ಅತೃಪ್ತರ ಕರೆತರಲು ಮುಂಬೈಗೆ ತೆರಳಲಿದ್ದಾರೆ ಖರ್ಗೆ, ದೇವೇಗೌಡ

Recommended Video

      ಎಚ್ ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ ಹಾಗು ಇತರ ಟಾಪ್ ನಾಯಕರು ಮುಂಬೈಗೆ ಪಯಣ | Oneindia Kannada

      ಬೆಂಗಳೂರು, ಜುಲೈ 15: ಅತೃಪ್ತ ಶಾಸಕರೊಂದಿಗೆ ಮಾತನಾಡಲು ಮುಂಬೈಗೆ ಕಾಂಗ್ರೆಸ್‌-ಜೆಡಿಎಸ್‌ನ ಟಾಪ್ ನಾಯಕರು ಇಂದು ತೆರಳಲಿದ್ದಾರೆ.

      ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಜಾದ್ ಮತ್ತು ಜೆಡಿಎಸ್ ವರಿಷ್ಟ ಎಚ್‌.ಡಿ.ದೇವೇಗೌಡ ಅವರು ಮುಂಬೈನ ರಿನೈಸೆನ್ಸ್‌ ಹೊಟೆಲ್ ಗೆ ತೆರಳಿ ಅಲ್ಲಿ ನೆಲೆಸಿರುವ ಕಾಂಗ್ರೆಸ್-ಜೆಡಿಎಸ್‌ ನ 13 ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ಮಾಡಲಿದ್ದಾರೆ.

      ಈ ಮೂವರು ಮುಖಂಡರ ಜೊತೆ ಡಿಕೆ.ಶಿವಕುಮಾರ್, ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಹ ತೆರಳಲಿದ್ದಾರೆ ಎನ್ನಲಾಗಿದೆ. ಪ್ರಮುಖ ನಾಯಕರು ತೆರಳಿ ಮಾತನಾಡಿದರೆ ಅತೃಪ್ತರು ಮನಸ್ಸು ಬದಲಿಸಬಹುದು ಎಂಬ ಕಾರಣಕ್ಕೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

      Deve Gowda, Mallikarjun Kharge may go to Mumbai to talk with dissident MLAs

      ಆದರೆ ಮುಖಂಡರು ಮುಂಬೈಗೆ ಬರುವ ಬಗ್ಗೆ ಮೊದಲೇ ಮಾಹಿತಿ ಪಡೆದ ಮುಂಬೈನ ರಿನೈಸೆನ್ಸ್‌ ಹೊಟೆಲ್‌ನಲ್ಲಿ ತಂಗಿರುವ ಅತೃಪ್ತ ಶಾಸಕರು, ಮುಂಬೈ ಪೊಲೀಸ್ ಕಮಿಷನರ್‌ಗೆ ಹಾಗೂ ರಿನೈಸೆನ್ಸ್‌ ಹೊಟೆಲ್‌ ಇರುವ ಪೋವಾಯ್ ಪೊಲೀಸ್ ಠಾಣೆಗೆ ದೂರು ನೀಡಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

      ಕೆಲವು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರು ಇದೇ ಹೊಟೆಲ್ ಮುಂದೆ ನಿಂತು ಪ್ರತಿಭಟನೆ ಮಾಡಿದ ರೀತಿಯಲ್ಲಿಯೇ ಇಂದು ಕಾಂಗ್ರೆಸ್-ಜೆಡಿಎಸ್ ನಾಯಕರು ಪ್ರತಿಭಟನೆ ಮಾಡಿ ನಂತರ ವಾಪಸ್ಸಾಗುವ ಸಾಧ್ಯತೆ ಇದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+