ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Digital Rupee: ಡಿ.1ರಿಂದ ಬೆಂಗಳೂರು ಸೇರಿ 4ನಗರದಲ್ಲಿ ಈ-ರೂಪಾಯಿ ಪ್ರಾಯೋಗಿಕ ಬಳಕೆ ಆರಂಭ

|
Google Oneindia Kannada News

ಬೆಂಗಳೂರು ನವೆಂಬರ್ 30: ಭಾರತೀಯ ರಿಸವ್ ಬ್ಯಾಂಕ್ (ಆರ್‌ಬಿಐ) ಬೆಂಗಳೂರು ಸೇರಿದಂತೆ ದೇಶದ ನಾಲ್ಕು ನಗರಗಳಲ್ಲಿ ಗುರುವಾರದಿಂದ (ಡಿ.1) ಪ್ರಾಯೋಗಿಕವಾಗಿ ಡಿಜಿಟಲ್ ರೂಪಾಯಿ ಬಳಕೆಯನ್ನು ಆರಂಭಿಸುವುದಾಗಿ ತಿಳಿಸಿದೆ.

ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ಡಿಜಿಟಲ್ ರೂಪಾಯಿಯನ್ನು ಕಳೆದ ನವೆಂಬರ್ 1ರಿಂದ ಸಗಟು ವ್ಯವಹಾರಗಳಿಗೆ ಪ್ರಾಯೋಗಿಕವಾಗಿ ಬಳಕೆ ಮಾಡಿತ್ತು. ಇದೀಗ ಡಿಸೆಂಬರ್ 1ರಿಂದ ದೇಶದ ನಾಲ್ಕು ನಗರಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಅನುಮತಿಸಿದೆ.

ಇಂದಿನಿಂದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್ ಕರೆನ್ಸಿ ಲಭ್ಯ: ಆರ್‌ಬಿಐ ಮಾಹಿತಿ ಇಂದಿನಿಂದ 9 ಬ್ಯಾಂಕ್‌ಗಳಲ್ಲಿ ಡಿಜಿಟಲ್ ಕರೆನ್ಸಿ ಲಭ್ಯ: ಆರ್‌ಬಿಐ ಮಾಹಿತಿ

ಈ ಮೂಲಕ ಡಿಜಿಟಲ್ ಭಾರತದ ಪರಿಕಲ್ಪನೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಆರ್‌ಬಿಐ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಚಿಲ್ಲರೆ ವಹೀವಾಟುಗಳ ಆಯ್ದ ವ್ಯಾಪಾರಿ ಮತ್ತು ಗ್ರಾಕರು ಸಹಿತ ಗುರುವಾರದಿಂದ ಡಿಜಿಟಲ್ ರೂಪಾಯಿ ಬಳಸಿದ್ದಾರೆ.

Digital Rupee Trial Use Start From Dec.1 In 4 Cities Including Bengaluru RBI Said

ಈ ಚಿಲ್ಲರೆ ಗ್ರಾಹಕರು ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂಪಾಯಿ ಬಳಕೆಯಲ್ಲಿ ಎರಡು ಹಂತಗಳಂತೆ ಒಟ್ಟು ಎಂಟು ಬ್ಯಾಂಕ್‌ಗಳು ಸೇವೆ ನೀಡಲಿವೆ. ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಐಸಿಐಸಿಐ, ಐಡಿಎಫ್‌ಸಿಫಸ್ಟ್ ಹಾಗೂ ಯೆಸ್ ಬ್ಯಾಂಕ್ ಸದ್ಯಕ್ಕೆ ಪಾಲ್ಗೊಳ್ಳಲಿವೆ. ನಂತರ ಬ್ಯಾಂಕ್ ಆಪ್‌ ಬರೋಡಾ, ಭಾರತೀಯ ಯೂನಿಯನ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಈ ಯೋಜನೆಯಡಿ ಸೇವೆ ನೀಡಲಿವೆ.

ಕಾನೂನು ಬದ್ಧ ಕರೆನ್ಸಿಯಾಗಿರುವ ಈ ಡಿಜಿಟಲ್ ರೂಪಾಯಿ ಟೋಕನ್ ರೂಪದಲ್ಲಿರುತ್ತದೆ. ಇವುಗಳನ್ನು ಮೇಲೆ ತಿಳಿಸಿದ ಬ್ಯಾಂಕ್‌ಗಳಲ್ಲಿ ವಿತರಿಸಲಾಗುತ್ತದೆ. ಡಿಜಿಟಲ್ ವ್ಯಾಲೆಟ್ ಮೂಲಕ ಇಬ್ಬರು ಗ್ರಾಹಕರು ಮತ್ತುವ್ಯಾಪಾರಿಗಳು ಪಾವತಿಸಬಹುದು. ರೂಪಾಯಿ ಪಡೆಯಲು ವ್ಯಾಪಾರಿಯು ಸ್ಥಳದಲ್ಲಿ ಪ್ರದರ್ಶಿಸುವ ಕ್ಯೂಆರ್ ಸಹಕಾರಿಯಾಗಲಿದೆ. ಬ್ಯಾಂಕ್‌ಗಳು ಕರೆನ್ಸಿ ನೋಟು ಹಾಗೂ ನಾಣ್ಯಗಳ ರೀತಿಯಲ್ಲಿ ಈ ಡಿಜಿಟಲ್ ರೂಪಾಯಿ ಇರುತ್ತದೆ. ಈ ರೂಪಾಯಿಯನ್ನು ಠೇವಣಿ ಸಹ ಇಡಬಹುದಾಗಿದೆ.

