ದೀಪಾವಳಿ ರಷ್: ಪ್ರಯಾಣಿಕನ ಕುತ್ತಿಗೆ ಹಿಸುಕಿದ ಬಸ್ ಪ್ರಯಾಣದ ದರ

By: ಬಾಲರಾಜ್ ತಂತ್ರಿ
Subscribe to Oneindia Kannada

ದೀಪಾವಳಿ, ರಾಜ್ಯೋತ್ಸವದ ಸಾಲು ಸಾಲು ರಜೆ ಆರಂಭವಾಗುತ್ತಿದೆ. ಶನಿವಾರದಿಂದ (ಅ 29) ನವೆಂಬರ್ 1ರ ವರೆಗೆ ನಾಲ್ಕು ದಿನಗಳ ರಜೆ. ರಜೆಯ ಮಜಾ ಒಂದು ಕಡೆಯಾದರೆ, ಹಬ್ಬದ ಸೀಸನ್ ಗಳಲ್ಲಿ ಖಾಸಗಿ ಬಸ್ಸುಗಳು ತಮ್ಮ ಪ್ರಯಾಣ ದರವನ್ನು ಮನಬಂದತೇ ಏರಿಸುವ 'ಹುಚ್ಚಾಟ' ವನ್ನು ಮತ್ತೆ ಮತ್ತೆ ಮುಂದುವರಿಸಿವೆ.

ಹಬ್ಬಕ್ಕೆ ಊರಿಗೆ ಹೋಗಲೇ ಬೇಕಾದ ಅನಿವಾರ್ತೆಯಲ್ಲಿರುವ ಪ್ರಯಾಣಿಕನ ಅಸಾಹಯಕತೆಯ ಲಾಭ ಪಡೆದುಕೊಳ್ಳುತ್ತಿರುವ ಪ್ರಮುಖವಾಗಿ ಖಾಸಗಿ ಬಸ್ ಸಂಸ್ಥೆಗಳು 'ಹಗಲು-ರಾತ್ರಿ' ದರೋಡೆಗೆ ಇಳಿದಿವೆ. ಗೊತ್ತಿದ್ದೂ, ಸಾರಿಗೆ ಇಲಾಖೆಯ ಅಧಿಕಾರಿಗಳು ಕುರುಡರಾಗಿದ್ದಾರೆ.

ಬೇಡಿಕೆಯನ್ನು ಇವರೇ ಹುಟ್ಟುಹಾಕಿ, ಏಜೆಂಟುಗಳು ಟಿಕೆಟುಗಳನ್ನು ತಾವೇ ಬ್ಲಾಕ್ ಮಾಡಿಸಿ 'ಸಿಕ್ಕಿದ್ದೇ ಚಾನ್ಸ್'ಎಂದು ಪ್ರಯಾಣಿಕರನ್ನು ಸರಿಯಾಗಿ 'ಲೂಟಿ' ಮಾಡುತ್ತಿದ್ದಾರೆ. ಟಿಕೆಟ್ ದರ ಏರಿಸುವುದಕ್ಕೂ ಒಂದು ರೀತಿನೀತಿ ಬೇಡವೇ, ಎರಡು ಪಟ್ಟು, ಮೂರು ಪಟ್ಟು , ಕೇಳುವವರು ಯಾರು? ತಿಂಗಳ ಸಂಬಳ ಕಾಯುತ್ತಿರುವವನಿಗೆ, ಕಷ್ಟಪಟ್ಟು ದುಡಿಯುವ ವರ್ಗದ ಜನರ ನೋವು ಇವರಿಗೆಲ್ಲಿಂದ ಅರ್ಥವಾಗುತ್ತೆ?

ರಾಜ್ಯ ಸರಕಾರದ ಒಡೆತನದ ನಾಲ್ಕು ಸಾರಿಗೆ ಘಟಕಗಳು ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಬಸ್ ಓಡಿಸಿ, ಪ್ರಯಾಣ ದರದಲ್ಲಿ ಸ್ವಲ್ಪ ಮಟ್ಟಿನ ಏರಿಕೆ ಮಾಡುವುದನ್ನು ಬಿಟ್ಟರೆ, ಖಾಸಗಿ ಬಸ್ಸುಗಳ ರೀತಿಯಲ್ಲಿ ದರೋಡೆ ನಡೆಸದಿರುವುದು ಸಮಾಧಾನದ ಸಂಗತಿ.

ನಗರದೊಳಗೆ ಬಸ್ ಪ್ರವೇಶಕ್ಕೆ ಅನುಮತಿ ನೀಡಬೇಕೆನ್ನುವ ಖಾಸಗಿ ಬಸ್ಸಿನವರಿಗೆ, ಕೆಎಸ್ಆರ್ಟಿಸಿಯ ರೀತಿಯಲ್ಲಿ ಪ್ರಯಾಣದ ದರದಲ್ಲಿ (ಸೀಸನ್ ವೇಳೆ) ಏರಿಕೆ ಮಾಡದೇ, ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸಂಚಾರ ನಡೆಸಿ ಪ್ರಯಾಣಿಕರು ಮೆಚ್ಚುವಂತಹ ಸೇವೆ ನೀಡುವ ಬದ್ದತೆ ಬರುವುದು ಯಾವಾಗ?

