• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಬದಲಾವಣೆ?

|

ಬೆಂಗಳೂರು, ಡಿಸೆಂಬರ್ 16 : ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಅವರನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೇಳಿಬಂದಿದೆ. ವಿಧಾಸಭೆ ಚುನಾವಣೆ ಸೋಲಿನ ಬಳಿಕ ಉಸ್ತುವಾರಿ ಬದಲಾಯಿಸಲು ಬೇಡಿಕೆ ಇಡಲಾಗಿದೆ.

ಮುರಳೀಧರರಾವ್ ಅವರು ಚುನಾವಣಾ ಸಮಯದಲ್ಲಿ ಮಾತ್ರ ಕರ್ನಾಟಕದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲವು ನಾಯಕರ ಮಾತಿಗೆ ಮಾತ್ರ ಮಣೆ ಹಾಕುತ್ತಾರೆ ಎಂಬುದು ಹಲವು ನಾಯಕರ ಆರೋಪವಾಗಿದೆ. ಆದ್ದರಿಂದ, ಬದಲಾವಣೆಗೆ ಪಟ್ಟು ಹಿಡಿಯಲಾಗಿದೆ.

ಲೋಕಸಭೆ ಚುನಾವಣೆ 2019 : ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಮುರಳೀಧರರಾವ್ ಅವರು ಕರ್ನಾಟಕದ ಜೊತೆಗೆ ತೆಲಂಗಾಣ ರಾಜ್ಯದ ಉಸ್ತುವಾರಿಯನ್ನು ಹೊಂದಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿಯೂ ಪಕ್ಷ ಕಳಪೆ ಸಾಧನೆ ಮಾಡಿದೆ. ಆದ್ದರಿಂದ, ಅವರನ್ನು ಬದಲಾವಣೆ ಮಾಡಲು ಹೈಕಮಾಂಡ್ ಸಹ ಒಪ್ಪಿಗೆ ನೀಡುವ ನಿರೀಕ್ಷೆ ಇದೆ.

ಲೋಕಸಭೆ ಚುನಾವಣೆ : 9 ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿಗಳಿಲ್ಲ!

ಮೊದಲು ಧರ್ಮೇಂದ್ರ ಪ್ರಧಾನ್ ಅವರು ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿದ್ದರು. ಅಮಿತ್ ಶಾ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಧರ್ಮೇಂದ್ರ ಪ್ರಧಾನ್ ಅವರನ್ನು ಬದಲಾವಣೆ ಮಾಡಿ, ಮುರಳೀಧರರಾವ್ ಅವರನ್ನು ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು....

ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಗೆ ಕಗ್ಗಂಟಾಗಿರುವ 11 ಕ್ಷೇತ್ರಗಳು

ಚುನಾವಣೆಗೆ ಮುನ್ನವೇ ಬದಲಾವಣೆ

ಚುನಾವಣೆಗೆ ಮುನ್ನವೇ ಬದಲಾವಣೆ

ಕರ್ನಾಟಕದ ವಿಧಾಸಭೆ ಚುನಾವಣೆಗೆ ಮುನ್ನವೇ ಮುರಳೀಧರಾವ್ ಅವರನ್ನು ಬದಲಾವಣೆ ಮಾಡಲು ಹೈಕಮಾಂಡ್ ತೀರ್ಮಾನಿಸಿತ್ತು. ಆದ್ದರಿಂದ, ಪ್ರಕಾಶ್ ಜಾವಡೇಕರ್, ಪಿಯೂಷ್ ಘೋಯಲ್ ಅವರನ್ನು ಚುನಾವಣಾ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಚುನಾವಣಾ ರಣತಂತ್ರ ರಚಿಸುವ ಹೊಣೆಯನ್ನು ಅವರಿಗೆ ನೀಡಲಾಗಿತ್ತು.

104 ಸ್ಥಾನಗಳನ್ನು ಮಾತ್ರ ಪಡೆದ ಪಕ್ಷ

104 ಸ್ಥಾನಗಳನ್ನು ಮಾತ್ರ ಪಡೆದ ಪಕ್ಷ

ಮುರಳೀಧರರಾವ್ ಅವರ ಉಸ್ತುವಾರಿಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗಳಿಸಿದ್ದು ಕೇವಲ 104 ಸ್ಥಾನಗಳು. ಸರ್ಕಾರ ರಚನೆ ಮಾಡುವಲ್ಲಿಯೂ ಪಕ್ಷ ವಿಫಲವಾಯಿತು. ಈಗ ಅವರು ರಾಜ್ಯಕ್ಕೆ ಆಗಮಿಸುತ್ತಿಲ್ಲ. ಕಳೆದ ಆರು ತಿಂಗಳಿನಲ್ಲಿ 2 ಬಾರಿ ಮಾತ್ರ ಅವರು ರಾಜ್ಯಕ್ಕೆ ಬಂದಿದ್ದಾರೆ. ಎಲ್ಲಾ ನಾಯಕರ ಕೈಗೆ ಅವರು ಸಿಗುತ್ತಿಲ್ಲ ಎಂಬ ಆರೋಪಗಳು ಇವೆ.

ಉಸ್ತುವಾರಿ ಬದಲಾಯಿಸಿ

ಉಸ್ತುವಾರಿ ಬದಲಾಯಿಸಿ

ಈಗ ಕರ್ನಾಟಕದ ಬಿಜೆಪಿ ನಾಯಕರು ಮರಳೀಧರರಾವ್ ಅವರನ್ನು ಬದಲಾವಣೆ ಮಾಡಿ ಎಂದು ಬೇಡಿಕೆ ಮುಂದಿಟ್ಟಿದ್ದಾರೆ. ರಾಜ್ಯ ಬಿಜೆಪಿ ನಾಯಕರ ಬೇಡಿಕೆಗೆ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಲಿದ್ದಾರೆಯೇ? ಎಂದು ಕಾದು ನೋಡಬೇಕು.

20+ ಸ್ಥಾನದಲ್ಲಿ ಗೆಲುವಿನ ಗುರಿ

20+ ಸ್ಥಾನದಲ್ಲಿ ಗೆಲುವಿನ ಗುರಿ

2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20+ ಸ್ಥಾನಗಳಲ್ಲಿ ಜಯಗಳಿಸಬೇಕು ಎಂಬ ಗುರಿಯನ್ನು ಬಿಜೆಪಿ ಹೊಂದಿದೆ. ಆದ್ದರಿಂದ ರಾಜ್ಯ ನಾಯಕರ ಬೇಡಿಕೆಗೆ ಸ್ಪಂದಿಸಿ ರಾಜ್ಯ ಉಸ್ತುವಾರಿಯನ್ನು ಬದಲಾವಣೆ ಮಾಡಲು ಹೈಕಮಾಂಡ್ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆ.

.

English summary
Karnataka BJP leaders demand for the change of Muralidhar Rao who is the state party in-charge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X