Karnataka Rail: ಬೀದರ್ & ಕಲಬುರಗಿ ಮಾರ್ಗವಾಗಿ ದೈನಂದಿನ ರೈಲು ಸಂಚಾರ ಅನುಮೋದನೆಗೆ ಜನಾಗ್ರಹ
ಕರ್ನಾಟಕದಾದ್ಯಂತ ಮೂಲೆ ಮೂಲೆಗಳಿಗೂ ರೈಲು ಸಂಚರಿಸುತ್ತವೆ. ಆದರೆ ಕೆಲವು ರೈಲುಗಳು ವಾರದಲ್ಲಿ ಒಂದು ಎರಡು ಬಾರಿ ಮಾತ್ರ ಸಂಚರಿಸುತ್ತವೆ. ಹೀಗಾಗಿ ಕೆಲವು ಮಾರ್ಗಗಳಲ್ಲಿ ಸಮಸ್ಯೆ ಉಂಟಾಗುತ್ತಿದೆ. ಹೆಚ್ಚಿನ ಸಾರಿಗೆ ಅನುಕೂಲಕ್ಕಾಗಿ ಕರ್ನಾಟಕದ ಅನೇಕ ಜಿಲ್ಲೆಗಳ ಲಕ್ಷಾಂತರ ಜನರಿಗೆ ಸಹಾಯವಾಗುವಂತೆ ದೈನಂದಿನ ರೈಲಿಗೆ ಅನುಮೋದನೆ ನೀಡುವಂತೆ ರೈಲ್ವೆ ಬಳಕೆದಾರರು ಮನವಿ ಮಾಡಿದ್ದಾರೆ.
ಹೌದು, ಸಿಕಂದರಾಬಾದ್-ಅಶೋಕಪುರಂ ಎಕ್ಸ್‌ಪ್ರೆಸ್ ರೈಲು (Secunderabad-Ashokapuram Express Train) ಈಗಾಗಲೇ ಕಾರ್ಯಾಚರಣೆ ಮಾಡುತ್ತಿದೆ. ಈ ರೈಲನ್ನು ಬೀದರ್ ಹಾಗೂ ಕಲಬುರಗಿ ಮಾರ್ಗವಾಗಿ ದೈನಂದಿನ ರೈಲಾಗಿ ಪರಿವರ್ತಿಸುವಂತೆ, ಅನುಮೋದನೆ ನೀಡುವಂತೆ ಕರ್ನಾಟಕ ರಾಜ್ಯದ ರೈಲ್ವೆ ಬಳಕೆದಾರರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದಾರೆ.

ಸ್ಪಂದಿಸದ ಸರ್ಕಾರ, ರೈಲು ಬಳಕೆದಾರರು ಬೇಸರ
ದಕ್ಷಿಣ ಕೇಂದ್ರ ರೈಲ್ವೆಯು ಗಣೇಶೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೈಸೂರು-ಸಿಕಂದರಾಬಾದ್‌ಗೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇದರ ಬೆನ್ನಲ್ಲೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಬೀದರ್ ಹಾಗೂ ಕಲಬುರಗಿ ಮಾರ್ಗವಾಗಿ ಸಿಕಂದರಾಬಾದ್-ಅಶೋಕಪುರಂ ಅನ್ನು ಪ್ರತಿದಿನ ಓಡಿಸುವ ಬೇಡಿಕೆ ಮುನ್ನೆಲೆಗೆ ಬಂದಿದೆ. ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ರೈಲ್ವೆ ಇಲಾಖೆ, ಸರ್ಕಾರ, ಸಚಿವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಈ ಮಾರ್ಗದ ಪ್ರಯಾಣಿಕರು, ರೈಲ್ವೆ ಬಳಕೆದಾರು ದೂರಿದ್ದು, ಅಸಮಾಧಾನ ಹೊರ ಹಾಕಿದ್ದಾರೆ. ಈವರೆಗೆ ಸರ್ಕಾರದ ಸ್ಪಂದನೆಗಾಗಿ ಕಾಯುತ್ತಿದ್ದಾರೆ.
