Hasanamba Temple: ಹಾಸನಾಂಬೆ ದೇವಿ ದರ್ಶನಕ್ಕೆ ನಿಂತವರಿಗೆ ಕರೆಂಟ್ ಶಾಕ್! ಮಹಿಳೆಯರ ನರಳಾಟ
ಹಾಸನ, ನವೆಂಬರ್ 10: ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲಕ್ಕೆ ಶುಕ್ರವಾರದಂದು ಭಕ್ತ ಸಾಗರವೇ ಹರಿದು ಬರುತ್ತಿದೆ. ಹಾಸನಾಂಬೆ ದೇಗುಲ ಬಳಿ ಸರತಿ ಸಾಲಿನಲ್ಲಿ ನಿಂತ ಮಹಿಳೆಯರಿಗೆ ವಿದ್ಯುತ್ ಅವಘಡದಿಂದ ಕರೆಂಟ್ ಶಾಕ್ ಹೊಡೆದು ನೂಕು ನುಗ್ಗಲು ಆದ ಘಟನೆ ನಡೆದಿದೆ.
ಹೌದು, ಸರತಿ ಸಾಲಿನಲ್ಲಿ ಹಾಸನಾಂಬೆಯ ದರ್ಶನಕ್ಕೆ ನಿಂದ ಮಹಿಳೆಯರಿಗೆ ಕರೆಂಟ್ ಶಾಕ್ ಹೊಡೆದಿದ್ದು, ಮಹಿಳೆಯರ ನರಳಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನೂ ಸರತಿ ಸಾಲಿನಲ್ಲಿ ನಿಂತ ಮಹಿಳೆಯವರಿಗೆ ವಿದ್ಯುತ್ ಪ್ರವಹಿಸಿದ್ದು, ಗಾಬರಿಗೊಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನೂ ಕೆಲವರಿಗೆ ಕರೆಂಟ್ ಶಾಕ್ ಆಗಿ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ. ಒಬ್ಬರ ಮೇಲೆ ಒಬ್ಬರು ಬಿದ್ದು ಮಹಿಳೆಯರು ಓಡಿದ್ದು, ಕೆಲವರು ಕರೆಂಟ್ ಶಾಕ್ ನಿಂದ ಕುಸಿದು ಬಿದ್ದಿದ್ದಾರೆ.

ಶುಕ್ರವಾರ ಮಧ್ಯಾಹ್ನ 12.30ರ ವೇಳೆ ಉಚಿತ ದರ್ಶನದ ಸಾಲಿಗೆ ಹಾಕಿದ್ದ ಬ್ಯಾರಿಕೇಡ್‌ನಲ್ಲಿ ವಿದ್ಯುತ್ ಪ್ರವಹಿಸಿದೆ. ಬ್ಯಾರಿಕೇಡ್ ವಿದ್ಯುತ್ ಪ್ರವಹಿಸಿದ್ದನ್ನು ಕಂಡು ಸಾಲಿನಲ್ಲಿದ್ದ ಭಕ್ತರು ಜೀವ ಉಳಿಸಿಕೊಳ್ಳಲುಸ್ಥಳದಿಂದ ಓಡಿದ್ದಾರೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದು, ಕೂಡಲೇ ಅಲ್ಲಿದ್ದ ಸ್ವಯಂಸ್ವೇವಕರು ಮತ್ತು ಸ್ಥಳೀಯರು ಕೆಲವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ 20 ಮಂದಿಗೆ ಕರೆಂಟ್ ಶಾಕ್ ಹೊಡೆದಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್‌ಇಡಿ ಗೆ ಸ್ಕ್ರೀನ್ ಅಳವಡಿಕೆ ಮಾಡಲಾಗಿತ್ತು. ಈ ವೇಳೆ ತಂತಿಯಿಂದ ಈ ಘಟನೆ ನಡೆದಿದ್ದು, ಅದು ಅಲ್ಲಿದ್ದ ಕಬ್ಬಿಣದ ಬ್ಯಾರಿಕೇಡ್‌ನಲ್ಲಿ ಸಣ್ಣದಾಗಿ ಹರಿದಿದೆ. ದೊಡ್ಡ ಪ್ರಮಾಣದಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಕರೆಂಟ್ ಶಾಕ್ ಸುದ್ದಿ ಕೇಳಿ ಅಲ್ಲಿಂದ ಹೊರಬರಲು ಮಹಿಳೆಯದ ಕಾಲ್ತುಳಿತ, ತಳ್ಳಾಟ ನೂಕಾಟ ನಡೆಯಿತು. ಅದರಲ್ಲಿ 8 ಮಂದಿ ಆಘಾತದಿಂದ ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications