ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣದ 2ನೇ ವಾರ್ಷಿಕೋತ್ಸವ : ಸಿದ್ದರಾಮಯ್ಯ ಸರಣಿ ಟ್ವೀಟ್

|
Google Oneindia Kannada News

ಬೆಂಗಳೂರು, ನವೆಂಬರ್ 08 : ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂ.ಗಳ ನೋಟುಗಳನ್ನು ನಿಷೇಧಿಸಿ 2 ವರ್ಷ ಕಳೆದಿದೆ. ಕರ್ನಾಟಕ ಕಾಂಗ್ರೆಸ್ ನೋಟು ನಿಷೇಧ ವೈಫಲ್ಯ ಖಂಡಿಸಿ ಕರಾಳ ದಿನಾಚರಣೆ ಆಚರಣೆ ಮಾಡಲಿದೆ.

2016ರ ನವೆಂಬರ್ 8ರಂದು ನರೇಂದ್ರ ಮೋದಿ ಅವರು ನೋಟುಗಳನ್ನು ನಿಷೇಧ ಮಾಡಿದ್ದರು. ನೋಟುಗಳ ನಿಷೇಧದ ಬಳಿಕ ಉಂಟಾದ ಗೊಂದಲ ಇನ್ನೂ ಬಗೆಹರಿದಿಲ್ಲ, ಕಪ್ಪು ಹಣ ಸಹ ವಾಪಸ್ ಬಂದಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ನೋಟ್‌ ಬ್ಯಾನ್‌ಗೆ 2 ವರ್ಷ: ಅರುಣ್ ಜೇಟ್ಲಿ ನೀಡಿದರು ಅಂಕಿ-ಅಂಶನೋಟ್‌ ಬ್ಯಾನ್‌ಗೆ 2 ವರ್ಷ: ಅರುಣ್ ಜೇಟ್ಲಿ ನೀಡಿದರು ಅಂಕಿ-ಅಂಶ

ನೋಟುಗಳ ನಿಷೇಧದಿಂದ ಉಪಯೋಗ ಏನು ಆಗಿಲ್ಲ. ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಸಣ್ಣ-ಪುಟ್ಟ ಬೀದಿ ವ್ಯಾಪಾರಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಶ್ರೀಮಂತರಿಗೆ ಮಾತ್ರ ಅನುಕೂಲವಾಗಿದೆ ಎಂದು ಪಕ್ಷ ದೂರಿದೆ.

ಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗಅಪನಗದೀಕರಣಕ್ಕೆ 2 ವರ್ಷ: ಕಪ್ಪುಹಣದ ಬಗ್ಗೆ ಜನಾಭಿಪ್ರಾಯ ಬಹಿರಂಗ

ನೋಟುಗಳ ನಿಷೇಧಿಂದ ನೂರಾರು ಜನರು ಮೃತಪಟ್ಟರು. ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದರು. ಮದುವೆಗಳು ಮುರಿದು ಬಿದ್ದವು ಸಾಮಾನ್ಯ ಜನರು ಕಣ್ಣೀರು ಹಾಕಿದರು ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ನೋಟುಗಳ ನಿಷೇಧದ ಬಗ್ಗೆ ಅವರು ಸರಣಿ ಟ್ವೀಟ್ ಮಾಡಿದ್ದಾರೆ...

2000 ನೋಟು ನಿಷೇಧಕ್ಕೆ ಚಂದ್ರಬಾಬು ನಾಯ್ಡು ಆಗ್ರಹ2000 ನೋಟು ನಿಷೇಧಕ್ಕೆ ಚಂದ್ರಬಾಬು ನಾಯ್ಡು ಆಗ್ರಹ

ನೋಟುಗಳ ನಿಷೇಧದಿಂದ ಆಗಿದ್ದೇನು?

ನೋಟುಗಳ ನಿಷೇಧದಿಂದ ಏನೂ ಆಗಿಲ್ಲ. ಜನರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ರಾಜಕೀಯ, ಸ್ವಂತಕ್ಕಾಗಿ ತೆಗೆದುಕೊಂಡ ತೀರ್ಮಾನ

00 ಮತ್ತು 1000 ರೂ. ನೋಟುಗಳ ನಿಷೇಧದ ತೀರ್ಮಾನವನ್ನು ರಾಜಕೀಯ ಮತ್ತು ಸ್ವ ಹಿತಾಸಕ್ತಿಗಾಗಿ ತೆಗೆದುಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಸಿದ್ದರಾಮಯ್ಯ ಆರೋಪ

ನೋಟುಗಳ ನಿಷೇಧದ ಬಳಿಕ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕಪ್ಪು ಹಣ ಎಲ್ಲಿದೆ?

ಕಪ್ಪುಹಣ ವಾಪಸ್ ಬಂದಿಲ್ಲ, ಉಗ್ರರಿಗೆ ಹಣ ಸಂದಾಯವಾಗುವುದು ತಪ್ಪಿಲ್ಲ. ಹಾಗಾದರೆ ನೋಟುಗಳ ನಿಷೇಧದಿಂದ ಆಗಿದ್ದೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

English summary
In a serious of tweet Karnataka former Chief Minister Siddaramaiah criticized the demonetisation. Black money hardly detected, fake notes still rampant, Funding for terrorism continues said Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X