ಸದ್ಯಕ್ಕೆ ಕರ್ನಾಟಕದ ಬೆಂಗಳೂರು ಸೇರಿದಂತೆ ,ಮುಂಬೈ, ನವದೆಹಲಿ ಹಾಗೂ ಭುವನೇಶ್ವರಗಳಲ್ಲಿ ಬಳಕೆಗೆ ಅವಕಾಶ ನೀಡಿರುವ ಆರ್‌ಬಿಐ ಅಹಮದಾಬಾದ್, ಗ್ಯಾಂಗ್ಯಾಕ್, ಇಂಧೂರ್, ಗುವಾಹಟಿ, ಕೊಚ್ಚಿ, ಹೈದರಾಬಾದ್, ಪಾಟ್ನಾ, ಲಕ್ನೋ ಮತ್ತು ಶಿಮ್ಲಾಗಳಿಗೆ ವಿಸ್ತರಣೆ ಆಗಲಿದೆ.

Digital Rupee Trial Use Start From Dec.1 In 4 Cities Including Bengaluru RBI Said

ವಂಚನೆ ತಪ್ಪಿಸಲು ಈ ರೂಪಾಯಿ ಸಹಕಾರಿ

ಭಾರತ ಸರ್ಕಾರ ಕ್ರಿಪ್ಟೋ ಕರೆನ್ಸಿಯಂತೆ ಡಿಜಿಟಲ್ ಕರೆನ್ಸಿ ಸಗಟು ಮತ್ತು ಚಿಲ್ಲರೆ ವ್ಯಾಪಾರ ವಹೀವಾಟಿಗೆ ಅನುಕೂಲವಾಗುವಂತೆ ಬಳಕೆಗೆ ತಂದಿದೆ. ಇದರ ಬಳಕೆಗೆಂದೆ ಈ ಪೈಲೆಟ್ ಯೋಜನೆ ಜಾರಿಗೆ ತಂದಿದೆ. ಯೋಜನೆಯಡಿ ಪ್ರಾಯೋಗಿಕ ಹಂತದಲ್ಲಿ ಬಳಕೆಗೆ ನೋಡಿಕೊಂಡು ಪೈಲಟ್‌ಗಳಲ್ಲಿ ಈ ರೂಪಾಯಿ ಟೋಕನ್ ಭಿನ್ನತೆ, ವೈಶಿಷ್ಟತೆ ಹಾಗೂ ಅಪ್ಲಿಕೇಷನ್‌ಗಳನ್ನು ಪರೀಕ್ಷಿಸಲಾಗುವುದು ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಡಿಜಿಟಲ್ ಕರೆನ್ಸಿಯ ಬಳಕೆಯಿಂದ ಹಣದಲ್ಲಾಗುವ ವಂಚನೆಯನ್ನು ತಪ್ಪಿಸಬಹುದು. ಕರೆನ್ಸಿ ನಿರ್ವಹಣೆ ವ್ಯವಸ್ಥೆಯಲ್ಲಿ ಇದು ಹೆಚ್ಚು ಪಾರದರ್ಶಕತೆ ಹೊಂದಿರಲಿದೆ. 2018ರಿಂದ 2020ರ ಅವಧಿಯಲ್ಲಿ ಭಾರತೀಯ ಬ್ಯಾಂಕುಗಳು ವಂಚನೆಯಿಂದಾಗೇ 4ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈಡಿಜಿಟಲ್ ರೂಪಾಯಿಗೆ ಜಾಗತಿಕ ಮಾನ್ಯತೆ ಇರುತ್ತದೆ. ಈ ಹಣದ ವಹೀವಾಟಿಗೆ ಬ್ಯಾಂಕ್ ಖಾತೆ ಇರಬೇಕೆಂದಿಲ್ಲ. ರಿಯಲ್ ಟೈಮಿನಲ್ಲಿ ವಹೀವಾಟು ನಡೆಯುವುದರಿಂದ ಟ್ರ್ಯಾಕಿಂಗ್ ಸುಲಭವಾಗಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ ತಿಳಿಸಿದೆ.

English summary
Digital Rupee Trial use: E Rupee trail use start from December 1st in 4 cities including Bengaluru Reserve Bank of India (SBI) Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X