ಬೀದರ್, ದೇವದುರ್ಗ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕು
ಬೆಂಗಳೂರು, ನವೆಂಬರ್ 18 : ಇಬ್ಬರು ಶಾಸಕರ ಅಕಾಲಿಕ ಮರಣದಿಂದಾಗಿ ಕರ್ನಾಟಕ ವಿಧಾನಸಭೆಯ ಎರಡು ಕ್ಷೇತ್ರಗಳು ತೆರವಾಗಿದ್ದು, ಉಪ ಚುನಾವಣೆ ನಡೆಯಬೇಕಾಗಿದೆ. 2016ರ ಜನವರಿ 6ರೊಳಗೆ ಮೇಲ್ಮನೆಯ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಂತರ ಉಪ ಚುನಾವಣೆ ನಡಯುವ ಸಾಧ್ಯತೆ ಇದೆ.
ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದು ಮೂರು ವರ್ಷಗಳು ಪೂರ್ಣಗೊಳ್ಳವ ಮುನ್ನವೇ ಉಪ ಚುನಾವಣೆ ಎದುರಾಗಿದೆ. ಬೀದರ್ ಮತ್ತು ದೇವದುರ್ಗ ಕ್ಷೇತ್ರಗಳ ಜನಪ್ರತಿನಿಧಿಗಳ ಆಯ್ಕೆಯಾಗಿ ಉಪ ಚುನಾವಣೆ ನಡೆಯಬೇಕಿದೆ. [2013ರ ಚುನಾವಣೆ ಗೆದ್ದವರು, ಸೋತವರು]

ಆಂಧ್ರಪ್ರದೇಶದ ಮಡಕಶಿರ ಬಳಿ 2015 ಆಗಸ್ಟ್ 24ರಂದು ನಡೆದ ರೈಲ್ವೆ ಅಪಘಾತದಲ್ಲಿ ದೇವದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೆಂಕಟೇಶ ನಾಯಕ್ ಅವರು ಮೃತಪಟ್ಟಿದ್ದಾರೆ. ಆದ್ದರಿಂದ, ಕ್ಷೇತ್ರದಲ್ಲಿ ಜನಪ್ರತಿನಿಧಿಗಳಿಲ್ಲ. [ದೇವದುರ್ಗ ಶಾಸಕ ವೆಂಕಟೇಶ ನಾಯಕ್ ಸಾವು]
ನವೆಂಬರ್ 17ರ ಮಂಗಳವಾರ ಬೀದರ್ ಕ್ಷೇತ್ರದ ಬಿಜೆಪಿ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಕ್ಷೇತ್ರ ಖಾಲಿಯಾಗಿದೆ. [ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ]
ಸಂಖ್ಯಾಬಲ ಕುಸಿತ : ಒಬ್ಬರು ಕಾಂಗ್ರೆಸ್ ಮತ್ತು ಒಬ್ಬರು ಬಿಜೆಪಿ ಶಾಸಕರ ಅಕಾಲಿಕ ಮರಣದಿಂದಾಗಿ ವಿಧಾನಸಭೆಯಲ್ಲಿ ಸಂಖ್ಯಾಬಲ ಕುಸಿತಗೊಂಡಿದೆ. ಕಾಂಗ್ರೆಸ್ 122 ಮತ್ತು ಬಿಜೆಪಿ 44 ಸದಸ್ಯ ಬಲ ಹೊಂದಿತ್ತು. ಸದ್ಯ, ಕಾಂಗ್ರೆಸ್ 121 ಮತ್ತು ಬಿಜೆಪಿ 43 ಸದಸ್ಯ ಬಲ ಹೊಂದಿದೆ.
ಯಾವಾಗ ಚುನಾವಣೆ? : 2016ರ ಜನವರಿ 6ರೊಳಗೆ ವಿಧಾನಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಅದಕ್ಕೂ ಮೊದಲೇ ಎರಡು ಕ್ಷೇತ್ರಗಳ ಚುನಾವಣೆ ಘೋಷಣೆಯಾಗುತ್ತದೆಯೇ? ಅಥವ ನಂತರ ನಡೆಯಲಿದೆಯೇ? ಎಂಬುದು ಸದ್ಯದ ಪಶ್ನೆ.











Click it and Unblock the Notifications