ಸಿನಿಮಾ ರೀಲ್ ಆಗಲಿದೆ ದರ್ಶನ್ ರಿಯಲ್ ಲೈಫ್ ಸ್ಟೋರಿ: ಟೈಟಲ್ ನೋಂದಣಿಗೆ ಕ್ಯೂ?
ಮೊದಲೆಲ್ಲಾ ಚಿತ್ರಗಳು ಸಮಾಜಕ್ಕೆ ಪ್ರೇರಣೆ ನೀಡುವಂತೆ ಇರುತ್ತಿದ್ದವು. ಇದಕ್ಕಾಗಿಯೇ ಸಮಾಜ ಮುಖಿ ಕೆಲಸ ಮಾಡಿದ ಸಾಧಕರ ಜೀವನ ಗಾಥೆಯನ್ನು ಮುಂದಿನ ಪೀಳಿಗೆಯ ಜನರಿಗೆ ತೋರಿಸುವ ಇರಾದೆಯಿಂದ ನಿರ್ದೇಶಕರು, ನಿರ್ಮಾಪಕರು, ಚಿತ್ರವನ್ನು ನಿರ್ಮಿಸುತ್ತಿದ್ದರು. ಈಗಲೂ ಆ ಟ್ರೆಂಡ್ ಇದೆ. ಆದರೆ ಈಗ ಕೊಂಚ ಈ ಟ್ರೆಂಡ್ ಕೊಂಚ ಚೇಂಜ್ ಆಗಿದೆ.
ಮಾಧ್ಯಮದಲ್ಲಿ ಅತಿ ಹೆಚ್ಚು ಪ್ರಚಾರ ಪಡೆದಗಳನ್ನು ಇಟ್ಟುಕೊಂಡು ಸಿನಿಮಾಗಳನ್ನು ಮಾಡುತ್ತಾರೆ. ಇದಕ್ಕೆ ಸರಕು ಸಹ ಬೇಕಾದಷ್ಟು ಹಾಗೂ ವಿಷಯಗಳು ಸಿಗುತ್ತವೇ ಎಂಬುದೇ ಚಿತ್ರ ತಂಡದ ಯೋಚನೆ. ಹೀಗಾಗಿಯೇ ಈ ಬಾರಿಯೂ ನಿರ್ದೇಶಕರು, ನಿರ್ಮಾಪಕರು ಸಹ ದರ್ಶನ್ ಬಂಧನದ ರಿಯಲ್ ಸ್ಟೋರಿಯ ಮೇಲೆ ಚಿತ್ರದ ಟೈಟಲ್‌ಗಳನ್ನು ನೋಂದಣಿ ಮಾಡಿಕೊಳ್ಳಲು ಮುಂದಾಗಿದೆ.

ರೀಯಲ್ ಕಥೆಗೆ ಹೆಚ್ಚಿದೆ ಬೇಡಿಕೆ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಮೈಸೂರಿನಲ್ಲಿ ಜೂನ್ 11 ರಂದು ಬಂಧಿಸಲಾಗಿತ್ತು. ಅಲ್ಲಿಂದ ಇವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಒಟ್ಟು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು, ಹಲವು ಬಾರಿ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಸ್ಥಳ ಮಹಜರು ಸಹ ಮಾಡಿದ್ದಾರೆ. ಈಗ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ನ್ಯಾಯಂಗ ಬಂಧನದಲ್ಲಿದ್ದಾರೆ.
ಈ ರೀಯಲ್ ಸ್ಟೋರಿಗೆ ಸಂಬಂಧಿಸಿದಂತೆ ಮಾಧ್ಯಮಗಳು ಸಹ ದಿನವೂ ಒಂದಿಲ್ಲಾ ಒಂದು ಕಾರ್ಯಕ್ರಮವನ್ನು ವಿಭಿನ್ನ ಟೈಟಲ್‌ನ ಅಡಿ ಬಿತ್ತರ ಮಾಡಿವೆ. ಇವುಗಳಿಂದ ಪ್ರೇರಿತರಾದ ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರು, ಇವುಗಳನ್ನೇ ಫೈನ್ ಟ್ಯೂನ್ ಮಾಡಿ ಟೈಟಲ್ ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದಾರೆ.
