D Roopa Viral Audio : ರೋಹಿಣಿ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ : ರೋಹಿಣಿ ಬಗ್ಗೆ ಡಿ.ರೂಪಾ ಮಾತನಾಡಿರುವ ಆಡಿಯೋದಲ್ಲೇನಿದೆ?

ರೋಹಿಣಿ ಸಿಂಧೂರಿ ಊಸರವಳ್ಳಿ ಎಂದು ಡಿ ರೂಪಾ ಹೇಳಿದ್ದು, ಡಿ ರೂಪಾ ಅವರು ಮಾತನಾಡಿರುವ 25 ನಿಮಿಷದ ಆಡಿಯೋ ವೈರಲ್ ಆಗಿದೆ.

ಬೆಂಗಳೂರು,ಫೆಬ್ರವರಿ22: ಐಪಿಎಸ್ ಅಧಿಕಾರಿ ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ಕಿತ್ತಾಟಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ರು, ಡಿ ರೂಪಾ ನಡುವಿನ ಟಾಕ್ ವಾರ್ ದಿನಕ್ಕೊಂದು ಟ್ವಸ್ಟ್ ಪಡೆದುಕೊಳ್ಳುತ್ತಿದೆ.

ಇದೀಗ ಡಿ. ರೂಪಾ ಅವರು ಸಾಮಾಜಿಕ ಕಾರ್ಯಕರ್ತ ಗಂಗರಾಜುಗೆ ರೋಹಿಣಿ ವಿರುದ್ದ ದೂರು ನೀಡುವಂತೆ ಒತ್ತಡ ಹೇರಲಾಗಿದ್ದು, ಈ ಕುರಿತು ಡಿ.ರೂಪಾ ಹಾಗೂ ಗಂಗರಾಜು ನಡುವೆ ನಡೆದ 25 ನಿಮಿಷದ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.

ಡಿ ರೂಪಾ ಮಾತನಾಡಿರವ ಆಡಿಯೋದಲ್ಲೇನಿದೆ?

ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ, ನಾನು ಅವರನ್ನ ಅಲ್ಲಿ ಇರೋಕೆ ಬಿಡಲ್ಲ. ನಾನೇ ಟ್ರಾನ್ಸ್ ಫರ್ ಗೆ ರಿಕ್ವೆಸ್ಟ್ ಮಾಡಿದ್ದೀನಿ. ಆಯಮ್ಮ ಕ್ಯಾನ್ಸರ್ ಇದ್ದ ಹಾಗೆ ಎಲ್ಲರನ್ನೂ ಬುಟ್ಟಿಗೆ ಹಾಕ್ಕೋಳ್ತಾಳೆ. ಡಿಕೆ ರವಿ ವಿಷ್ಯದಲ್ಲೂ ಆಗಿದ್ದು ಹಾಗೆನೇ‌ ಎಂದು ಆಡಿಯೋದಲ್ಲಿ ಡಿ ರೂಪಾ ಹೇಳಿದ್ದಾರೆ.

D Roopa And Social Activist Gangaraju Conversation Audio Gone Viral

ರೋಹಿಣಿ ಗಂಡನ ಅಣ್ಣನನ್ನು ರಾಜಕೀಯಕ್ಕೆ ತರಲು ಪ್ರಯತ್ನ ಮಾಡುತ್ತಿದ್ದಾರೆ. ಇಂಥಾ ಡೋಂಗಿಗಳನ್ನ, ಊಸರವಳ್ಳಿಗಳನ್ನ ನೀವೇಕೆ ಸಪೋರ್ಟ್ ಮಾಡ್ತೀರಿ ನೀವು ಎಂದು ಸಾಮಾಜಿಕ ಕಾರ್ಯಕರ್ತರ ಗಂಗರಾಜ ಅವರಿಗೆ ಪ್ರಶ್ನಿಸಿದ್ದಾರೆ.

ಸಾ.ರಾ.ಮಹೇಶ್ ಹಿಂದೆ ಹೋಗಿ ನನ್ನ ಮೇಲೆ ದೂರು ವಾಪಸ್ ಪಡೀರಿ ಅಂತಾ ಬೇಡಿಕೊಂಡಿದ್ದಾರೆ. ಇದು ಸರಿನಾ ಸಾ.ರಾ.ಮಹೇಶ್ ಕೇಸ್ ತಗೋಳಿ ಅಂತಾ ನೀವು ಹೇಳಿ ಅಂತಾ ಹೆಚ್​ಡಿಕೆ, ದೇವೇಗೌಡರು, ಚಲುವರಾಯಸ್ವಾಮಿ, ಸ್ಪೀಕರ್ ಕಾಗೇರಿ ಹತ್ತಿರ ಬೇಡಿಕೊಂಡಿದ್ದಾರೆ. ಐಎಎಸ್ ರಮಣರೆಡ್ಡಿ, ಮಣಿವಣ್ಣನ್ ಮೂಲಕವೂ ಮಹೇಶ್ ಮೇಲೆ ಒತ್ತಡ ಹೇರಿದ್ದಾರೆ. ಆದ್ರೆ ಮಹೇಶ್ ಕೇಸ್ ವಾಪಸ್ ಪಡೆಯೋಕೆ ಒಪ್ಪಿಲ್ಲ. ಆಮೇಲೆ ಬೆಳಗಾವಿ ಸೆಷನ್ಸ್ ಟೈಮ್ ನಲ್ಲಿ ಮಣಿವಣ್ಣನ್ ಮೂಲಕ ರಾಜೀ ಸಂಧಾನಕ್ಕೆ ಭೇಟಿಯಾಗಿದ್ದಾರೆ. ಆದ್ರೂ ವರ್ಕೌಟ್ ಆಗಿಲ್ಲ, ಕೇಸೇ ವಾಪಸ್ ತಗೋಳೋಕೆ ಸಾ.ರಾ.ಮಹೇಶ್ ಒಪ್ಪಿಲ್ಲ.

