ಬಿಪಿಎಲ್ ಬಳಕೆದಾರರಿಗೆ ಹೊಸ ಸಂಕಷ್ಟ; ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಕೈ ತಪ್ಪುವ ಆತಂಕ! ಏನು ಹೊಸ ಸೂಚನೆ?
ಬೆಂಗಳೂರು, ಸೆಪ್ಟೆಂಬರ್ 02: ಬಿಪಿಎಲ್ ಬಳಕೆದಾರರಿಗೆ ಹೊಸ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿ ಯೋಜನೆಗಳನ್ನ ಹಂತ ಹಂತವಾಗಿ ಜಾರಿಗೊಳಿಸಿದ್ದು, ಬಿಪಿಎಲ್ ಕಾರ್ಡ್ ಮುಖ್ಯಸ್ಥ ಗಂಡಸರಾಗಿದ್ದರೆ ಅನ್ನಭಾಗ್ಯ ಸ್ಕೀಂ ಸಿಗುವುದಿಲ್ವಂತೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಬಿಪಿಎಲ್, ಎಪಿಎಲ್ ಕಾರ್ಡ್ ಮನೆಯೊಡತಿಯೇ ಇರಬೇಕು ಎಂದು ಹೇಳಲಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳನ್ನ ಜಾರಿಗೊಳಿಸಿದ್ದು, ಫಲಾನುಭವಿಗಳು ಕೂಡ ಅದರ ಉಪಯೋಗವನ್ನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಈ ಮಧ್ಯೆ ಬಿಪಿಎಲ್ ಫಲಾನುಭವಿಗಳಿಗೆ ಹೊಸ ಸಮಸ್ಯೆ ಎದುರಾಗಿದೆ. ಬಿಪಿಎಲ್ ಕಾರ್ಡ್ನಲ್ಲಿ ಮುಖ್ಯಸ್ಥರು ಪುರುಷರಾಗಿದ್ದರೆ ಅನ್ನಭಾಗ್ಯ ಗೃಹಲಕ್ಷ್ಮಿ ಸ್ಕೀಂ ಲಾಭಪಡೆಯಲಾಗಲ್ಲ ಎಂದು ಹೇಳಲಾಗುತ್ತಿದೆ.

ಬಿಪಿಎಲ್ ಕಾರ್ಡ್ಗಳ ಮುಖ್ಯಸ್ಥರು ಪುರುಷರೇ ಆಗಿದ್ದರೇ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಸ್ಕೀಮ್ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ಬಿಪಿಎಲ್ ಕಾರ್ಡ್ ನಲ್ಲಿ 18 ವರ್ಷದ ಒಳಗಿದ್ದ ಬಾಲಕಿಯರು ಇದ್ರೆ ತೊಂದರೆ ಇಲ್ಲ. ಆದರೆ , ವಯಸ್ಕ ಮಹಿಳೆ ಇದ್ದೂ ಕಾರ್ಡ್ ಮುಖ್ಯಸ್ಥ ಗಂಡಸರಾಗಿದ್ದರೆ ಅನ್ನಭಾಗ್ಯ ಸ್ಕೀಂ ಸಿಗುವುದಿಲ್ವಂತೆ. ಗೃಹಲಕ್ಷ್ಮಿ ಅರ್ಜಿ ಸಲ್ಲಿಸಲು ಬಿಪಿಎಲ್, ಎಪಿಎಲ್ ಕಾರ್ಡ್ ಮನೆಯೊಡತಿಯೇ ಇರಬೇಕು.
ಈ ಕಾರ್ಡ್ ನಲ್ಲಿ ಮನೆಯೊಡತಿ ಹೆಸರು ಇಲ್ಲದಿದ್ದರೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಎರಡೂ ಸ್ಕೀಂಗೂ ಅನರ್ಹರಾಗಿರುತ್ತಾರಂತೆ. ಯಾಕೆಂದರೆ ಕಾಂಗ್ರೆಸ್ ಸರ್ಕಾರ ಈ ಎರಡು ಯೋಜನೆಗಳನ್ನು ಮಹಿಳೆಯರಿಗೆ ಹೆಚ್ಚು ಪ್ರಧಾನ್ಯತೆಯನ್ನ ನೀಡುತ್ತಿರುವುದುರಿಂದ ಜೊತೆಗೆ ಬ್ಯಾಂಕ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮಾಹಿತಿಯನ್ನ ಆಧಾರಿಸಿ ಈ ನಿಯಮವನ್ನ ಕಡ್ಡಾಯ ಮಾಡಲಾಗಿದೆ.