ಬೇಕಾಬಿಟ್ಟಿ ದರ ಏರಿಸ್ತೀರಲ್ಲಾ, ಡೀಸೆಲ್ ಬಿಟ್ಟು ಸೀಸನ್ ನಲ್ಲಿ ಬೇರೇನಾದರೂ ಇಂಧನ ಬಳಸಿಕೊಳ್ತೀರಾ ಎನ್ನುವುದು ಟ್ರಾವೆಲ್ ಏಜೆನ್ಸಿಗಳಲ್ಲಿ ಪ್ರಯಾಣಿಕರು ವ್ಯಂಗ್ಯದಿಂದ ಆಡುತ್ತಿರುವ ಪ್ರಶ್ನೆ. ಅದ್ಯಾವಾಗ ಸರಕಾರ ಪ್ರಯಾಣಿಕರ ಜೇಬಿಗೆ ಅಟಂಬಾಂಬ್ ಹಾಕುವ ಖಾಸಗಿ ಬಸ್ ಸಂಸ್ಥೆಗಳಿಗೆ ಹೆಡೆಮುರಿ ಕಟ್ಟುತ್ತೋ ಎನ್ನುವುದು ಪ್ರಯಾಣಿಕರ ವಿಷಾದದ ಪ್ರಶ್ನೆ?

Deepavali rush: Unreasonable hike in bus fare from Privae Buses

ಅ 28ಕ್ಕೆ ಬೆಂಗಳೂರಿನಿಂದ ವಿವಿಧ ಊರಿಗೆ ತೆರಳುವುದಕ್ಕೆ ಮತ್ತು ನ 1ರಂದು ವಾಪಸ್ ರಾಜಧಾನಿಗೆ ಮರುಳಲು, ಗಗನಮುಖಿ ಬಸ್ ಪ್ರಯಾಣ ದರದ ಚಾರ್ಟ್ ಈ ರೀತಿ ಇದೆ ನೋಡಿ ( ಕೃಪೆ, ರೆಡ್ ಬಸ್, ಭಾನುವಾರದ (ಅ 23) ರೇಟ್)

ಊರು ಸಾಮಾನ್ಯ ದರ(ಸಿಟ್ಟಿಂಗ್) ಸಾಮಾನ್ಯ ದರ(ಸ್ಲೀಪರ್) ದೀಪಾವಳಿಯಲ್ಲಿನ
ದರ(ಸಿಟ್ಟಿಂಗ್)
ದೀಪಾವಳಿಯಲ್ಲಿನ
ದರ(ಸ್ಲೀಪರ್)
ದಾವಣಗೆರೆ Rs.280- 300/- Rs.400-450/- Rs.600 - 750/- Rs.1000 - 1250/-
ಬೀದರ್ Rs.650 - 800/- Rs.1000 - 1300/- Rs.1100 - 1350/- Rs.1600 - 2500/-
ಮಂಗಳೂರು Rs.500 - 550/- Rs.650/- 750/- Rs.800 - 1200/- Rs.1350 - 1700/-
ಹುಬ್ಬಳ್ಳಿ Rs.550- 700/- Rs.800- 1000/- Rs.1200 - 1500/- Rs.1800 - 2750/-
ಚೆನ್ನೈ Rs.500 - 550/- Rs.650/- 800/- Rs.850 - 1200/- Rs.1400 - 2000/-
ಹೈದರಾಬಾದ್ Rs.650 - Rs. 750/- Rs.900 - Rs. 1200/- Rs.1500 - Rs.1900/- Rs.2100 - Rs. 2700/-
ಉಡುಪಿ Rs.550 - 700/- Rs.650 - 750/- Rs.950 - 1200/- Rs.1300 - 1600/-
ಶಿವಮೊಗ್ಗ Rs.400 - 500/- Rs.450 - 600/- Rs.850 - 1000/- Rs.1000 - 1400/-
ಚಿಕ್ಕಮಗಳೂರು Rs.450 - 500/- Rs.550 - 600/- Rs.600- 750/- Rs.900 - 1100/-
ಬೆಳಗಾವಿ Rs.550 - 700/- Rs.650 - 800/- Rs.1000 - 1200/- Rs.1800 - 2500/-
ಬಳ್ಳಾರಿ Rs.450 - 550/- Rs.600 - 750/- Rs.750 - 900/- Rs.1500 - 2200/-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Deepavali festival season rush: Unreasonable hike in the bus fare from Privae Buses during this period.
Please Wait while comments are loading...