Dharwad: ಕಿರುಕುಳ ಸಹಿಲಾಗದೇ ಪಂಚಾಯಿತಿ ಪಿಡಿಒ ಆತ್ಮಹತ್ಯೆಗೆ ಯತ್ನ: Video
ಧಾರವಾಡ, ನವೆಂಬರ್ 29: ಮಾಹಿತಿ ಹಕ್ಕು ಕಾರ್ಯಕರ್ತನೋರ್ವ ಕಿರುಕುಳ ಕೊಡತಾ ಇದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯೊಬ್ಬರು (PDO Suicide) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ಬುಧವಾರ ಧಾರವಾಡ ಜಿಲ್ಲೆಯ ಯರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಸಾವಿಗೂ ಮುನ್ನ ಪಿಡಿಒ ಮಾಡಿದ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
ಯರಿಕೊಪ್ಪ ಗ್ರಾಮದ ಪಿಡಿಒ ನಾಗರಾಜ್ ಅವರು ಕಿರುಕುಳ ತಾಳಲಾರದೇ ಇಲಿ ಪಾಷಾನಾ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ ಅಧಿಕಾರಿ. ಇವರು ಆತ್ಮಹತ್ಯೆ ಯತ್ನಕ್ಕೂ ಮೊದಲು ವಿಡಿಯೋ ಮಾಡಿ ತಮ್ಮ ಸಾವಿಗೆ ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. ವಿಡಿಯೋದಲ್ಲಿ ವಿಷಯ ಕುಡಿಯುವ ದೃಶ್ಯ ಸೆರೆಯಾಗಿದೆ.

ಈ ಪಿಡಿಒ ಅಧಿಕಾರ ನಾಗರಾಜ್ ವಿಡಿಯೋ ಕಾಲ್ ನಲ್ಲಿ ಮಾಹಿತಿ ಹಕ್ಕು ಕಾರ್ಯಕರ್ತ ಮಲ್ಲಿಕಾರ್ಜುನ ರೊಟ್ಟಿಗವಾಡ ಹೆಸರು ಹೇಳಿದ್ದಾರೆ. ತಾವು ಈ ಮಲ್ಲಿಕಾರ್ಜುನ ರೊಟ್ಟಿಗವಾಡ ಎಂಬುವವರಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದಾಗಿ ಅಧಿಕಾರಿ ಹೇಳಿಕೊಂಡಿದ್ದಾರೆ.
ಇತರ ಅಧಿಕಾರಿಗಳಿಗೂ ಕಿರುಕುಳ
ಮಲ್ಲಿಕಾರ್ಜುನ ರೊಟ್ಟಿಗವಾಡ ಅವರು ಕೇವಲ ನನಗೆ ಮಾತ್ರವಲ್ಲದೇ ಬಹಳ ಅಧಿಕಾರಿಗಳಿಗೆ ಇದೇ ರೀತಿ ಕಿರುಕುಳ ಕೊಟ್ಟಿದ್ದಾರೆ. ನನಗೆ ವ್ಯಾಪ್ತಿಯ ಅಲ್ಲದ, ನಾನು ಮಾಡಲು ಆಗದೇ ಕೆಲಸಗಳನ್ನು ಮಾಡುವಂತೆ ಅವರು ಒತ್ತಾಯಿಸಿದ್ದಾರೆ. ಅವರಿಂದ ನಾನು ನಿರಂತರ ಕಿರುಕುಳ ಅನುಭವಿಸಿದ್ದೇವೆ ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಕಿರುಕುಳ ತಾಳಲಾರದೇ ನನ್ನ ಜೀವನ ಇಲ್ಲಿಗೆ ಎಂಡ್ ಮಾಡಲು ತಿರ್ಮಾನಿಸಿದ್ದೇನೆ. ಸದ್ಯ ವಿಷ ಕುಡಿಯುತ್ತಿದ್ದೇನೆ I am SORRY ಎಂದು ವಿಡಿಯೋ ಕಾಲ್ ಮೂಲಕ ಸ್ನೇಹಿತರಿಗೆ ತಿಳಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಪಿಡಿಒ ಅಧಿಕಾರಿ ತಾನು ಮಾಡಿದ ವಿಡಿಯೋ ಅನ್ನು ಅನೇಕರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಪಿಡಿಒ ದಾಖಲು: ಪೊಲೀಸರ ಬೇಟಿ
ವಾಟ್ಸ್‌ಪ್‌ನಲ್ಲಿ ಬಂದ ಸ್ನೇಹಿತ ಆತ್ಮಹತ್ಯೆ ವಿಡಿಯೋ ನೋಡಿದ ಸ್ನೇಹಿತರು ಎಚ್ಚೆತ್ತುಕೊಂಡು ಪಿಡಿಒ ನಾಗರಾಜನನ್ನು ಹುಡುಕಿಕೊಂಡು ಬಂದ ಕೂಡಲೇ ಆಸ್ಪತ್ರೆಗೆ ಸೇರಿದ್ದಾರೆ.
ಧಾರವಾಡ-ಬೆಳಗಾವಿ ರಸ್ತೆಯಲ್ಲಿವ ಪಕ್ಕದಲ್ಲಿ ಆತ್ಮಹತ್ಯೆಗೆ ಯತ್ನ ನಡೆಸಿರುವುದು ಗೊತ್ತಾಗಿದೆ. ಸ್ನೇಹಿತರ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದ ವೈದ್ಯರು ಅಧಿಕಾರಿ ಆರೋಗ್ಯ, ಚಿಕಿತ್ಸಾ ಸ್ಪಂದನೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ. ಸದ್ಯ ಈ ಪ್ರಕರಣ ನಿಮಿತ್ತ ಧಾರವಾಡ ಉಪನಗರ ಠಾಣೆ ಪೋಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವೈದ್ಯಾಧಿಕಾರಿಗಳ ಬಳಿಕ ಪಿಡಿಒ ಅಧಿಕಾರಿ ಆರೋಗ್ಯ ಕುರಿತು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )












Click it and Unblock the Notifications