ಕಾಸರಗೋಡಿನಿಂದ ಬಂದ ಮೂವರ ವಿರುದ್ಧ ಕ್ರಿಮಿನಲ್ ಕೇಸ್
ಬೆಂಗಳೂರು, ಮೇ 22 : ಕೊರೊನಾ ಹರಡದಂತೆ ತಡೆಯಲು ಕೇರಳದಿಂದ ಜನರು ಕರ್ನಾಟಕವನ್ನು ಪ್ರವೇಶ ಮಾಡದಂತೆ ಸರ್ಕಾರ ನಿರ್ಬಂಧ ಹೇರಿದೆ. ಇದನ್ನು ಉಲ್ಲಂಘನೆ ಮಾಡಿ ಬಂದ ಐದು ಜನರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ.
Recommended Video
ಕಾಸರಗೋಡಿನಿಂದ ಕರ್ನಾಟಕಕ್ಕೆ ಅಕ್ರಮವಾಗಿ ಬಂದ ಮೂವರು ಮತ್ತು ಅವರಿಗೆ ಆಶ್ರಯ ನೀಡಿದ ಕರ್ನಾಟಕದ ಇಬ್ಬರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಮೂವರು ಮಹಿಳೆಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇಬ್ಬರು ಪುರುಷರು ಪರಾರಿಯಾಗಿದ್ದಾರೆ.
ಕೇರಳದ ಕಾಸರಗೋಡಿನಲ್ಲಿ ಕೊರೊನಾ ಪ್ರಕರಣ ಹೆಚ್ಚಾದಾಗ ಭಯಗೊಂಡ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮೇ 14ರಂದು ಅಲ್ಲಿಂದ ಕರ್ನಾಟಕದ ಶಿರಾ ಗೇಟ್‌ನಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸುವ ಹೊರಟಿದ್ದಾರೆ.

ಆದರೆ, ಕೇರಳದಿಂದ ಮೇ 31ರ ತನಕ ಯಾರೂ ರಾಜ್ಯಕ್ಕೆ ಆಗಮಿಸಬಾರದು ಎಂದು ಕರ್ನಾಟಕ ನಿರ್ಬಂಧ ಹೇರಿದೆ. ಮೇ 18ರಂದು ಅವರು ಶಿರಾಗೇಟ್‌ಗೆ ಆಗಮಿಸಿದಾಗ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ತಕ್ಷಣ ಆರೋಗ್ಯ, ಪೊಲೀಸ್ ಇಲಾಖೆ ಅಧಿಕಾರಿಗಳು ಮನೆಗೆ ಧಾವಿಸಿದ್ದಾರೆ.
ಆಗ ಮನೆಯಲ್ಲಿ ಮೂವರು ಮಹಿಳೆಯರು ಇದ್ದರು. ಕಾಸರಗೋಡಿನಿಂದ ಬಂದಿದ್ದು ನಮ್ಮ ದೂರದ ಸಂಬಂಧಿಕರು ಎಂದು ಮನೆಯವರು ಹೇಳಿದ್ದಾರೆ. ಶಿರಾಗೇಟ್ ಸಮೀಪದಲ್ಲಿನ ದಂಪತಿಗಳು ಅವರಿಗೆ ಆಶ್ರಯ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಕಾಸರಗೋಡಿನಿಂದ ಬಂದಿದ್ದ ಪುರುಷ ಮತ್ತು ಆಶ್ರಯ ನೀಡಿದ್ದ ಮನೆಯಲ್ಲಿದ್ದ ಪುರುಷ ಪೊಲೀಸರ ಭಯದಿಂದ ಪರಾರಿಯಾಗಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ಆರೋಗ್ಯ ತಪಾಸಣೆ ನಡೆಸಿ ಕ್ವಾರಂಮಟೈನ್‌ಗೆ ಹಾಕಿದ್ದಾರೆ. ಪುರುಷರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇವರು ಬೇರೆ ಯಾರ ಸಂಪರ್ಕಕ್ಕೆ ಬಂದಿದ್ದಾರೆ? ಎಂದು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.
ಕರ್ನಾಟಕ ಸರ್ಕಾರ ಗುಜರಾತ್, ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಿಂದ ಯಾರೂ ರಾಜ್ಯಕ್ಕೆ ಮೇ 31ರ ತನಕ ಆಗಮಿಸಬಾರದು ಎಂದು ಹೇಳಿದೆ. 4ನೇ ಹಂತದ ಲಾಕ್ ಡೌನ್ ಮಾರ್ಗಸೂಚಿ ಪ್ರಕಟಿಸುವಾಗ ಈ ನಿರ್ಬಂಧ ಹೇರಲಾಗಿದೆ.












Click it and Unblock the Notifications