ದೇವೇಗೌಡರನ್ನು ಇಂಗ್ಲಿಷ್‌ನಲ್ಲಿ ಹಾಡಿ ಹೊಗಳಿದ ಸಿ.ಟಿ.ರವಿ!
ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಇದೀಗ ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಸಿಟಿ ರವಿ, ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. ಹಾಗಾದ್ರೆ ಎಚ್‌ಡಿಡಿ ಬಗ್ಗೆ ಸಿಟಿ ರವಿ ಹೇಳಿದ್ದು ಏನು? ಯಾವ ವಿಚಾರಕ್ಕೆ ದೇವೇಗೌಡರನ್ನ ಸಿಟಿ ರವಿ ಹೊಗಳಿದ್ರು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಜಗತ್ತಿನ ಗಮನ ಸೆಳೆದಿದ್ದ ಒಡಿಶಾ ರೈಲು ದುರಂತದ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಮುಕ್ತವಾಗಿ ಮಾತನಾಡಿದ್ದರು. ದುರಂತ ಸಂಭವಿಸಿದ ಬಳಿಕ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದಣಿವರಿಯದಂತೆ ಕೆಲಸ ಮಾಡುತ್ತಿದ್ದಾರೆ, ಈ ಹಂತದಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಹೇಳಿದ್ದಾರೆ. ಇದೀಗ ಈ ಹೇಳಿಕೆ ಬಗ್ಗೆ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು ದೇವೇಗೌಡರನ್ನ ಹಾಡಿ ಹೊಗಳಿದ್ದಾರೆ.

ಮಾಜಿ ಪಿಎಂ ದೇವೇಗೌಡರ ಹೇಳಿಕೆಗೆ ಮೆಚ್ಚುಗೆ
ಜೂನ್ 2ರಂದು ಒಡಿಶಾದ ಬಾಲಸೋರ್‌ನಲ್ಲಿ 3 ರೈಲು ಏಕಕಾಲಕ್ಕೆ ಡಿಕ್ಕಿಯಾದ ಹಿನ್ನೆಲೆ 278 ಜನ ಸಾವನ್ನಪ್ಪಿ, 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ರೈಲು ದುರಂತದ ತನಿಖೆ ಸಿಬಿಐಗೆ ಒಪ್ಪಿಸಲಾಗಿದೆ. ಹಾಗೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 2 ದಿನ ದುರಂತ ನಡೆದಿದ್ದ ಸ್ಥಳದಲ್ಲೇ ಕಾರ್ಯಾಚರಣೆ ಮೇಲ್ವಿಚಾರಣೆ ಮಾಡಿದ್ದರು. ಆದರೂ ವಿಪಕ್ಷಗಳು ರಾಜೀನಾಮೆ ನೀಡುವಂತೆ ರೇಲ್ವೇ ಸಚಿವರನ್ನ ಒತ್ತಾಯಿಸಿದ್ದವು. ಈ ಕುರಿತಾಗಿ ದೇವೇಗೌಡರು ನೀಡಿದ್ದ ಹೇಳಿಕೆ ಪ್ರಬುದ್ಧವಾಗಿದೆ ಎಂದು ಬಿಜೆಪಿ ನಾಯಕರು ಹೊಗಳುತ್ತಿದ್ದಾರೆ. ಇದೇ ವೇಳೆ ಸಿಟಿ ರವಿ ಕೂಡ ಅದೇ ಮಾತು ಹೇಳಿದ್ದಾರೆ.
ಇಂಗ್ಲಿಷ್‌ನಲ್ಲಿ ಹಾಡಿ ಹೊಗಳಿದ ಸಿ.ಟಿ.ರವಿ!
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದೇವೇಗೌಡರ ಹೇಳಿಕೆ ಬಗ್ಗೆ ಬರೆದುಕೊಂಡಿರುವ ಸಿಟಿ ರವಿ, ಕ್ಷುಲ್ಲಕ ರಾಜಕೀಯಕ್ಕಿಂತಲೂ ದೇಶದ ಹಿತಾಸಕ್ತಿಯನ್ನ ಯಾವಾಗಲೂ ಗೌರವಿಸುವ ವಿರೋಧ ಪಕ್ಷದ ನಾಯಕರೊಬ್ಬರಿದ್ದರೆ ಅದು ಮಾಜಿ ಪ್ರಧಾನಿ ಶ್ರೀ ದೇವೇಗೌಡರು ಮಾತ್ರ. ಹಲವು ದಶಕಗಳಿಂದ, ದೇವೇಗೌಡರು ಕಠಿಣ ಪರಿಶ್ರಮ & ದೇಶದ ಬಗ್ಗೆ ತೋರುವ ಬದ್ಧತೆಯಿಂದ ಎಲ್ಲಾ ಜನರಿಂದ ಗೌರವ ಗಳಿಸಿದ್ದಾರೆ ಎಂದಿದ್ದಾರೆ. ಈಗ ಸಿಟಿ ರವಿ ಅವರ ಟ್ವೀಟ್ ವೈರಲ್ ಆಗುತ್ತಿದೆ. ಹಾಗೇ ಸಿಟಿ ರವಿ ಅವರ ಪ್ರತಿಕ್ರಿಯೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

