ಸೊಸೆ ಅತ್ತೆ-ಮಾವನಿಂದ ಜೀವನಾಂಶ ಕೇಳುವಂತಿಲ್ಲ!

ಬೆಂಗಳೂರು, ಮಾರ್ಚ್‌ 12: ಸೊಸೆಗೆ ತನ್ನ ಅತ್ತೆ, ಮಾವನಿಂದ ಜೀವನಾಂಶ ಕೇಳುವ ಹಕಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ ನೀಡಿದೆ. ಹಾಗಾಗಿ ಯಾರಾದರೂ ಸೊಸೆಯಂದಿರು ಮಾವನ ಬಳಿ ಜೀವನಾಂಶ ಕೇಳುವ ಲೆಕ್ಕಾಚಾರ ಇದ್ದರೆ ಅದು ಕೈಗೊಡುವುದಿಲ್ಲ.

ಅಪರಾಧ ದಂಡ ಸಂಹಿತೆ ಸೆಕ್ಷನ್‌ 125ರಡಿ ಪತ್ನಿ ತನ್ನ ಪತಿಯಿಂದ ಜೀವನಾಂಶ ಕೇಳಬಹುದು. ಆದರೆ ಪತಿ ನಿಧನದ ನಂತರ ಪತ್ನಿ ಅತ್ತೆ, ಮಾವನನ್ನು ಜೀನಾಂಶ ಕೇಳುವಂತೆಯೇ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

Daughter In Law Can Not Claim Maintenance From Father In Law HC

ಬಳ್ಳಾರಿಯ ದಂಪತಿಯ ಪ್ರಕರಣದಲ್ಲಿ ತನ್ನ ಪತಿ ನಿಧನದ ನಂತರ ಪತ್ನಿ, ತನ್ನ ಪತಿಯ ತಂದೆ-ತಾಯಿಯಿಂದ ಜೀವನಾಂಶ ಕೋರಲಾಗದು ಎಂದು ಆದೇಶ ನೀಡಿ, ಸೊಸೆ ಮತ್ತು ಆಕೆಯ ಮಕ್ಕಳಿಗೆ, ಅತ್ತೆ-ಮಾವ ಮಾಸಿಕ 25 ಸಾವಿರ ರೂ. ಜೀವನಾಂಶ ನೀಡಬೇಕೆಂದು ಅಧೀನ ನ್ಯಾಯಾಲಯ ಹೊರಡಿಸಿದ್ದ ಅದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹುಬ್ಬಳ್ಳಿಯ ಅಬ್ದುಲ್‌ ಖಾದರ್‌ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಲ್ಲಿಆಲಿಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ಈ ಆದೇಶವನ್ನು ನೀಡಿದೆ.

ಪ್ರಕರಣದ ಹಿನ್ನೆಲೆ: ಖಾಜಾ ಮೊಯಿನುದ್ದೀನ್‌ ಅಗಡಿ ಹಾಗೂ ತಸ್ಲೀಮಾ ಜಮೀಲಾ ವಿವಾಹವಾಗಿದ್ದರು. ಅವರಿಗೆ ನಾಲ್ವರು ಮಕ್ಕಳು ಜನಿಸಿದ್ದರು. ಪತಿ ನಿಧನರಾದ ಬಳಿಕ ಪತಿಯ ತಂದೆ-ತಾಯಿ ತನ್ನನ್ನು ಮತ್ತು ತನ್ನ ಮಕ್ಕಳನ್ನು ನೋಡಿಕೊಳ್ಳುತ್ತಿಲ್ಲ. ಹಾಗಾಗಿ ಅವರಿಂದ ಜೀವನಾಂಶ ಕೊಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ಅವರ ಅರ್ಜಿಯನ್ನು ಮಾನ್ಯ ಮಾಡಿದ ಬಳ್ಳಾರಿ ನ್ಯಾಯಾಲಯ, ಪತಿಗೆ 20 ಸಾವಿರ ಹಾಗೂ ನಾಲ್ವರು ಮಕ್ಕಳಿಗೆ 5 ಸಾವಿರ ರೂ. ಸೇರಿ ಒಟ್ಟು 25 ಸಾವಿರ ಜೀವನಾಂಶವನ್ನು ನೀಡುವಂತೆ ಪತಿಯ ಪೋಷಕರಿಗೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್‌ ಮೊರೆ ಹೋಗಿದ್ದರು.

ಹೈಕೋರ್ಟ್ ಏನು ಹೇಳಿದೆ?: ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ, "ಸಿಆರ್‌ ಪಿಸಿ ಸೆಕ್ಷನ್‌ 125ರಡಿ ಪತ್ನಿ ಜೀವನಾಂಶ ಕೋರುವ ಹಕ್ಕಿದೆ. ಅದೇ ರೀತಿ ಪೋಷಕರು ತಮ್ಮ ವಯಸ್ಕ ಮಗನಿಂದ ಜೀವನಾಂಶ ಕೋರಬಹುದಾಗಿದೆ. ಅದೇ ರೀತಿ ಅಪ್ರಾಪ್ತ ಮಕ್ಕಳೂ ಸಹ ತಂದೆಯಿಂದ ಜೀವನಾಂಶ ಕೇಳಬಹುದಾಗಿದೆ. ಆದರೆ ನಿಯಮದಲ್ಲಿ ಎಲ್ಲೂ ಪತಿ ನಿಧನದ ನಂತರ ಅವರ ತಂದೆ-ತಾಯಿಗಳಿಂದ ಜೀವನಾಂಶ ಪಡೆಯಲು ಅಧಿಕಾರವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೆ, ಅದೇ ಆಧಾರದ ಮೇಲೆ ಬಳ್ಳಾರಿಯ ನ್ಯಾಯಾಲಯ 2021ರ ನವೆಂಬರ್ 30ರಂದು ಸೊಸೆಗೆ ಅತ್ತೆ- ಮಾವ 25 ಸಾವಿರ ಜೀವನಾಂಶ ನೀಡಬೇಕು ಎಂದು ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

ಅರ್ಜಿದಾರರ ಪರ ವಕೀಲರು, ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ಪ್ರತಿವಾದಿಗಳು ಸಿಆರ್‌ಪಿಸಿ ಸೆಕ್ಷನ್‌ 12ರಡಿ ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸುವಂತಹ ಅಧಿಕಾರವಿಲ್ಲ, ಜತೆಗೆ ಪುತ್ರನ ನಿಧನದ ನಂತರ ಸೊಸೆಗೆ ಜೀವನಾಂಶ ನೀಡಬೇಕೆಂಬ ನಿಯಮವಿಲ್ಲ. ಹಾಗಾಗಿ ಅಧೀನ ನ್ಯಾಯಾಲಯದ ಆದೇಶ ರದ್ದು ಮಾಡಬೇಕೆಂದು ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+