ನಿತ್ಯ ಸಿಕಂದರಾಬಾದ್ಷ-ಅಶೋಕಪುರಂ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿ ಕರ್ನಾಟಕದ ಪ್ರಯಾಣಿಕರಿಗೆ ಅದರಲ್ಲೂ ವಿಶೇಷವಾಗಿ ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ನಡುವೆ ಬೆಂಗಳೂರು ಮತ್ತು ಮೈಸೂರಿಗೆ ಪ್ರಯಾಣಿರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ. ಅತೀ ಅಗತ್ಯವಿರುವ ಈ ಬೇಡಿಕೆ ಈಡೇರಿಕೆಗೆ, ಅನುಮೋದನೆಗೆ ಕಾಯಲಾಗುತ್ತಿದೆ.
ಕೇಂದ್ರ & ರಾಜ್ಯ ರೈಲ್ವೆ ಸಚಿವರಿಗೆ ಮನವಿ
ಬೀದರ್ ಮತ್ತು ಕಲಬುರಗಿ ಹೊರತುಪಡಿಸಿ ಸಿಕಂದರಾಬಾದ್ - ಮೈಸೂರು ಮಧ್ಯ ವಾರದಲ್ಲಿ ಎರಡು ದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆಗೆ ಅನೋದನೆ ನೀಡಲಾಗಿತ್ತು. ಎರಡು ಜಿಲ್ಲೆಗಳನ್ನು ಬಿಟ್ಟು ಸಂಚಾರ ಮಾಡುವುದನ್ನು ಸಹ ಬಳಕೆದಾರರು ವಿರೋಧಿಸಿದ್ದಾರೆ. ಏಕೆಂದರೆ ಬೀದರ್ ಮತ್ತು ಕಲಬುರಗಿಯಿಂದ ಬೇರೆ ಬೇರೆ ಭಾಗಗಳಿಗೆ ಓಡಾಡುವವರ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಈ ಭಾಗಗಳಿಗೂ ಅನುಕೂಲವಾಗುವಂತೆ ನಿರ್ಧಾರ ಪ್ರಕಟಿಸಬೇಕೆಂಬ ಒತ್ತಾಯ ಜೋರಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ವಿ.ಸೋಮಣ್ಣ ಮತ್ತು ಅಶ್ವಿನಿ ವೈಷ್ಣವ್ ಅವರನ್ನು ಟ್ಯಾಗ್ ಮಾಡಲಾಗಿದೆ.
ದಕ್ಷಿಣ ಕರ್ನಾಟಕದಿಂದ ಉತ್ತರ ಕರ್ನಾಟಕವರೆಗೆ ಸಂಪರ್ಕಿಸುವ ಈ ರೈಲು ಬೀದರ್, ಕಲಬರುಗಿ, ಬೆಂಗಳೂರು ಸೇರಿ ಕೆಲವು ಜಿಲ್ಲೆಯಗಳ ಪ್ರಯಾಣಿಕರಿಗೆ ನಿರ್ಣಾಯಕವಾಗಿದೆ. ಬೀದರ್-ಕಲಬುರಗಿ ರೈಲು ಮಾರ್ಗ ಪೂರ್ಣಗೊಂಡು ಎಂಟು ವರ್ಷಗಳಾಗಿವೆ. ಈ ಭಾಗದಿಂದ ಬೆಂಗಳೂರಿಗೆ ಸಂಪರ್ಕಿಸುವ ರೈಲಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಬೀದರ್ ಮತ್ತು ಕಲಬುರಗಿ ಮೂಲಕ ಸಿಕಂದರಾಬಾದ್-ಅಶೋಕಪುರಂ ಡೈಲಿ ಎಕ್ಸ್‌ಪ್ರೆಸ್‌ನ ಪ್ರಸ್ತಾವನೆಗೆ ಒಪ್ಪಿಗೆ ನೀಡಿ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುವಂತೆ ಕೋರಲಾಗಿದೆ.












Click it and Unblock the Notifications