ನಟ ಶಂಕರ್‌ನಾಗ್ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿದ ಡಿ.ಕೆ ಶಿವಕುಮಾರ್!
ಕನ್ನಡಿಗರ ಕಣ್ಮಣಿ ಹಾಗೂ ಪ್ರಸಿದ್ಧ ದಿವಂಗತ ನಟ ಶಂಕರ್ ನಾಗ್ ಅವರು ಜನ್ಮದಿನಾದ ಗೌರವಾರ್ಥವಾಗಿ ಕರ್ನಾಟಕದ ವಿವಿಧ ಭಾಗದಲ್ಲಿ ಸಂಭ್ರಮಾಚರಣೆ ನಡೆದಿದೆ. ಆಟೋ ಚಾಲಕರು ಹಾಗೂ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ರಾಜ್ಯದ ವಿವಿಧ ಭಾಗದಲ್ಲಿ ನಟ ಶಂಕರ್ ನಾಗ್ ಅವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದ್ದು. ಶಂಕರ್ ನಾಗ್ ಅವರ ಅಭಿಮಾನಿಗಳು ಡಿ.ಕೆ ಶಿವಕುಮಾರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಟ ಶಂಕರ್ ನಾಗ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿಯೇ ನಮ್ಮ ಮೆಟ್ರೋದ ನಿಲ್ದಾಣವೊಂದಕ್ಕೆ ಅವರ ಹೆಸರನ್ನು ಇರಿಸಬೇಕು ಎನ್ನುವ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಅಲ್ಲದೇ ಡಿ.ಕೆ ಶಿವಕುಮಾರ್ ಅವರು ಮಾಡಿರುವ ಟ್ವೀಟ್‌ಗೆ ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಏನು ಟ್ವೀಟ್ ಮಾಡಿದ್ದರು ಹಾಗೂ ಇದಕ್ಕೆ ಜನ ರಿಯಾಕ್ಟ್ ಮಾಡಿದ್ದೇನು ಅಂತ ನೋಡೋಣ.

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ನಿರ್ದೇಶಕ ಮತ್ತು ನಿರ್ಮಾಪಕರಾದ ಶಂಕರ್ ನಾಗ್ ಅವರ ಜನ್ಮದಿನದಂದು ಗೌರವ ನಮನಗಳು. ಮೂರು ದಶಕಗಳ ಹಿಂದೆಯೇ ಬೆಂಗಳೂರಿಗೆ ಮೆಟ್ರೋ ರೈಲು ಮತ್ತು ನಂದಿಬೆಟ್ಟಕ್ಕೆ ರೋಪ್ ವೇಯಂತಹ ಮಹತ್ವದ ಮೂಲಸೌಕರ್ಯಗಳ ಕನಸು ಕಂಡ ಶ್ರೇಯಸ್ಸು ಶಂಕರ್ ನಾಗ್ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಟಿ ಇಂದಿಗೂ ನಮಗೆಲ್ಲ ಸ್ಫೂರ್ತಿ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಡಿ.ಕೆ ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಟ್ರಿನಿಟಿ ಮೆಟ್ರೋ ನಿಲ್ದಾಣಕ್ಕೆ ನಟ ಶಂಕರ್ ನಾಗ್ ಮೆಟ್ರೋ ನಿಲ್ದಾಣ ಎಂದು ನಾಮಕರಣ ಮಾಡಿ, ಮೆಟ್ರೋ ಕನಸು ಕಂಡ ಶಂಕರ್ ನಾಗ್ ಅವರ ಹೆಸರಿನಲ್ಲಿ ಒಂದು ಮೆಟ್ರೋ ನಿಲ್ದಾಣ ಇಲ್ಲ ಅದನ್ನು ಮಾಡಿ ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ. ಅಧಿಕಾರದಲ್ಲಿ ಇದ್ದೀರಿ ನಮ್ಮ ಶಂಕರ್ ನಾಗ್ ಹೆಸರನ್ನು ಒಂದು ಮೆಟ್ರೋ ಸ್ಟೇಷನ್‌ಗಾದರು ಇರಿಸಿ..
ಅಧಿಕಾರದಲ್ಲಿ ಇದ್ದಾಗ ಕನ್ನಡ ಕನ್ನಡಿಗರ ಪರ ಕೆಲಸ ಮಾಡಿ. ಈ ರೀತಿ ವಿಶ್ ಮಾಡಿ ಟ್ವೀಟ್ ಹಾಕೋ ಬದಲು ಈ ರೀತಿ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಅವರ ಹೆಸರು ಇಟ್ಟಿದ್ದೀವಿ ಅಂತ ಟ್ವೀಟ್ ಮಾಡಿದ್ದರೆ ತುಂಬಾ ಸಂತೋಷ ಆಗುತ್ತಿತ್ತು ಎಂದು ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.











Click it and Unblock the Notifications