ದರ್ಶನ್ ತೂಗುದೀಪ್ ಜಾಮೀನು ಸಿಕ್ರೂ ಆ ಒಬ್ಬ ಕನ್ನಡ ನಟನ ನೋಡೋಕಾಗಲ್ಲ !
Darshan Thoogudeep: ನಟ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚರಣಾಧೀನ ಖೈದಿಯಾಗಿರುವ ದರ್ಶನ್‌ಗೆ ಕೊನೆಗೂ ಮಧ್ಯಂತರ ಜಾಮೀನು ಸಿಕ್ಕಿದೆ ನಿಜ. ಆದರೆ, ದರ್ಶನ್ ಅವರು ಈ ಜಾಮೀನಿನ ಅವಧಿಯಲ್ಲಿ ಕನ್ನಡದ ಈ ಪ್ರಮುಖ ನಟನನ್ನು ಭೇಟಿ ಮಾಡಲು ಅವಕಾಶ ಇರುವುದಿಲ್ಲ ಎಂದೇ ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಸಹ ಇದೆ.
ದರ್ಶನ್ ಅವರು ಬರೋಬ್ಬರಿ ನೂರಕ್ಕೂ ಹೆಚ್ಚು ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿದ್ದರು. ಈ ಅವಧಿಯಲ್ಲಿ ಅವರ ಆರೋಗ್ಯದಲ್ಲಿ ಹಲವು ಏರುಪೇರುಗಳಾಗಿದ್ದು, ಅವರು ಬೆನ್ನು ನೋವಿನಿಂದ ತೀವ್ರ ಸಂಕಷ್ಟವನ್ನು ಅನುಭವಿಸಿದ್ದರು. ಇದೇ ಕಾರಣಕ್ಕಾಗಿ ಅವರಿಗೆ ಇದೀಗ ಆರು ತಿಂಗಳ ಅವಧಿಗೆ ಮಧ್ಯಂತ ಜಾಮೀನು ಮಂಜೂರಾಗಿದೆ. ಆದರೆ, ಈ ಅವಧಿಯಲ್ಲಿ ಅವರಿಗೆ ಹಲವು ಷರತ್ತುಗಳನ್ನು ವಿಧಿಸಲಾಗುತ್ತಿದೆ.

Darshan gets interim bail for 6 weeks: ದರ್ಶನ್ ಅವರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಮಾತ್ರ ಇದೀಗ ಪ್ರಧಾನವಾಗಿ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, ಈ ಅವಧಿಯಲ್ಲಿ ಅವರು ಕನ್ನಡದ ಪ್ರಮುಖ ನಟರೊಬ್ಬರನ್ನು ದರ್ಶನ್ ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ.
ದರ್ಶನ್ ಅವರಿಗೆ ಜಾಮೀನು ಮಂಜೂರು ಮಾಡುತ್ತಿರುವ ವಿಷಯ ಇದೀಗ ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂತೋಷವನ್ನು ಸೃಷ್ಟಿ ಮಾಡಿದೆ. ದರ್ಶನ್ ಅವರ ಅಭಿಮಾನಿಗಳು ಕರ್ನಾಟಕದಾದ್ಯಂತ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಈಗ ಅವರಿಗೆ ಸಿಕ್ಕಿರುವುದು ಸಣ್ಣ ರಿಲೀಫ್ ಮಾತ್ರ ಅಂತ ಹೇಳಲಾಗ್ತಿದೆ. ಯಾಕೆಂದರೆ ದರ್ಶನ್ ಹಾಗೂ ಅವರ ಪರವಾಗಿ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಅವರ ವಕೀಲರು ಮೊದಲ ಹಂತದಲ್ಲಿ ಮೂರು ತಿಂಗಳ ಅವಧಿಗೆ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ, ಅವರಿಗೆ ಈಗ ಕೋರ್ಟ್‌ನಿಂದ ಆರು ವಾರಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಲಾಗಿದೆ. ಈ ಅವಧಿಯಲ್ಲಿ ಅಂದರೆ ಮಧ್ಯಂತರ ಜಾಮೀನಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಕೆಲವರನ್ನು ಭೇಟಿ ಮಾಡಬಾರದು ಎಂದು ಷರತ್ತುಗಳನ್ನು ವಿಧಿಸಲಾಗಿರುತ್ತದೆ ಎನ್ನಲಾಗಿದೆ.
ಈ ರೀತಿ ಷರತ್ತುಗಳಿಗೆ ಒಳಪಡುವ ವಿಷಯದಲ್ಲಿ ಕನ್ನಡ ಖ್ಯಾತ ನಟ ಹಾಗೂ ಕಮಿಡಿಯನ್ ಚಿಕ್ಕಣ್ಣ ಅವರು ಸಹ ಇದ್ದಾರೆ. ಚಿಕ್ಕಣ್ಣ ಅವರು ಸಹ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರರಾಗಿದ್ದಾರೆ. ಈ ಕಾರಣಕ್ಕಾಗಿ ದರ್ಶನ್ ಅವರು ಜಾಮೀನಿನ ಮೇಲೆ ಬಂದರೂ, ಈಗ ಅವರು ನಟ ಚಿಕ್ಕಣ್ಣ ಅವರನ್ನು ಭೇಟಿಯಾಗಲು ಅವಕಾಶ ಇರುವುದಿಲ್ಲ ಎಂದು ಹೇಳಲಾಗಿದೆ.
ಚಿಕ್ಕಣ್ಣ ಸಹ ಸಾಕ್ಷಿದಾರ: ನಟ ಚಿಕ್ಕಣ್ಣ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರಮುಖ ಸಾಕ್ಷಿದಾರರಾಗಿದ್ದಾರೆ. ಹೀಗಾಗಿ, ಅವರು ವಿಚಾರಣಾಧೀನ ಖೈದಿಯಾರಿರುವ ಹಾಗೂ ನಟ ದರ್ಶನ್ ತೂಗುದೀಪ್ ಅವರನ್ನು ಭೇಟಿ ಮಾಡುವಂತಿಲ್ಲ. ಈ ಹಿಂದೆಯೂ ಅವರು ಜೈಲಿನಲ್ಲಿದ್ದ ದರ್ಶನ್ ಅವರನ್ನು ಭೇಟಿ ಮಾಡಿ ವಿವಾದಕ್ಕೆ ಕಾರಣರಾಗಿದ್ದರು. ಪೊಲೀಸ್ ಅಧಿಕಾರಿಗಳು ಚಿಕ್ಕಣ್ಣ ಅವರಿಗೆ ವಾರ್ನಿಂಗ್ ಕೊಟ್ಟಿದ್ದರು.
ರೇಣುಕಾಸ್ವಾಮಿ ಕೊಲೆ ಆಗುವುದಕ್ಕೆ ಮೊದಲು ದರ್ಶನ್ ಹಾಗೂ ಗ್ಯಾಂಗ್ ನಡೆಸಿದ್ದ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಅವರು ಸಹ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಈ ಕೇಸ್‌ನ ವಿಚಾರಣೆ ನಡೆಯುವ ಸಂದರ್ಭದಲ್ಲಿಯೂ ಚಿಕ್ಕಣ್ಣ ಅವರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿತ್ತು. ಹೀಗಾಗಿ, ಇದೀಗ ಅದೇ ನಿಯಮ ಮುಂದುವರಿಯುತ್ತದೆ ಎಂದು ಹೇಳಲಾಗಿದೆ.












Click it and Unblock the Notifications