ಟೈಟಲ್ ನೊಂದಣಿಗೆ ಕ್ಯೂ
ಡಿ ಗ್ಯಾಂಗ್ ಬಹು ಬೇಡಿಕೆಯ ಟೈಟಲ್ ಎಂದು ತಿಳಿದು ಬಂದಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಆದ ಪಟ್ಟಣಗೆರೆ ಶೆಡ್ ಟೈಟಲ್ ಪಡೆಯಲು ಭಾರೀ ಪೈಪೋಟಿ ಕಂಡು ಬಂದಿದೆ. ಅಲ್ಲದೆ ದರ್ಶನ್ ವಿಚಾರಣಾಧಿನ ಖೈದಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ್ದು, ಅವರಿಗೆ ನೀಡಲಾಗಿರುವ ನಂಬರ್ 6106 ಈ ನಂಬರ್‌ಗೂ ಬೇಡಿಕೆ ಹೆಚ್ಚಿದೆ.

'ಕೈದಿ ನಂ 6106' ಚಿತ್ರದ ಶೀರ್ಷಿಕೆಯನ್ನು ಪಡೆಯಲು ನಿರ್ದೇಶಕರು, ನಿರ್ಮಾಪಕರು ಕ್ಯೂನಲ್ಲಿ ನಿಂತಿದ್ದಾರೆ. ಇನ್ನು ದರ್ಶನ್ ಬಂಧನವಾಗುತ್ತಿದ್ದಂತೆ ಹಲವು ನ್ಯೂಸ್ ಚಾನೆಲ್‌ಗಳು ಡಿ ಗ್ಯಾಂಗ್ ಎಂದು ಕಾರ್ಯಕ್ರಮವನ್ನು ಮಾಡಿದ್ದವು. ಈ ಶೀರ್ಷಿಕೆಗೂ ಭಾರೀ ಬೇಡಿಕೆ ಸಿಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುತ್ತ ಮುತ್ತ ಟಿವಿ ವಾಹಿನಿಗಳು ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಮಾಡಿವೆ. ಇನ್ನು ರೇಣುಕಾಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿತ್ತು. ಈ ಪ್ರಕರಣದಲ್ಲಿ ದರ್ಶನ್ ತನ್ನನ್ನು ಈ ಪ್ರಕರಣದಲ್ಲಿ ಎಳೆದು ತರೆಬೇಡಿ ಎಂದು ಹೇಗೆ, ತನ್ನ ಸಹಚರರಿಗೆ ಹೇಳಿದ್ದರು. ಎಷ್ಟೆಲ್ಲಾ ಹಣದ ಆಮೀಷವನ್ನು ಒಡ್ಡಿದ್ದರು ಎಂಬುದನ್ನು ವಾಹಿನಿಗಳು ಎಳೆ ಎಳೆಯಾಗಿ ಬಿತ್ತರಿಸಿದ್ದವು.
ಸಾಕ್ಷಿ ನಾಶಗಳನ್ನು ಮಾಡಲು ದರ್ಶನ್ ಎಷ್ಟೆಲ್ಲಾ ಪ್ರಯತ್ನ ಪಟ್ಟಿದ್ದರು ಎಂದು ವಾಹಿನಿಗಳು ವಿಸ್ತಾರವಾಗಿ ತೋರಿಸಿದ್ದವು. ಇದೇ ವೇಳೆ ಮರಣೋತ್ತರ ವರದಿಯನ್ನು ತಿರಿಚುವಂತೆ ವೈದ್ಯರಿಗೆ ನೀಡಿದ್ದ ಆಮಿಷ ಸಹ ಭಾರೀ ಚರ್ಚೆಗೆ ಗ್ರಾಸವಾಗಿತ್ತು. "ರಾ" ಸ್ಟೋರಿಯನ್ನೇ ಇಟ್ಟುಕೊಂಡು ಕೋಟಿ ಕೋಟಿ ಹಣವನ್ನು ಬಾಚಿಕೊಳ್ಳಲು ಬಿಗ್ ಪ್ಲ್ಯಾನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications