Darshan : ದರ್ಶನ್‌ ಭೇಟಿಗಾಗಿ ಜೈಲಿಗೆ ಬರ್ತಾರಾ ತಾಯಿ, ಸಹೋದರ?

ಬೆಂಗಳೂರು, ಜೂನ್‌ 28: ನಟಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ ಎಂಬ ವಿಚಾರವಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದಂದುಕೊಲೆ ಮಾಡಿದ ದರ್ಶನ್ ಅಂಡ್ ಗ್ಯಾಂಗ್ ಇದೀಗ ಜೈಲು ಸೇರಿದ್ದಾರೆ. ನಟ ದರ್ಶನ್‌ ಜೈಲಿನಲ್ಲಿದ್ದು, ಪತ್ನಿ ಹಾಗೂ ಸ್ನೇಹಿತರ ದರ್ಶನ್‌ ಅವರನ್ನ ಈಗಾಗಲೇ ಭೇಟಿ ಮಾಡಿದ್ದಾರೆ.

ಇತ್ತ ನಟ ದರ್ಶನ್‌ ಹಾಗೂ ಅವರ ತಾಯಿ ಮತ್ತು ಸಹೋದರನ ಜೊತೆ ದರ್ಶನ್​ ಅವರು ಜಗಳ ಮಾಡಿಕೊಂಡು ದೂರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದೀಗ ದರ್ಶನ್‌ ಅವರ ತಾಯಿ ಮೀನಾ ತೂಗುದೀಪಾ ಹಾಗೂ ಸಹೋದರ ದಿನಕರ್‌ ತೂಗುದೀಪ್‌ ಇಂದು ಜೈಲಿನಲ್ಲಿ ದರ್ಶನ್‌ ಅವರನ್ನ ಭೇಟಿ ಮಾಡುವ ಸಾಧ್ಯತೆ ಇದೆ.

Darshan s Mother And Brother Will Come To Jail To See Him

ಈಗಾಗಲೇ ನಟ ದರ್ಶನ್‌ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಜೈಲು ಸೇರಿ ಐದು ದಿನಗಳಾಗಿದ್ದು, ಈಗಾಗಲೇ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪುತ್ರ ಹಾಗೂ ದರ್ಶನ್‌ ಅವರ ಜೀವದ ಗೆಳಯ ವಿನೋದ್‌ ಪ್ರಭಾಕರ್‌ ಅವರು ಭೇಟಿ ಮಾಡಿದ್ದು, ಇದೀಗ ಜೈಲಿನಲ್ಲಿ ಮಗನ ಯೋಗಕ್ಷೇಮವನ್ನ ದರ್ಶನ್‌ ಅವರ ತಾಯಿ ಹಾಗೂ ಸಹೋದರ ವಿಚಾರಿಸುವ ನಿರೀಕ್ಷೆಗಳಿವೆ.

ಇತ್ತ ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಮತ್ತು ಗ್ಯಾಂಗ್​ ಇದೀಗ ಅಕ್ಷರಶಃ ವಿಲವಿಲ ಎನ್ನುತ್ತಿದ್ದಾರೆ. ಈ ಪ್ರಕರಣ ದಾಸ ಕೊನೆಗೂ ಜೈಲು ಸೇರುವಂತಾಗಿದ್ದು, ದರ್ಶನ್‌ ಜೈಲಿನಲ್ಲಿ ಸರಿಯಾಗಿ ಊಟ ತಿಂಡಿ, ನಿದ್ದೆ ಮಾಡುತ್ತಿಲ್ಲ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ನಟ ದರ್ಶನ್ ಹಾಗೂ ನಟಿ ಪವಿತ್ರಾಗೌಡ, ನಟ ಪ್ರದೂಶ್ ಸೇರಿ ಒಟ್ಟು 16 ಜನರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ದರ್ಶನ್‌ ಅವರನ್ನ ನೋಡಲು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದು ಗಂಡನ ಆರೋಗ್ಯವನ್ನ ವಿಚಾರಿಸಿದ್ದು, ಇತ್ತ ದರ್ಶನ್‌ ಅವರನ್ನ ಕುಟುಂಬಸ್ಥರು ವಿಚಾರಿಸಲು ಬಂದಿದ್ದಾರೆ. ನಮ್ಮ ಫ್ಯಾಮಿಲಿಯವರು ಯಾರು ಬಂದಿಲ್ಲ ಎಂದು ನಟಿ ಪವಿತ್ರಾ ಗೌಡ ಅವರು ಬೇಸರವನ್ನ ವ್ಯಕ್ತಪಡಿಸಿದ್ದಾರೆ.

