ ಹೆಚ್ಚಳವಾಗಿದೆ.

ಎಚ್.ವಿಶ್ವನಾಥ್ ಆಸ್ತಿಯಲ್ಲಿ ಹೆಚ್ಚಳ
ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್.ವಿಶ್ವನಾಥ್ ಅವರ ಆಸ್ತಿಯಲ್ಲಿ ಹೆಚ್ಚಿನ ಏರಿಕೆ ಆಗಿಲ್ಲ. 2018 ರಲ್ಲಿ ಅವರ ಆಸ್ತಿ 2.39 ಕೋಟಿ ಇತ್ತು. ಈಗ ಅವರ ಆಸ್ತಿ 2.87 ಕೋಟಿ ಇದೆ. ಅವರ ಪತ್ನಿಯ ಆಸ್ತಿ ಕೆಲವು ಲಕ್ಷಗಳು ಹೆಚ್ಚಾಗಿವೆ.

ನಾರಾಯಣಗೌಡ ಆಸ್ತಿ ಎಷ್ಟು ಹೆಚ್ಚಳವಾಗಿದೆ?
ಕೆ.ಆರ್.ಪುರಂ ನಿಂದ ಸ್ಪರ್ಧಿಸಿರುವ ನಾರಾಯಣಗೌಡ ಅವರ ಆಸ್ತಿ 2018 ರಲ್ಲಿ 11.97 ಕೋಟಿ ಇತ್ತು. ಪತ್ನಿ ಮತ್ತು ಮಕ್ಕಳ ಆಸ್ತಿ ಸೇರಿಸಿ 20.92 ಕೋಟಿ ಆಸ್ತಿ ಇತ್ತು. ಈಗ ಅವರ ಆಸ್ತಿ ಮೌಲ್ಯದಲ್ಲಿ ಇಳಿಕೆ ಆಗಿರುವಂತೆ ನಾಮಪತ್ರದೊಂದಿಗೆ ನೀಡಿರುವ ಆಸ್ತಿ ವಿವರದಲ್ಲಿ ನಮೂದಿಸಲಾಗಿದೆ. ವಿವರದ ಪ್ರಕಾರ ನಾರಾಯಣಗೌಡ ಆಸ್ತಿಯಲ್ಲಿ ನಾಲ್ಕು ಕೋಟಿ ಇಳಿಕೆ ಆಗಿದೆ.

ಶ್ರೀಮಂತ ಪಾಟೀಲ್ ಆಸ್ತಿ ವಿವರ
ಕಾಗವಾಡ ಬಿಜೆಪಿ ಅಭ್ಯರ್ಥಿ 'ಅನರ್ಹ' ಶ್ರೀಮಂತ ಪಾಟೀಲ್ ಹಾಗೂ ಅವರ ಪತ್ನಿಯ ಆಸ್ತಿ 30.45 ಕೋಟಿ ಇದೆ. ಈ ಹಿಂದೆ 2018 ರಲ್ಲೂ ಸಹ ಬಹುತೇಕ ಇಷ್ಟೇ ಆಸ್ತಿಯನ್ನು ಇವರು ಹೊಂದಿದ್ದರು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications