ವಂದೇ ಭಾರತ್‌ ಎಕ್ಸ್‌ ಪ್ರೆಸ್‌ : ಹುಬ್ಬಳ್ಳಿ, ಯಶವಂತಪುರ ವೇಳಾಪಟ್ಟಿ ಪರಿಷ್ಕರಣೆ

ಹುಬ್ಬಳ್ಳಿ, ಅಕ್ಟೋಬರ್‌ 06: ಧಾರವಾಡ - ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಣೆಯೂ ಅಕ್ಟೋಬರ್‌ 7 ರಿಂದಲೇ ಜಾರಿಗೆ ಬರಲಿದೆ.

ಹೌದು, ಪ್ರಯಾಣಿಕರ ಅನುಕೂಲಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗ ತಿಳಿಸಿದೆ. ಇನ್ನೂ ಪರಿಷ್ಕೃತ ವೇಳೆಯು ಹುಬ್ಬಳ್ಳಿ ಹಾಗೂ ಯಶವಂತಪುರ ನಿಲ್ದಾಣಗಳಲ್ಲಿ ಮಾತ್ರ ಅನ್ವಯವಾಗುತ್ತದೆ.

dharwad-bengaluru-vande-bharat

ಧಾರವಾಡ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ಸಮಯದಲ್ಲಿ ಬದಲಾವಣೆಯಾಗಿದೆ

IRCTC ಬುಕಿಂಗ್ ವೆಬ್‌ಸೈಟ್‌ನಲ್ಲಿ ನವೀಕರಿಸಿದ ವೇಳಾಪಟ್ಟಿಯ ಪ್ರಕಾರ, 20661 ಬೆಂಗಳೂರು ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಸ್ತುತ ಆಗಮನದ ಸಮಯ 11:30 ಗಂಟೆಗಳ ಬದಲಿಗೆ ಅಕ್ಟೋಬರ್ 7, 2023 ರಿಂದ 11:00 ಗಂಟೆಗೆ SSS ಹುಬ್ಬಳ್ಳಿ ಜಂಕ್ಷನ್‌ಗೆ ಆಗಮಿಸುತ್ತದೆ.

ರೈಲು ಸಂಖ್ಯೆ 20662 ಧಾರವಾಡ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಪ್ರಸ್ತುತ ಆಗಮನ ಸಮಯ 07:13 ಗಂಟೆಗಳ ಬದಲಿಗೆ ಅಕ್ಟೋಬರ್ 7, 2023 ರಿಂದ 06:58 ಗಂಟೆಗೆ ಯಶವಂತಪುರ ಜಂಕ್ಷನ್‌ಗೆ ಆಗಮಿಸಲಿದೆ. ಈ ರೈಲುಗಳ ಸಮಯ ಇತರ ಎಲ್ಲಾ ನಿಲ್ದಾಣಗಳಲ್ಲಿ ಬದಲಾವಣೆಯಾಗುವುದಿಲ್ಲ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಷ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+