ದರ್ಶನ್‌ ಕುಟುಂಬದ ಬಗ್ಗೆ ನಿರ್ದೇಶಕ ವಾಸು ಹೇಳಿದ್ದೇನು?

ದರ್ಶನ್‌ ಅವರ ತಾಯಿಗೆ ಕ್ಯಾನ್ಸರ್​ ಆದಾಗ ದರ್ಶನ್​ ಅವರು ಹುಡುಗರನ್ನು ಇಟ್ಟಿದ್ದರು. ಗಂಡ ಕಟ್ಟಿಸಿದ ಮೈಸೂರಿನ ಮನೆಯಲ್ಲೇ ಇರುತ್ತೇನೆ ಅಂತ ತಾಯಿ ಹೇಳಿದ್ದಾರೆ. ಹಾಗಾಗಿ ಅವರು ಮೈಸೂರಿನಲ್ಲಿ ಇದ್ದಾರೆ' ನಟ ದರ್ಶನ್‌ ಬೆಂಗಳೂರಿನಲ್ಲಿ ಇದ್ದಾರೆ ಎಂದು ಎಚ್​. ವಾಸು ಹೇಳಿದ್ದಾರೆ. ಮನುಷ್ಯ ಒಂದು ತಪ್ಪು ಮಾಡಿದ ತಕ್ಷಣ ಒಂದಕ್ಕೊಂದು ಲಿಂಕ್​ ಆಗುತ್ತದೆ. ಅದು ಸಹಜ. ಎಲ್ಲರೂ ಮಾತನಾಡುತ್ತಾರೆ. ಚೆನ್ನಾಗಿದ್ದಾಗ ಯಾರೂ ಆ ವಿಚಾರಗಳ ಬಗ್ಗೆ ಮಾತನಾಡುವುದೇ ಇಲ್ಲ. ತಾವು ಕಷ್ಟದಲ್ಲಿ ಇರುವ ಬಗ್ಗೆ, ಮನೆ ಇಲ್ಲ ಎಂಬ ಬಗ್ಗೆ ಯಾವ ವಾಹಿನಿಗೂ ಹೋಗಿ ದಿನಕರ್​ ಹೇಳಿಲ್ಲ.

ದಿನಕರ್ ಅವರು ಚೆನ್ನಾಗಿಯೇ ಇದ್ದಾರೆ. ಅವರದ್ದು ಒಂದು ಪಾಲಿಸಿ ಇದೆ. ತಮ್ಮದೇ ಸ್ವಂತ ದುಡ್ಡಿನಲ್ಲಿ ಮನೆ ಕಟ್ಟಬೇಕು ಎಂಬ ಉದ್ದೇಶ ಅವರಿಗೆ ಇದೆ. ಒಂದು ಮಾತು ಹೇಳಿದರೆ ದಿನಕರ್​ಗೆ ಮನೆ ಕೊಡಿಸೋಕೆ ದರ್ಶನ್​ಗೆ ಆಗಲ್ವಾ? ದಿನಕರ್ ಅವರು ಸೈಟ್​ ತೆಗೆದುಕೊಂಡು ಮನೆ ಕಟ್ಟುತ್ತಿದ್ದಾರೆ. ತುಂಬ ಬಡತನದಲ್ಲಿ ಅವರು ಇಲ್ಲ. ಹೀರೋ ತಮ್ಮ ಹೇಗೆ ಇರಬೇಕೋ ಹಾಗೆಯೇ ಇದ್ದಾರೆ. ಅಣ್ಣ-ತಮ್ಮನ ಹೊಂದಾಣಿಕೆ ಯಾವ ರೀತಿ ಇದೆಯೋ ಅವರಿಗೆ ಗೊತ್ತು. ಒಮ್ಮೆ ಜಗಳ ಆಡಬಹುದು. ಆದರೆ ಆಮೇಲೆ ಒಟ್ಟಿಗೆ ಸೇರುತ್ತಾರೆ ಎಂದು ನಟ ದರ್ಶನ್‌ ಅವರ ಕುಟುಂಬದ ಕುರಿತು ಎಚ್ ವಾಸು ಅವರು ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+