500 ವರ್ಷ ಬಳಿಕ ಅಯೋಧ್ಯೆಯಲ್ಲಿ ಮರ್ಯಾದ ಪುರುಷ ಶ್ರೀರಾಮನ ದೇಗುಲ ಉದ್ಘಾಟನೆ: ಹನುಮಂತ ಹುಟ್ಟಿದ್ದ ಊರಿನಲ್ಲೂ ಸಂಭ್ರಮವೋ ಸಂಭ್ರಮ!

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿದ್ದು, ಎಲ್ಲೆಲ್ಲೂ ಸಂಭ್ರಮ ಮೇಳೈಸಿದೆ. ಇನ್ನೇನು ಕೆಲವೇ ಗಂಟೆಯಲ್ಲಿ ಭಾರತೀಯರು ಅದರಲ್ಲೂ ಶತಕೋಟಿ ರಾಮ ಭಕ್ತರ ಕನಸು ಈಡೇರಲಿದೆ. ಹೀಗಿದ್ದಾಗಲೇ ಕನ್ನಡಿಗರ ನೆಲ ಮತ್ತು ಹನುಮಂತನ ಹುಟ್ಟೂರು ಕರ್ನಾಟಕದಲ್ಲಿ ಕೂಡ ಸಂಭ್ರಮ ಈಗ ಡಬಲ್ ಆಗಿದೆ. ಹನುಮಂತನ ಭಕ್ತರು ರಾಮನಿಗೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀರಾಮ ಮತ್ತು ಹನುಮಂತರ ನಡುವೆ ಅದೆಷ್ಟು ಗಾಢವಾದ ಬಂಧವಿತ್ತು ಎಂಬ ವಿಚಾರ ಇಡೀ ಜಗತ್ತಿಗೆ ಗೊತ್ತಿದೆ. ಎಲ್ಲಿ ರಾಮನೋ ಅಲ್ಲಿ ಹನುಮನು ಎಂಬ ಮಾತು ಜನಜನಿತ. ಹೀಗಿದ್ದಾಗ ಹನುಮಂತನ ಜನ್ಮಸ್ಥಳ ಕರ್ನಾಟಕ. ಹನುಮಂತ ಜನ್ಮಸ್ಥಳ ಅಂಜನಾದ್ರಿ ರಾಮಾಯಣದಲ್ಲಿ ಭಾರಿ ಪರಿಣಾಮ ಬೀರಿತ್ತು. ಶ್ರೀರಾಮನು ಬಲಶಾಲಿ, ಹನುಮಂತನ ತಾಯಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಸ್ಥಳ ಇದೇ ಆಗಿತ್ತು. ಹೀಗೆ ಶ್ರೀರಾಮ ಹಾಗೂ ಕನ್ನಡಿಗರ ನಡುವೆ ಅವಿನಾಭಾವ ಸಂಬಂಧ ಇದೆ. ಹೀಗಾಗಿ ಅಂಜನಾದ್ರಿಯಲ್ಲಿ ಈಗ ಸಂಭ್ರಮವು ಜೋರಾಗಿದೆ.

Devotees Of Kishkinda Birthplace Of Hanuman Is Very Happy About Ayodhya Shri Ram Temple Inauguration

ಕಲಾವಿದನ ಕುಂಚದಲ್ಲಿ ಶ್ರೀರಾಮ

ಹೌದು, ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಸಂಭ್ರಮ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ. ಹೀಗಿದ್ದಾಗ ಭಾರತೀಯರು ಕೂಡ ತಮ್ಮದೇ ಸೇವೆ ನೀಡುತ್ತಾ, ಶ್ರೀರಾಮ ಮಂದಿರಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಅದೇ ರೀತಿಯಾಗಿ ಹುಬ್ಬಳ್ಳಿ ಕಲಾವಿದ ಹನುಮಂತ ಹುಟ್ಟಿದ ಊರಿನಲ್ಲಿ ಶ್ರೀರಾಮನ ಸೃಷ್ಟಿಸಿದ್ದಾನೆ. ತನ್ನ ಕೈಚಳಕದ ಮೂಲಕ ಶ್ರೀರಾಮನ ರಚನೆ ಮಾಡಿ ಭಕ್ತಿ ಮೆರೆದಿದ್ದಾರೆ.

ರಾಮನ ಭಕ್ತಿ ಮೆರೆದ ಕಲಾವಿದ

ಅಷ್ಟಕ್ಕೂ ಹುಬ್ಬಳ್ಳಿಯ ಬ್ಯಾಹಟ್ಟಿ ಗ್ರಾಮದ ಕಲಾವಿದನ ಕೈಚಳಕದಲ್ಲಿ ಈಗ ಶ್ರೀರಾಮ ಮೂಡಿ ಬಂದಿರುವ ರೀತಿ ಎಲ್ಲರಿಗೂ ಇಷ್ಟವಾಗಿದೆ. ಹನುಮಂತನ ಬೃಹತ್ ದೇಗುಲ ಇರುವಂತಹ, ಅಂಜನಾದ್ರಿ ಬೆಟ್ಟದ ಮೇಲೆ ಕಲಾವಿದರಿಂದ ರಾಮನ ಚಿತ್ರ ಮೂಡಿ ಬಂದಿದೆ. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ, ಈ ಸೇವೆ ಸಲ್ಲಿಸಿದ್ದಾರೆ ಕಲಾವಿದ ಸಚಿನ್ ಸಿಂಗಮನವರ ಅವರು. ಯುವಕ ಸಚಿನ್ ಸಿಂಗಮನವರ ಸಾಧನೆಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

