ಮಕ್ಕಳ ಪಾಲನೆಗೆ ಆರೋಗ್ಯ ಸೌಧದಲ್ಲಿ 'ಡೇ-ಕೇರ್ ಸೆಂಟರ್'

ಬೆಂಗಳೂರು,ನವೆಂಬರ್ 15: ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮಕ್ಕಳ ಲಾಲನೆ, ಪಾಲನೆಗಾಗಿ ಡೇ ಕೇರ್ ಸೆಂಟರ್ ಆನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ, ಸಚಿವ ಡಾ. ಕೆ. ಸುಧಾಕರ್ ಲೋಕಾರ್ಪಣೆ ಮಾಡಿದರು.

ನಗರದಲ್ಲಿ ಮಂಗಳವಾರ ಈ ಕುರಿತು ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಮಕ್ಕಳ ಲಾಲನೆ, ಪಾಲನೆಗೆ ಸೂಕ್ತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಇಂತಹ ಕೇಂದ್ರಗಳು ಅಗತ್ಯವಾಗಿವೆ ಎಂದರು.

10 ವರ್ಷದವರಗೆ ಮಕ್ಕಳ ಆರೈಕೆ ಅತ್ಯಂತ ಮುಖ್ಯವಾಗಿದೆ. ಇಂತಹ ಸಮಯದಲ್ಲಿ ಮಕ್ಕಳ ಲಾಲನೆ, ಪೋಷಣೆ ಬಹಳ ಮುಖ್ಯ. ಮಕ್ಕಳು ಆರೋಗ್ಯವಂತರಾಗಿದ್ದಾಗ ಭವಿಷ್ಯದಲ್ಲಿ ಸದೃಢ ಸಮಾಜ ಕಟ್ಟಲು ಸಾಧ್ಯ. ಇಂತಹ ಆಟಾಟೋಪಗಳಿಂದ ಮಕ್ಕಳ ದೈಹಿಕವಾಗಿ ಮತ್ತಷ್ಟು ಚುರುಕಾಗುತ್ತದೆ. ಸರ್ಕಾರಿ ಮಹಿಳಾ ಸಿಬ್ಬಂದಿಗಳಿಗೆ ನೀಡಬೇಕಾದ ಸೌಲಭ್ಯ, ಸವಲತ್ತುಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

Day care center for the care of children of female officers and staff in the health building

'ಡೇ ಕೇರ್ ಸೆಂಟರ್' ನಿಂದ ಉದ್ಯೋಗದಲ್ಲಿರುವ ದಂಪತಿಗಳಿಗೆ, ಅದರಲ್ಲೂ ನಿರ್ದಿಷ್ಟವಾಗಿ ಹತ್ತು ವರ್ಷ ವಯೋಮಿತಿಯೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರಿಗೆ ಅನುಕೂಲವಾಗಿದೆ. ಮಕ್ಕಳು ಸಹ ತಂದೆ - ತಾಯಿ ಜೊತೆ ಬೆರೆಯಲು, ಅವರ ಕಣ್ಗಾವಲಿನಲ್ಲಿ ಬೆಳೆಯಲು ಈ ಕೇಂದ್ರ ಸಹಕಾರಿಯಾಗಿದೆ ಎಂದು ತಿಳಿಸಿದರು.

ಮಹಿಳೆಯರು ಪುರುಷರಷ್ಟೇ ಸರಿಸಮಾನವಾಗಿ ಕೆಲಸ ನಿರ್ವಹಿಸಲು ಇಂತಹ ವಾತಾವರಣ ಸೂಕ್ತವಾಗಿದೆ. ಮಹಿಳೆಯರ ಉದ್ಯೋಗದ ಸ್ಥಳದಲ್ಲಿ ಮಕ್ಕಳ ಡೇ ಕೇರ್ ಆರಂಭಿಸಿರುವುದರಿಂದ ತಾಯಂದಿರು ನಿರಾಳವಾಗಿ ಕೆಲಸ ಮಾಡಬಹುದು. ಮಧ್ಯಾಹ್ನ ಉಟದ ಸಮಯದಲ್ಲಿ ಮಕ್ಕಳ ಜೊತೆಯಲ್ಲಿ ಇರಬಹುದು. ಭೋಜನ ಸವಿದು ಮಕ್ಕಳ ಬೇಕು - ಬೇಡಗಳನ್ನು ನೋಡಿಕೊಳ್ಳಬಹುದಾಗಿದೆ.

ಆರೋಗ್ಯಸೌಧದ ಡೇ ಕೇರ್ ನಲ್ಲಿ ಗರಿಷ್ಠ 20 ಮಕ್ಕಳ ಆರೈಕೆಗೆ ಅವಕಾಶ ಕಲ್ಪಿಸಬಹುದಾಗಿದೆ. ವಿನೂತನ ಶೈಲಿಯ ನೆಲದ ಹಾಸಿಗೆ, ರಬ್ಬರ್ ಮ್ಯಾಟ್ ಅಂಬೆಗಾಲಿಡುವ ಮಕ್ಕಳಿಂದ ಪ್ರಾಥಮಿಕ ಶಾಲೆ ಪ್ರವೇಶಿಸುವ ವಿದ್ಯಾರ್ಥಿ ಹಂತದವರೆಗೆ ಉಪಚಾರಕ್ಕಾಗಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮಕ್ಕಳ ಚಟುವಟಿಕೆಗಾಗಿ ಆಟಿಕೆಗಳನ್ನು ಆಳವಡಿಸಲಾಗಿದೆ.

Day care center for the care of children of female officers and staff in the health building

ಆರೋಗ್ಯ ಸೌಧದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿದ್ದು, ಇಂತಹ ವಿನೂತನ ಕೇಂದ್ರ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು ಇದನ್ನು ಮಾದರಿ ಕೇಂದ್ರವಾಗಿ ನಿರ್ಮಿಸಲಾಗಿದೆ. ಮಕ್ಕಳಿಗೆ ಅಗತ್ಯವಾಗಿರುವ ಆಟದ ಪರಿಕರಗಳು ಮತ್ತಿತರ ಸೌಭಲ್ಯವನ್ನು ಒದಗಿಸಲಾಗಿದೆ.

ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಆಯುಕ್ತ ಡಿ. ರಂದೀಪ್, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+