)If there is one Opposition Leader who always places the Nation above petty politics, it is former Prime Minister Shri @H_D_Devegowda avaru.
— C T Ravi 🇮🇳 ಸಿ ಟಿ ರವಿ (@CTRavi_BJP) June 7, 2023
Over many decades, Gowdaru has earned the respect from people of all age groups due to His determination, hard work & commitment to Bharat. https://t.co/Dcccvgbqtj
ರಾಷ್ಟ್ರ ರಾಜಕಾರಣಕ್ಕೆ ಸಿಟಿ ರವಿ?
ಹೌದು, ಈ ಪ್ರಶ್ನೆ ಬಹುತೇಕರನ್ನ ಕಾಡ್ತಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಸಿಟಿ ರವಿ ಈಗ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ರಾಷ್ಟ್ರ ರಾಜಕಾರಣದಲ್ಲಿ ಆಕ್ಟಿವ್ ಆಗಿದ್ದಾರೆ. ಈ ಕಾರಣಕ್ಕೆ ರವಿ ರಾಜ್ಯ ರಾಜಕಾರಣ ಬಿಟ್ಟು ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ? ಅನ್ನೋ ಪ್ರಶ್ನೆ ಬಹುತೇಕರನ್ನ ಕಾಡುತ್ತಿದೆ. ಏಕೆಂದರೆ 2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲ ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ರವಿ ಲೋಕಸಭೆಗೆ ಸ್ಪರ್ಧೆ ಮಾಡುವ ಸಿದ್ಧತೆ ನಡೆಸಿದ್ದಾರಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕಾಡುತ್ತಿದೆ. ಈ ಮಧ್ಯೆ ದೇವೇಗೌಡರ ಬಗ್ಗೆ ಸಿಟಿ ರವಿ ಟ್ವೀಟ್ ವೈರಲ್ ಆಗ್ತಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಈ ಬಾರಿ ಚನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಆದರೆ ಚುನಾವಣೆಗೆ ಮೊದಲು ತಾವು ಸಿಎಂ ಆಗಬೇಕು ಎಂಬ ಬಯಕೆ ಹೊಂದಿದ್ದರು. ಇದೇ ಕಾರಣಕ್ಕೆ ಸಿಟಿ ರವಿ ನಾನೂ ಕೂಡ ಸಿಎಂ ಆಕಾಂಕ್ಷಿ ಎಂದು ಚುನಾವಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಹೀಗೆ ಮುಂದೆ ನಾನೂ ಸಿಎಂ ಆಗ್ತೀನಿ ಎಂಬ ಆಸೆಯನ್ನು ರವಿ ಹೊಂದಿದ್ದರು, ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಸಿಟಿ ರವಿ ಸಿಎಂ ಆಸೆ ಭಗ್ನವಾಗಿದೆ. ಈ ಹಿನ್ನೆಲೆಯಲ್ಲಿ ಈಗ ರಾಷ್ಟ್ರ ರಾಜಕಾರಣಕ್ಕೆ ಸಿಟಿ ರವಿ ಎಂಟ್ರಿ ಕೊಟ್ಟು ಸೌಂಡ್ ಮಾಡ್ತಾರಾ? ಅನ್ನೋ ಡೌಟ್ ಕಾಡುತ್ತಿದೆ.












Click it and Unblock the Notifications