ನೆಲಕಚ್ಚಿದ ತರಕಾರಿ ಬೆಲೆ: ಕಂಗಾಲಾದ ರೈತಾಪಿ ವರ್ಗ

ಚಿಲ್ಲರೆ ಸಮಸ್ಯೆ, ನೋಟು ನಿಷೇಧದಿಂದ ತರಕಾರಿ ಬೆಲೆಯಲ್ಲಿ ಕುಸಿತಗೊಂಡಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ನಿಗದಿ ಪಡಿಸಿದ ಬೆಲೆಗೆ ರೈತಾಪಿ ವರ್ಗ ಒಲ್ಲದ ಮನಸ್ಸಿನಿಂದ ಮಾರಿ ಹೋಗುತ್ತಿದ್ದಾರೆ.

ಬೆಂಗಳೂರು, ಡಿ 11: ನೋಟು ನಿಷೇಧ ಮತ್ತು ಚಿಲ್ಲರೆ ಸಮಸ್ಯೆಯಿಂದ ತರಕಾರಿ ಬೆಲೆಯಲ್ಲಿ ಭಾರೀ ಕುಸಿತಗೊಂಡಿದ್ದು, ರೈತಾಪಿ ವರ್ಗ ಕಂಗಾಲಾಗಿದೆ.

ಪ್ರಮುಖವಾಗಿ ಚಿಲ್ಲರೆ ಸಮಸ್ಯೆಯಿಂದ ತರಕಾರಿ ವ್ಯಾಪಾರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ನಿಗದಿ ಪಡಿಸಿದ ದರಕ್ಕೆ ರೈತರು ಬೇರೆ ದಾರಿಯಿಲ್ಲದೆ ತರಕಾರಿ ಮಾರಿ ಹೋಗುತ್ತಿದ್ದಾರೆ.

ಉತ್ತರ ಭಾರತಕ್ಕೆ ರವಾನೆಯಾಗುತ್ತಿದ್ದ ತರಕಾರಿಗಳಿಗೂ ಹೆಚ್ಚಿನ ಬೇಡಿಕೆ ಇಲ್ಲದ ಕಾರಣ, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೊಮ್ಯಾಟೋ ಬೆಲೆಯಂತೂ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ ಎರಡು ರೂಪಾಯಿಯಂತೆ ಮಾರಾಟವಾಗುತ್ತಿದೆ. (ಕಪ್ಪು ಹಣದೊಂದಿಗೆ ಸಿಕ್ಕಿಬಿದ್ದ ಟಿಟಿಡಿ ಸದಸ್ಯ ಕಿಕ್ಡ್ ಔಟ್)

Demonetisation and Change problem, Vegetable prize fallen down in APMC market

ಚಿಲ್ಲರೆ ಇದ್ದವರಿಗೆ ಮಾತ್ರ ತರಕಾರಿ ಮಾರಬೇಕಾದ ಅನಿವಾರ್ಯತೆಯಲ್ಲಿರುವ ಬೀದಿ ಮತ್ತು ತಳ್ಳುಗಾಡಿ ವ್ಯಾಪಾರಿಗಳಿಗೆ ಅಪನಗದೀಕರಣದ ಬಿಸಿ ಹೆಚ್ಚಿನ ಮಟ್ಟದಲ್ಲಿ ತಟ್ಟುತ್ತಿದೆ.

ಸಗಟು ಮಾರುಕಟ್ಟೆಯಲ್ಲಿ ಪ್ರಮುಖ ತರಕಾರಿಗಳ ಬೆಲೆ ಇಂತಿದೆ (ಕೆಜಿಯೊಂದಕ್ಕೆ)

ಟೊಮ್ಯಾಟೋ - ರೂ. 2 - 3
ಬದನೆಕಾಯಿ - ರೂ. 10-12
ಹೂಕೋಸು - ರೂ. 12 - 15
ಹಸಿ ಮೆಣಸಿನಕಾಯಿ - ರೂ. 20-25
ಹುರುಳಿಕಾಯಿ - ರೂ. 15-18
ಕ್ಯಾರೆಟ್ - ರೂ. 18-20
ಬೆಂಡೇಕಾಯಿ - ರೂ. 12 - 15
ಹಾಗಲಕಾಯಿ - ರೂ. 15-18
ಬೀಟ್ರೋಟ್ - ರೂ. 20-25

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+