ಒಂದೇ ವೇದಿಕೆಯಲ್ಲಿ ಎಚ್.ಡಿ.ಕುಮಾರಸ್ವಾಮಿ & ಸಿ.ಪಿ.ಯೋಗೇಶ್ವರ್!

ರಾಜಕೀಯ ಅಂದ್ರೆ ಹೇಗೆ? ಅನ್ನೋ ಪ್ರಶ್ನೆ ಪದೇ ಪದೆ ಕೇಳಿಬರುತ್ತದೆ. ಆದರೆ ರಾಜಕೀಯ ಅಂದ್ರೆ ಹೀಗೆ ಅಂತಾ ಯಾರೂ ಉತ್ತರ ಹೇಳಲ್ಲ. ಯಾಕಂದ್ರೆ ರಾಜಕೀಯವೇ ಹಾಗೆ, ಆಗ ಇರುವ ಪರಿಸ್ಥಿತಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದೇ ಆಗಿರುತ್ತದೆ. ಇದೇ ರೀತಿ ಕೆಲ ತಿಂಗಳ ಹಿಂದೆ ಬದ್ಧ ಶತ್ರುಗಳ ರೀತಿ ಹೋರಾಡಿದವರು ಇಂದು ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ & ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆ ಮೇಲೆ ಪ್ರತ್ಯಕ್ಷರಾಗಿದ್ದಾರೆ!

ಹೌದು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮಧ್ಯೆ ಗಾಢವಾದ ರಾಜಕೀಯ ಸೇಡು ಇತ್ತು. ಅದರಲ್ಲೂ ರಾಮನಗರದ ರಾಜಕೀಯದಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕೂಡ ಏರ್ಪಟ್ಟಿತ್ತು. ಆದರೆ ಏನ್ ಮಾಡೋದು ಎಲ್ಲರ ಸಮಯ ಬದಲಾಯಿಸುತ್ತೆ ಕಾಲ ಎಂಬಂತೆ, ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಒಂದೇ ವೇದಿಕೆಯಲ್ಲಿ ಕಾಣಿಸಿದ್ದಾರೆ. ಹಾಗಾದರೆ ಹೀಗೆ ಎಚ್‌ಡಿಕೆ & ಸಿಪಿವೈ ಒಂದೇ ವೇದಿಕೆಯಲ್ಲಿ ಹಾಜರಾಗಿದ್ದು ಯಾವ ಕಾರಣಕ್ಕೆ ಗೊತ್ತಾ?

Discover Why Karnataka Former CM Kumaraswamy And Former Minister C.P. Yogeshwar Shared Stage

ನಾಡಪ್ರಭು ಕೆಂಪೇಗೌಡರ ಉತ್ಸವ ಸಂಭ್ರಮ

ಅಂದಹಾಗೆ ಯುಎಇ ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಉತ್ಸವ, ಅದ್ಧೂರಿಯಾಗಿ ನೆರವೇರಿತು. ಈ ವೇಳೆ ಆದಿಚುಂಚನಗಿರಿ ಮಹಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ನಾಥ ಮಹಾಸ್ವಾಮಿಗಳು ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿದ್ರು. ಇದೇ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ & ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮವನ್ನ ಮಾಜಿ ಸಿಎಂ ಎಚ್‌ಡಿಕೆ ಅವರೇ ಉದ್ಘಾಟನೆ ಮಾಡಿದರು.

ಅದ್ಧೂರಿಯಾಗಿ ನೆರವೇರಿದ ಸಮಾರಂಭ

ಇನ್ನು ಯುಎಇ ಒಕ್ಕಲಿಗರ ಸಂಘದ ಅಧ್ಯಕ್ಷೆ ರಶ್ಮಿ ನಂದಕಿಶೋರ್ ಮತ್ತು ಉಪಾಧ್ಯಕ್ಷ ಹರೀಶ್ ಕೋಡಿ ಸೇರಿ ಸಂಘದ ಪದಾಧಿಕಾರಿಗಳು & ಕನ್ನಡಿಗರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇನ್ನು ದುಬೈನ ಶೇಕ್ ರಶೀದ್ ಆಡಿಟೋರಿಯಂನಲ್ಲಿ ಕೆಂಪೇಗೌಡರ ಉತ್ಸವವನ್ನ ಆಯೋಜನೆ ಮಾಡಲಾಗಿತ್ತು. ಇದರ ಜೊತೆಗೆ, ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಎಚ್‌ಡಿಕೆ ಹಾಗೂ ಮಾಜಿ ಸಚಿವ ಸಿಪಿವೈ ಕಾಣಿಸಿಕೊಂಡಿದ್ದು ಕೂಡ ಎಲ್ಲರ ಗಮನ ಸೆಳೆಯಿತು.

Discover Why Karnataka Former CM Kumaraswamy And Former Minister C.P. Yogeshwar Shared Stage

ಒಟ್ನಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿಯ ಬಗ್ಗೆ ಮಾತುಕತೆ ಇದೀಗ ಜೋರಾಗಿ ನಡೆಯುತ್ತಿದೆ. ಇದೇ ಸಮಯದಲ್ಲಿ, ಮಾಜಿ ಸಿಎಂ ಕುಮಾರಸ್ವಾಮಿ & ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಒಟ್ಟಿಗೆ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಭೇಟಿ ಮುಂದೆ ಇಬ್ಬರ ರಾಜಕೀಯ ಶತ್ರುತ್ವ ಮರೆಯಲು ಕಾರಣವಾಗುತ್ತಾ? ಅಥವಾ ಈಗ ಇರುವ ಪರಿಸ್ಥಿತಿಯೇ ರಾಜ್ಯ ರಾಜಕೀಯದಲ್ಲಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+