ಮೋದಿ ಬರ್ತಾರೆ ಅಂದ್ರೆ ಕಾಂಗ್ರೆಸ್‌ನವರಿಗೆ ಹೆದರಿಕೆ ಯಾಕೆ!?: ಸಿ ಟಿ ರವಿ ಹೇಳಿದ್ದೇನು.?

ಕುಮಾರಸ್ವಾಮಿ ಇತ್ತೀಚಿನ ಸಮಯ ನೋಡಿದ್ರೆ ಆರೋಗ್ಯದ ಬಗ್ಗೆ ಗಮನ ಕೊಡೋದು ಒಳ್ಳೆಯದು. ಆರಕ್ಕೆ ಏರಲ್ಲ,ಮೂರಕ್ಕೆ ಇಳಿಯಲ್ಲ ಅನ್ನೋ ಪರಿಸ್ಥಿತಿ ಇದೆ ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.

ಬೆಂಗಳೂರು,ಫೆಬ್ರವರಿ13: ಮೋದಿ ಬರ್ತಾರೆ ಅಂದ್ರೆ‌ 5% ರಿಂದ 10% ಮತಪ್ರಮಾಣ ಹೆಚ್ಚಾಗುತ್ತದೆ ಅದಕ್ಕೆ ಭಯ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ರಾಜ್ಯಕ್ಕೆ ಮೋದಿ ಪದೇ ಪದೇ ಭೇಟಿ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಟೀಕೆ‌ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೋದಿ ಬರ್ತಾರೆ ಅಂದ್ರೆ ಕಾಂಗ್ರೆಸ್‌ನವರಿಗೆ ಹೆದರಿಕೆ ಯಾಕೆ!?, ನಲ್ಲಿ ನೀರು ಬಿಡುವುದಕ್ಕೂ ಮೋದಿನೆ ಬರಬೇಕು ಅಂತ ರಾಮಲಿಂಗಾರೆಡ್ಡಿಯವರ ಹೇಳಿಕೆಯನ್ನ ಗಮನಿಸಿದೆ. ಮೋದಿ ಲಕ್ಷಾಂತರ ಮನೆಗಳಿಗೆ ನಲ್ಲಿ ನೀರು ಕೊಟ್ಟಿದ್ದಾರೆ ಎಂದು ಹೇಳಿದರು.

ಮೋದಿಯವರು ಬರೀ ಕರ್ನಾಟಕಕ್ಕೆ ಮಾತ್ರ ಬಂದಿಲ್ಲ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಚುನಾವಣಾ ಇಲ್ಲ ಅಂದ್ರೂ ಅಲ್ಲೂ ಹೋಗಿದ್ದಾರೆ. ಮೋದಿ ಹಾಲಿಡೇ ರಾಜಕಾರಣಿಯಲ್ಲ. ಕ್ರಿಸ್ಮಸ್ ಬಂದಾಗ ಒಂದು ದೇಶ ಅಂತ ಮೋದಿ ಹೋಗಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನ ಟೀಕಿಸಿದರು.

CT Ravi Outraged On Congress Leaders

ಕಾಂಗ್ರೆಸ್‌ನವರಿಗೆ ಅವರ ಪಾರ್ಟಿ ಲೀಡರ್ ಬಂದ್ರೆ ಲಾಸ್ ಅಷ್ಟೇ ಲಾಭ ಆಗಲ್ಲ. ಮೋದಿ ಬಂದರೆ ರಾಜ್ಯ ಮತ್ತು ಪಕ್ಷ ಎರಡಕ್ಕೂ ಲಾಭ. ಮೋದಿ‌ ನಮ್ಮ ಟೀಂ ಕ್ಯಾಪ್ಟನ್, ನಮ್ಮ ಪಕ್ಷ ಪ್ರತಿ‌ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್‌ನವರು ಗೆದ್ರೆ ಜನಾದೇಶ, ಸೋತರೆ ಇವಿಎಮ್ ದೋಷ ಅನ್ನೋದು. ನಾವು ಪರಿಶ್ರಮದಿಂದ ಪಕ್ಷ ಕಟ್ಟುತ್ತೇವೆ, ಪರಿಶ್ರಮದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು.

ಇನ್ನೂ ಕುಮಾರಸ್ವಾಮಿ ಇತ್ತೀಚಿನ ಸಮಯ ನೋಡಿದ್ರೆ ಆರೋಗ್ಯದ ಬಗ್ಗೆ ಗಮನ ಕೊಡೋದು ಒಳ್ಳೆಯದು, ಆರಕ್ಕೆ ಏರಲ್ಲ,ಮೂರಕ್ಕೆ ಇಳಿಯಲ್ಲ ಅನ್ನೋ ಪರಿಸ್ಥಿತಿ ಇದೆ. ಮನೆಯವರ ವಿಚಾರವೇ ಅವರಿಗೆ ಟೆನ್ಶನ್, ಹಾಗಾಗಿ ಆರೋಗ್ಯದ ಬಗ್ಗೆ ಗಮನ‌ ಕೊಡಲಿ ಎಂದು ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ವ್ಯಂಗ್ಯವಾಡಿದರು.

ಸಚಿವ ಆರ್ ಅಶೋಕ್ ಅವರು ಮಂಡ್ಯ ಉಸ್ತುವಾರಿ ಬದಲಿಸಿ ಎಂಬ ಪತ್ರದ ವಿಚಾರವಾಗಿ ಮಾತನಾಡಿ, ಉಸ್ತುವಾರಿ ಬದಲಿಸಿ ಅಂತ ಅಶೋಕ್ ಪತ್ರ ಬರೆದಿದ್ದಾರೆ ಅನ್ನೋದು ಮಾತ್ರ ಗೊತ್ತು. ಕರ್ನಾಟಕ ರಾಜ್ಯವನ್ನೇ ಲೀಡ್ ಮಾಡುವ ಸಾಮಾರ್ಥ್ಯ ಅಶೋಕ್‌ ಗಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+