ವರದಕ್ಷಿಣೆಯ ದಳ್ಳುರಿಗೆ ಮಗು ಆಹುತಿ, ಪತ್ನಿ ಗಂಭೀರ

ಇಂತಹ ಗಂಡನಿಗೆ ಸಾಥ್ ನೀಡಿರುವುದು ಆತನ ತಾಯಿ ಮತ್ತು ತಮ್ಮ. ದುರ್ದೈವವೆಂದರೆ 2 ವರ್ಷದ ಮಗಳು ಮಧುಮಿತ ಅಪ್ಪ ಹಚ್ಚಿದ ಬೆಂಕಿಗೆ ಆಹುತಿಯಾಗಿದ್ದಾಳೆ. ಇನ್ನು ತೀವ್ರವಾಗಿ ಗಾಯಗೊಂಡಿರುವ ಪತ್ನಿ ಲಕ್ಷ್ಮಿ (28) ಜೀವನ್ಮರಣದ ಮಧ್ಯೆ ಬೇಯುತ್ತಿದ್ದಾರೆ.
ಶಾಮನೂರು ಗ್ರಾಮದ ಜನತಾ ಕಾಲೋನಿಯ ನಿವಾಸಿ ಅಂಜನಪ್ಪನೇ ಲಕ್ಷ್ಮಿಯ ಗಂಡ. ಪ್ರಕರಣದ ಪ್ರಮುಖ ಆರೋಪಿ. ಅಂಜನಪ್ಪನಿಗೆ ಸಾಥ್ ನೀಡಿದವರು ತಾಯಿ ಜಯಮ್ಮ ಹಾಗೂ ತಮ್ಮ ಮಂಜುನಾಥ್ ಎನ್ನಲಾಗಿದೆ.
ವರದಕ್ಷಿಣೆ ವಿಚಾರವಾಗಿ ನಿನ್ನೆ ರಾತ್ರಿ ಸಹ ಅಂಜನಪ್ಪನ ಕುಟುಂಬದವರು ಜಗಳ ತೆಗೆದಿದ್ದಾರೆ. ತಾಯಿ ಹಾಗೂ ತಮ್ಮನೊಂದಿಗೆ ಸೇರಿ ಅಂಜನಪ್ಪ ಪತ್ನಿ ಹಾಗೂ ಮಗಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.
ಚೀರಾಟ ಕೇಳಿ ಬಂದ ನೆರೆಹೊರೆಯವರು ತಾಯಿ, ಮಗಳನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಮಗು ಮಧುಮಿತ ಮೃತಪಟ್ಟಿದೆ. ಲಕ್ಷ್ಮಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಗಂಡ ಅಂಜನಪ್ಪನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಅತ್ತೆ ಜಯಮ್ಮ, ಮೈದುನ ಮಂಜುನಾಥ್ ಪರಾರಿಯಾಗಿದ್ದು, ಅವರಿಗಾಗಿ ಶೋಧ ನಡೆದಿದೆ.












Click it and Unblock the Notifications