D Roopa And Social Activist Gangaraju Conversation Audio Gone Viral

ಮೈಸೂರು ಡಿಸಿ ಕಚೇರಿಯಲ್ಲಿದ ಸಾಮಾನುಗಳು ಎಲ್ಲಿ ಹೋದ್ವು? ಜಾಲಹಳ್ಳಿಯಲ್ಲಿ ಮನೆ ಕಟ್ತಿದ್ದಾರೆ, ಆ ಮನೆ ಖರ್ಚಿನ ಚಾಟ್ ನನ್ನ ಹತ್ತಿರ ಇದೆ. ಫಾರಿನ್ ಆಫಿಸರ್ ಜತೆ ಚಾಟ್ ನನ್ನ ಹತ್ತಿರ ಇದೆ. ಗಂಡನ ಅಣ್ಣನನ್ನು ಪಾಲಿಟಿಕ್ಸ್ ಗೆ ತರಲು ಪ್ಲ್ಯಾನ್ ಮಾಡಿದ್ದಾಳೆ.

ಲ್ಯಾಂಡ್ ತಗೋಳೋಕೆ ನನ್ನ ಗಂಡನ ಹತ್ತಿರ ಹೆಲ್ಪ್ ತಗೋಂಡಿದ್ದಾಳೆ. ರೋಹಿಣಿ ಫ್ಯಾಮಿಲಿದು ಲ್ಯಾಂಡ್ ಬ್ಯುಸಿನೆಸ್, ರಿಯಲ್ ಎಸ್ಟೇಟ್ ಬ್ಯುಸಿನೆಸ್. ಕಬಿನಿ ಹತ್ತಿರ ಒಂದು ಲ್ಯಾಂಡ್ ಇದೆ ಅಂತಾ ಪಹಣ್ ಕೊಟ್ಟಿ ನನ್ನ ಗಂಡ ಲ್ಯಾಂಡ್ ರೆಕಾರ್ಡ್ಸ್ ನಲ್ಲಿ ಇರೋದ್ರಿಂದ ಹೆಲ್ಪ್ ತಗೋಂಡಿದ್ದಾಳೆ.

ನಮ್ಮ ಮನೆಯವರಿಗೆ ನಮ್ಮ ಮನೆ ಕಡೆ ಗಮನ ಇಲ್ಲ. ನಮ್ಮ ಫ್ಯಾಮಿಲಿಗೆ ಏನೂ ಯೂಸ್ ಇಲ್ಲ. ಬರೀ ಇಂಥೋರ್ ಕೆಲಸ ಮಾಡ್ಕೋಡ್ತಾರೆ. ನಾವೇನ್ ಒಂದು ಪೈಸಾ ಮಾಡಿದ್ದೀವಾ? ಮನೆ ಕಡೆ ಅವರಿಗೆ ಗಮನ ಇದ್ಯಾ ನಮ್ಮನೆಯವರಿಗೆ? ಎಷ್ಟು ಹಿಡಿದಿದ್ದೀನಿ ನಾನು. ಆ ಲ್ಯಾಂಡ್ ದು ಈ ಲ್ಯಾಂಡ್ ದು ಅಂತಾ ಮಾಹಿತಿ ತಗೋಂಡಿದ್ದಾಳೆ ಆಕೆ. ಆಯಮ್ಮನ ದೆಸೆಯಿಂದ ನಮ್ಮ ಕುಟುಂಬ ಚೆನ್ನಾಗಿಲ್ವಲ್ಲ ಈಗ. ಎಂಟು ವರ್ಷದಿಂದ ನೋಡ್ತಿದ್ದೀನಿ ನಾನು. ಆಯಮ್ಮ ನನ್ನ ಗಂಡನ ಹಿಂದೆ ಬಿದ್ದಿದ್ದಾಳೆ. ಅವರ ಹಿಂದೇನೆ ಬಿದ್ದಿದ್ದಾಳೆ. ಲೋಕಾಯುಕ್ತ ಕೇಸ್ ಗೂ ಅವರಿಂದಾನೆ ರಿಪ್ಲೇ ಬರೆಸಿಕೊಳ್ತಾಳೆ ಅಂತಾ ವೈರಲ್ ಆಡಿಯೋದಲ್ಲಿ ರೂಪಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+