BJP-JDS: ಪ್ರಧಾನಿ ಮೋದಿ ಪ್ರಶ್ನಾತೀತರೆ?: ಎಚ್‌ಡಿ ಕುಮಾರಸ್ವಾಮಿ ಪ್ರಶ್ನಿಸಿದ ಗುಂಡೂರಾವ್
ಬೆಂಗಳೂರು, ಜನವರಿ 19: ಲೋಕಸಭಾ ಚುನಾವಣೆ 2024 ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಮಧ್ಯೆ ಬಿಜೆಪಿ ನಿಲುವುಗಳ ಪರವಾಗಿರುವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ದೂರಿದ್ದಾರೆ.
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರವರು ತಮ್ಮ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿಯವರನ್ನು ಆಹ್ವಾನಿಸಿದ್ದಾರೆ. ಎಚ್‌ಡಿ ಕುಮಾರಸ್ವಾಮಿಯವರ ಪ್ರಕಾರ ಇದು ಉದ್ಧಟತನವೇ? ಪ್ರಧಾನಿ ಮೋದಿಯವರು ಪ್ರಶ್ನಾತೀತ ನಾಯಕರೇ? ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಎಚ್‌ಡಿಕೆ ಹಾಗೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಅವರು, ಕೇಂದ್ರದಿಂದ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿರುವುದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಆವರಿಗೆ ಉದ್ಧಟತನದಂತೆ ಕಂಡಿದೆ.
2
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) January 19, 2024
ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯರವರು ತಮ್ಮ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಲು ಮೋದಿಯವರನ್ನು ಆಹ್ವಾನಿಸಿದ್ದಾರೆ.
ನಮ್ಮ ರಾಜ್ಯಕ್ಕೆ ಅನ್ಯಾಯವೆಸಗಿಲ್ಲ ಎಂಬ ದಾಖಲೆ ಇದ್ದರೆ ಪ್ರಧಾನಿಯವರು ಚರ್ಚೆಗೆ ಬರುವ ಎದೆಗಾರಿಕೆ ತೋರಿಸಲಿ.
BJP ಜೊತೆ ಸಂಗ ಬೆಳೆಸಿರುವ HDKಯವರು ಕೂಡ ಮೋದಿಯವರಿಗೆ ಚರ್ಚೆಗೆ ಬರುವಂತೆ…
ಪ್ರಧಾನಿ ಪ್ರಶ್ನಾತೀತರೆ?: ಸಚಿವರ ಪ್ರಶ್ನೆ
ಎಚ್‌ಡಿ ಕುಮಾರಸ್ವಾಮಿ ಅವರ ಈ ನಿಲುವು ಅವರ ನೈತಿಕ ದಿವಾಳಿತನದ ಜೊತೆಗೆ ಅವರಿಗಿರುವ ದೂರದೃಷ್ಟಿ ದೋಷ ಕೂಡ ಬಹಿರಂಗವಾಗಿದೆ. ಅವರ ಪ್ರಕಾರ ನಮ್ಮ ಕರ್ನಾಟಕ ರಾಜ್ಯಕ್ಕೆ ಅನ್ಯಾಯವೆಸಗುತ್ತಿರುವ ಪ್ರಧಾನಿ ಮೋದಿಯವರನ್ನು ಹಾಗೂ ಅವರ ಸರ್ಕಾರವನ್ನು ಪ್ರಶ್ನಿಸಬಾರದೆ.? ಪ್ರಧಾನಿ ಪ್ರಶ್ನಾತೀತರೆ? ಎಂದು ಅವರು ತಿವಿದರು.

ಕರ್ನಾಟಕಕ್ಕೆ ಅನ್ಯಾಯವೆಸಗಿಲ್ಲ ಎಂಬ ದಾಖಲೆ ಇದ್ದರೆ ಪ್ರಧಾನಿಯವರು ಚರ್ಚೆಗೆ ಬರುವ ಎದೆಗಾರಿಕೆ ತೋರಿಸಲಿ. ಬಿಜೆಪಿ ಜೊತೆ ಸಂಗ ಬೆಳೆಸಿರುವ ಎಚ್‌ಡಿ ಕುಮಾರಸ್ವಾಮಿ ಅವರು ಕೂಡ ಪ್ರಧಾನಿ ಮೋದಿಯವರಿಗೆ ಚರ್ಚೆಗೆ ಬರುವಂತೆ ಮನವರಿಕೆ ಮಾಡಲಿ. ಏಕೆಣದರೆ ಪ್ರಧಾನಿ ಮೋದಿಯವರಿಗೂ ಕೂಡ ಈ ರಾಜ್ಯದ ಜನರಿಗೆ ಉತ್ತರಿಸುವ ಉತ್ತರದಾಯಿತ್ವ ಇದೆಯೇ ಎಂದು ಪ್ರಶ್ನಿಸಿದರು.
ಸ್ಥಳೀಯ ಪಕ್ಷದವರೇ ಪ್ರಶ್ನೆ ಮಾಡಬೇಕಿತ್ತು
ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ತೆರಿಗೆ ಅನ್ಯಾಯ ಹಾಗೂ ಅನುದಾನ ದ್ರೋಹದ ಬಗ್ಗೆ, ಎಚ್‌ಡಿ ಕುಮಾರಸ್ವಾಮಿ ಅವರಿಗೂ ವಾಸ್ತವ ಚಿತ್ರಣ ತಿಳಿದಿದೆ. ಎಚ್‌ಡಿ ಕುಮಾರಸ್ವಾಮಿ ಅವರು ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿ ಕೇಂದ್ರದಿಂದ ನಮ್ಮ ರಾಜ್ಯಕ್ಕಾಗುತ್ತಿರುವ ಅನ್ಯಾಯದ ಬಗ್ಗೆ ನಮಗಿಂತಲೂ ಮೊದಲು ಧ್ವನಿ ಎತ್ತಬೇಕಿತ್ತು ಎಂದು ತಿಳಿಸಿದರು.
ರಾಜಕೀಯ ಲಾಭಕ್ಕಾಗಿ ನಮ್ಮ ರಾಜ್ಯದ ಹಿತಾಸಕ್ತಿಯನ್ನೇ ಕಡೆಗಣಿಸಿ, ಪ್ರಧಾನಿ ಮೋದಿಯವರನ್ನು ಪ್ರಶ್ನಿಸಲೇಬಾರದು ಎಂದು ಹೆಚ್‌ಡಿ ಕುಮಾರಸ್ವಾಮಿ ಅವರ ನಿಲುವು ರಾಜ್ಯದ ಜನರ ಬೆನ್ನಿಗೆ ಚೂರಿ ಹಾಕಿದಂತೆ ಎಂದು ದಿನೇಶ್ ಗುಂಡೂರಾವ್ ದೂರಿದರು.












Click it and Unblock the Notifications