ಧರ್ಮಸ್ಥಳದ ಸೌಜನ್ಯ ಬಗ್ಗೆ ಮಾತನಾಡಿದ್ದ ಯುಟ್ಯೂಬರ್‌ಗೆ ಜೀವ ಭಯ... Sowjanya Case
ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯೇ ಎದ್ದಿದ್ದು, ಸೌಜನ್ಯ ರೇಪ್ & ಮರ್ಡರ್ ಕೇಸ್ ಕುರಿತು ಮಾತನಾಡಿದ್ದ ಕನ್ನಡದ ಖ್ಯಾತ ಯುಟ್ಯೂಬರ್‌ಗೆ ಜೀವ ಭಯ ಕಾಡುತ್ತಿದೆ. ಈ ಬಗ್ಗೆ ಖುದ್ದು ಯುಟ್ಯೂಬರ್ ಗಂಭೀರ ಆರೋಪ ಮಾಡಿದ್ದು, ಕರ್ನಾಟಕದಲ್ಲಿ ಹೊಸ ತಲ್ಲಣ ಸೃಷ್ಟಿಯಾಗಿದೆ.
ಕರ್ನಾಟಕದಲ್ಲಿ ಲಕ್ಷಾಂತರ ಕೊಲೆ ಕೇಸ್‌ಗಳು ನಡೆದು ಹೋಗಿವೆ, ಆದರೆ ಸೌಜನ್ಯ ರೇಪ್ & ಮರ್ಡರ್ ಕೇಸ್ ಮಾತ್ರ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ಇದೇ ಕೇಸ್ ಕುರಿತು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಇಂತಹ ಸಮಯದಲ್ಲೇ ಕನ್ನಡದ ಖ್ಯಾತ ಯುಟ್ಯೂಬರ್ ಈ ಬಗ್ಗೆ ವಿಡಿಯೋ ಒಂದನ್ನು ಮಾಡಿದ್ದರು. ಅಲ್ಲದೆ ಈ ವಿಚಾರದಲ್ಲಿ ದೊಡ್ಡ ದೊಡ್ಡವರ ವಿರುದ್ಧ ಆರೋಪ ಮಾಡಿದ್ದರು. ಹೀಗೆ, ದೊಡ್ಡವರ ಬಗ್ಗೆ ಆರೋಪ ಮಾಡಿದ ಬೆನ್ನಲ್ಲೇ ಜೀವ ಬೆದರಿಕೆ ಕರೆಗಳು ಬರುತ್ತಿವೆಯಂತೆ!

ಕನ್ನಡದ ಖ್ಯಾತ ಯುಟ್ಯೂಬರ್‌ಗೆ ಜೀವ ಭಯ
ಹೌದು, ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಕೇಸ್ ಕನ್ನಡ ನಾಡಿನಲ್ಲಿ ನಡೆದ ಅತ್ಯಂತ ದೊಡ್ಡ ದುರಂತಗಳ ಪೈಕಿ ಒಂದಾಗಿದೆ. ಹೀಗಿದ್ದಾಗ ಸೌಜನ್ಯ ರೇಪ್ & ಮರ್ಡರ್ ಕೇಸ್ ಬಗ್ಗೆ ದೊಡ್ಡ ದೊಡ್ಡ ಹೋರಾಟಗಳು ಕೂಡ ನಡೆದಿವೆ. ಇಂತಹ ಸಮಯದಲ್ಲೇ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಇದರಲ್ಲಿ ತಳುಕು ಹಾಕಿಕೊಂಡ ಕಾರಣಕ್ಕೆ, ಸಮೀರ್ ಎಂಬ ಯುಟ್ಯೂಬರ್ ಈ ಬಗ್ಗೆ ತನಿಖಾ ವಿಡಿಯೋ ಒಂದನ್ನ ಅಪ್ಲೋಡ್ ಮಾಡಿದ್ದರು. ಆ ವಿಡಿಯೋ ವೈರಲ್ ಆದ ನಂತರ ಸಮೀರ್ ಮನೆ ವಿಳಾಸ & ಸಮೀರ್ ಮೊಬೈಲ್ ನಂಬರ್ ಕೂಡ ಲೀಕ್ ಆಗಿದೆಯಂತೆ. ಅಲ್ಲದೆ ಸಮೀರ್‌ಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೂಡ ಕೇಳಿ ಬಂದಿದೆ.
ಫೋನ್ ಕಾಲ್ ಮಾಡಿ ಬೆದರಿಕೆ...
ಈ ಬಗ್ಗೆ ವಿಡಿಯೋ ಮಾಡಿರುವ ಯುಟ್ಯೂಬರ್ ಸಮೀರ್, ನನಗೆ ಕರೆ ಮಾಡಿ ಬೆದರಿಕೆಯನ್ನ ಹಾಕಲಾಗುತ್ತಿದೆ. ಯಾವ ಕ್ಷಣದಲ್ಲಿ ನನಗೆ ಏನು ಬೇಕಾದರೂ ಆಗಬಹುದು ಎಂದು ಆತಂಕ ಹೊರ ಹಾಕಿದ್ದಾರೆ. ಇನ್ನು ಸಮೀರ್‌ಗೆ ಎದುರಾಗಿರುವ ಈ ಪರಿಸ್ಥಿತಿ & ಆತಂಕ ಕಂಡಿರುವ ಕನ್ನಡಿಗರು ಒಗ್ಗಟ್ಟಾಗಿದ್ದು, ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ & ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರಿಗೆ ಸೂಕ್ತ ಭದ್ರತೆ ಒದಗಿಸಲು ಮನವಿ ಮಾಡುತ್ತಿದ್ದಾರೆ. ಹಾಗೇ ಈ ವಿಚಾರದಲ್ಲಿ ಏನಾದರೂ ಎಡವಟ್ಟು ನಡೆದರೆ ಪರಿಣಾಮ ನೆಟ್ಟಗೆ ಇರಲ್ಲ, ಅಂತಾ ಕೂಡ ಎಚ್ಚರಿಕೆ ಸಂದೇಶ ರವಾನೆ ಮಾಡುತ್ತಿದ್ದಾರೆ ಕನ್ನಡಿಗರು.
ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಸರ್ಕಾರ ಯುಟ್ಯೂಬರ್ ಸಮೀರ್‌ಗೆ ಈ ವಿಚಾರದಲ್ಲಿ ಸೂಕ್ತ ಭದ್ರತೆ ನೀಡಬೇಕು. ಯುಟ್ಯೂಬರ್ ಸಮೀರ್‌ಗೆ ಧರ್ಮ ನಿಂದನೆ ಮಾಡುತ್ತಿರುವ ವ್ಯಕ್ತಿಗಳನ್ನು ಕೂಡ ಕೂಡಲೇ ಬಂಧಿಸಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಹೀಗಾಗಿ ಈ ವಿಚಾರ ಭಾರಿ ದೊಡ್ಡ ತಿರುವು ಪಡೆಯುವ ನಿರೀಕ್ಷೆ ಇದೆ. ಹಾಗೇ ಈ ವಿಚಾರದಲ್ಲಿ ಯುಟ್ಯೂಬ್ ಕಮ್ಯುನಿಟಿ ಕೂಡ ಒಗ್ಗಟ್ಟು ಪ್ರದರ್ಶನ ಮಾಡುತ್ತಿದೆ.












Click it and Unblock the Notifications