ಸಚಿನ್ ಸಿಂಗಮನವರ ಅವರಿಗೆ ಮತ್ತೊಬ್ಬ ಕಲಾವಿದ ಕೂಡ ಸಾಥ್ ನೀಡಿರುವುದು ಮತ್ತೊಂದು ವಿಶೇಷ. ಒಟ್ಟು 16 ಅಡಿ ಉದ್ದ, 12 ಅಡಿ ಅಗಲದ ಚಿತ್ರ ಬಿಡಿಸಿದ ಕಲಾವಿದರ ಈ ಶ್ರೀರಾಮನ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೇ ಮತ್ತೊಂದ್ಕಡೆ ಕನ್ನಡಿಗರ ನೆಲಕ್ಕೂ, ರಾಮಾಯಣ ಕಾಲಘಟ್ಟಕ್ಕೂ ಇರುವ ಸಂಬಂಧದ ಬಗ್ಗೆ ಚರ್ಚೆ ಜೋರಾಗಿದೆ. ಹಾಗೇ ಕನ್ನಡಿಗರು ಇದೇ ಕ್ಷಣವನ್ನು ಸಂಭ್ರಮಿಸಿದ್ದಾರೆ.

Devotees Of Kishkinda Birthplace Of Hanuman Is Very Happy About Ayodhya Shri Ram Temple Inauguration

ಮಂದಿರ ಉದ್ಘಾಟನೆಗೆ ಕ್ಷಣಗಣನೆ!

ಶ್ರೀರಾಮ ಮಂದಿರ ಉದ್ಘಾಟನೆಗೆ ಕೆಲ ಗಂಟೆಗಳು ಬಾಕಿ ಇದೆ. ಹೀಗಿದ್ದಾಗ ಕನ್ನಡ ನಾಡಿನ ನೆಲ ಕಿಷ್ಕಿಂಧೆಯಲ್ಲಿ ರಾಮನ ಅನೇಕ ಹೆಜ್ಜೆ ಗುರುತು ಇವೆ. ಅಯೋಧ್ಯೆಯಿಂದ ಪತ್ನಿ ಹುಡುಕುತ್ತಾ ಹೊರಟಿದ್ದ ಪ್ರಭು ಶ್ರೀರಾಮ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ತುಂಗಭದ್ರಾ ನದಿ ಪ್ರದೇಶ ಕಿಷ್ಕಿಂಧೆ ಭಾಗಕ್ಕೆ ಆಗಮಿಸಿದ್ದರು. ಆಗ ಅಲ್ಲಿಯೇ ಹನುಮಂತನ ಭೇಟಿ ಆಗಿರುತ್ತದೆ. ಆ ನಂತರ ಲಂಕೆ ಮೇಲೆ ದಾಳಿ ಮಾಡಿ ರಾವಣನ ಸೋಲಿಸಿ ಸೀತೆ ಬಿಡಿಸಿಕೊಂಡು ಬರುವಲ್ಲಿ, ಹನುಮಂತ ಮತ್ತು ಕಿಷ್ಕಿಂಧೆ ವಾನರ ಸೇನೆ ಯಶಸ್ವಿಯಾಗಿತ್ತು.

ಹನುಮಂತನ ತಾಯಿಯಿಂದ ಆಶೀರ್ವಾದ

ಇದೇ ಕಾರಣಕ್ಕೆ ಲಂಕೆಯಿಂದ ಮರಳುವಾಗ ಶ್ರೀರಾಮ ನೇರವಾಗಿ ಅಯೋಧ್ಯೆ ಕಡೆಗೆ ಹೋಗದೆ, ಮರಳಿ ಅಂಜನಾದ್ರಿಗೆ ಬಂದಿದ್ರು ಎಂಬ ಮಾಹಿತಿಯು ಇದೆ. ಅಂಜನಾದ್ರಿಯಲ್ಲಿ ಹನುಮಂತನ ತಾಯಿ ಅಂಜನಾ ದೇವಿ ಅವರ ಭೇಟಿ ಮಾಡಿ ಆಶೀರ್ವಾದ ಪಡೆದು ಕೃತಜ್ಞತೆ ಸಲ್ಲಿಸಿದ್ದರು ರಾಮ ಎಂಬ ಮಾಹಿತಿ ಇದೆ. ಹನುಮಂತ ಹಾಗೂ ವಾನರ ಸೇನೆ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ ತೆರಳಿದ್ದ ಮರ್ಯಾದ ಪುರುಷನ ಕುರುಹು ಇನ್ನೂ ಹಾಗೇ ಇದೆ ಈ ಭಾಗದಲ್ಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+