ಇನ್ನೂ ನಿಯಮದ ಪ್ರಕಾರ ಬಿಪಿಎಸ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು, ವಯಸ್ಕ ಮಹಿಳೆಯರು ಇದ್ದೂ ಪುರುಷ ಮುಖ್ಯಸ್ಥ ಇರುವ ಕಾರ್ಡ್ ನಿಂದ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದರೇ ಆ ಅರ್ಜಿಗಳು ಸ್ವೀಕಾರವಾಗುತ್ತಿಲ್ಲ. ಅಲ್ಲದೇ ಬಿಪಿಎಲ್ ಕಾರ್ಡ್ ದಾರರಿಗೆ ಗೃಹಲಕ್ಷ್ಮಿಯ ಎರಡು ಸಾವಿರ ದುಡ್ಡು ಕೂಡ ಸಿಗೋದಿಲ್ಲ ಎಂದು ಹೇಳಲಾಗಿದ್ದು, ಈ ಹೆಸರು ತಿದ್ದುಪಡಿಗಾಗಿ ಈಗಾಗಲೇ ಆಹಾರ ಇಲಾಖೆ ಸಮಯ ನಿಗದಿ ಮಾಡಿದೆ. ಬಿಪಿಎಲ್ ಕಾರ್ಡ್ ಬಳಕೆಯ ಮನೆಯೊಡತಿ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1 ರಿಂದ 10 ರವರೆಗೆ ಅವಕಾಶ ನೀಡಿದ್ದು, ಈ ಹತ್ತು ದಿನದಲ್ಲಿ ಹೆಸರು ಬದಲಾವಣೆ ಮಾಡಿಸಿಕೊಳ್ಳಲು ಅವಕಾಶ ನೀಡಿದೆ ಎಂದು ತಿಳಿದು ಬಂದಿದೆ.
ಇನ್ನು, ಆಹಾರ ಇಲಾಖೆಯ ಮಾಹಿತಿ ಪ್ರಕಾರ 94 % ರಷ್ಟು ಮಹಿಳೆಯರು ಬಿಪಿಎಲ್ ಕಾರ್ಡ್ ಗಳ ಮುಖ್ಯಸ್ಥರಾಗಿದ್ದಾರೆ. ಇನ್ನು 5 % ರಷ್ಟು ಕಾರ್ಡ್ ಗಳಲ್ಲಿ ಪುರುಷರು ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ 1.28 ಕೋಟಿ ಫಲಾನುಭವಿಗಳ ಪೈಕಿ ಸಧ್ಯ 1.11 ಕೋಟಿಯಷ್ಟು ಅರ್ಜಿಸಲ್ಲಿಕೆಯಾಗಿದ್ದು, ಇನ್ನು 18 ಲಕ್ಷದಷ್ಟು ಮಹಿಳೆಯರು ಅರ್ಜಿ ಸಲ್ಲಿಸುವುದು ಬಾಕಿ ಇದೆ ಎಂದು ಹೇಳಲಾಗಿದೆ.
ಇನ್ನೂ ಆರು ಲಕ್ಷದಷ್ಟು ಕಾರ್ಡ್ ಗಳು ಬಿಪಿಎಲ್ ಕಾರ್ಡ್ ಗಳಲ್ಲಿ ಮುಖ್ಯಸ್ಥೆಯರು ಅಲ್ಲದೇ ಇರುವುದು ಕಂಡುಬಂದಿರುವುದೇ ಅರ್ಜಿ ಸಲ್ಲಿಕೆಗೆ ಸಮಸ್ಯೆಯಾಗುತ್ತಿದೆ ಎನ್ನಲಾಗುತ್ತಿದೆ. ಆದಷ್ಟು ಬೇಗ ಮಹಿಳೆಯರು ಬೆಂಗಳೂರು ಒನ್ ಕೇಂದ್ರಗಳಲ್ಲಿ, ಗ್ರಾಮ ಒನ್ ಸೆಂಟರ್, ಕರ್ನಾಟಕ ಒನ್ ಸೆಂಟರ್ ಗಳಲ್ಲಿ ತಮ್ಮ ಹೆಸರುಗಳನ್ನ ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
-
ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಪೂರಕ ವಾತಾವರಣ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಸಿಎಂ -
ಉಜ್ವಲ ಯೋಜನೆ ಬದಲು ಸೌದೆ ಒಲೆ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ












Click it and Unblock the Notifications