ಅಧಿಕಾರ ಎಲ್ಲಿ ಸಿಗುತ್ತೋ, ಸಿ ಪಿ ಯೋಗೇಶ್ವರ್ ಅಲ್ಲಿಗೆ ಜಂಪ್ ಆಗ್ತಾರೆ: ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು, ಅಕ್ಟೋಬರ್‌ 23: ಸಿಪಿ ಯೋಗೇಶ್ವರ್ ಅವರಿಗೆ 25 ವರ್ಷ ರಾಜಕೀಯ ಅನುಭವವಿದೆ. ಅವರು ಒಂದು ಕಮಿಂಟ್ಮೆಂಟ್ ಇಟ್ಟುಕೊಂಡು ರಾಜಕೀಯ ಮಾಡಿಲ್ಲ. ಎಲ್ಲಿ ಅಧಿಕಾರ ಸಿಗುತ್ತೋ ಅಲ್ಲಿಗೆ ಜಂಪ್ ಆಗ್ತಾರೆ ಎಂದು‌ ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.

ಹೆಚ್‌ ಡಿ ದೇವೆಗೌಡರ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದೇವೇಗೌಡರು ಕರೆ ಮಾಡಿದ್ದರು, ಇಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ದೇವೇಗೌಡರು ಹೇಳಿದ್ದು ಒಂದೇ. ಲೋಕಸಭಾ ಚುನಾವಣೆ ಸಮಯದಲ್ಲಿ NDA ಮೈತ್ರಿ ತೆಗೆದಕೊಂಡ ತೀರ್ಮಾನ ಏನಿದೆ. ಆ ತೀರ್ಮಾನಕ್ಕೆ ರಾಜ್ಯದ ಜನತೆ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಆರ್ಶೀವಾದ ಮಾಡಿದ್ದಾರೆ ಎಂದರು.

CP Yogeshwara will go wherever he gets power Nikhil Kumaraswamy said

ಇವತ್ತು ಸೋಲು ಗೆಲವು ನಿರ್ಧಾರ ಮಾಡೋದು ಜನಗಳು.ಚನ್ನಪಟ್ಟಣದಲ್ಲಿ ಯಾವ ರೀತಿ ರಾಜಕೀಯವಾಗಿ ಡೆವೆಲಪ್ಮೆಂಟ್ ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಚನ್ನಪಟ್ಟಣ ಜನರು ಪ್ರಬುದ್ದರಿದ್ದಾರೆ.13 ನೇ ತಾರೀಖು ಅವರು ನಿರ್ಧಾರ ಮಾಡುತ್ತಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು ಎಂದರು.

ಬಿಜೆಪಿ ನಾಯಕರು ಸಿ ಪಿ ಯೋಗೇಶ್ವರ್ ಬಿಡೋ ವಿಚಾರ ಮಾಡಿಲ್ಲ. ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಜೆಡಿಎಸ್ ಪಕ್ಷದಲ್ಲೇ ಅವರು ಸ್ಪರ್ಧೆ ಮಾಡಬಹುದಿತ್ತು‌. ದೇವೇಗೌಡರು ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಬಹುದಿತ್ತು. ನಾನು ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಲ್ಲ. ಕಳೆದ ಎರಡು ತಿಂಗಳಿಂದ ಸಿ ಪಿ ಯೋಗೇಶ್ವರ್‌ ಕಾಂಗ್ರೆಸ್ ಅವರ ಜೊತೆ ಸಂಪರ್ಕದಲಿದ್ದರು. ರಾಜಕಾರಣವನ್ನ ಅಳೆದು ತೂಗಿ ಮಾಡೋ ಬುದ್ದಿಜೀವಿಗಳಿಗೆ ಮುಂದಿನ ಜೀವನ ಅವರಿಗೆ ಗೊತ್ತಾಗುತ್ತದೆ ಎಂದರು.

ಕಾಂಗ್ರೆಸ್ ಬಳಿ 136 ಶಾಸಕರಿದ್ದು ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆಂಬ ವಿಚಾರಕ್ಕೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ 136 ಶಾಸಕರನ್ನಿಟ್ಟುಕೊಂಡಿದ್ದಾರೆ. ಉಪಮುಖ್ಯಮಂತ್ರಿ ಸಹೋದರ ಹೆಸರು, ಡಿಕೆ ಸುರೇಶ್ ಅವರ ಸ್ಪರ್ಧೆಗೆ ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಬಯಸಿದ್ದಾರೆ. ಸ್ವತಃ ಅವರು ಕೂಡ ಸ್ಪರ್ಧೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಸಚಿವರೂ ಸೇರಿದಂತೆ ಡಿ.ಕೆ ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಯಾಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಧೈರ್ಯ ಮಾಡಲಿಲ್ಲ? ಡಿ.ಕೆ.ಸುರೇಶ್ ನಿಲ್ಲುವ ಧೈರ್ಯ ಪ್ರದರ್ಶನ ಮಾಡಲಿಲ್ಲ ಯಾಕೆ? ಆದರೆ, ಹೊರಗಿನಿಂದ ಹೈಜಾಕ್ ಮಾಡಿ ಅಭ್ಯರ್ಥಿ ಮಾಡ್ತಿದ್ದಾರೆ ಯಾಕೆ? ಎಂದು ನಿಖಿಲ್ ಪ್ರಶ್ನಿಸಿದರು.

ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಾಯ ವಿಚಾರಕ್ಕೆ ಮಾತನಾಡಿದ ಅವರು, ನಾನು ಎರಡು ತಿಂಗಳಿಂದ ಹೇಳಿಕೆ ಕೊಡ್ತಾ ಇದ್ದೇನೆ..ನಾನು ಸ್ಪರ್ಧೆ ಮಾಡ್ತೀನಿ ಎಂದು ಎಲ್ಲೂ ಹೇಳಿಕೆ ನೀಡಿಲ್ಲ. NDAಯಿಂದ ಫೈನಲ್ ಅಭ್ಯರ್ಥಿ ಘೋಷಣೆ ಆಗಬೇಕು ಎಂದರು.

ಲಕ್ಷಾಂತರ ಕಾರ್ಯಕರ್ತರ ದುಡಿಮೆಯಿಂದ ಕಟ್ಟಿರೋ ಪಕ್ಷ ನಮ್ಮದು. ಎರಡು ಪಕ್ಷದ ಮುಖಂಡರು ಕುಳಿತು ಚರ್ಚೆ ಮಾಡಿ ಅಭ್ಯರ್ಥಿಯನ್ನ ತೀರ್ಮಾನ ಮಾಡ್ತಾರೆ ಎಂದರು. ನನ್ನ ವೈಯಕ್ತಿಕ ಅಭಿಪ್ರಾಯ ಪ್ರಕಾರ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಅಧಿಕಾರ ಸಿಕ್ಕಿದ್ರೆ ಅದು ನಿಖಿಲ್ ಕುಮಾರಸ್ವಾಮಿಗೆ ಸಿಕ್ಕ ಅಧಿಕಾರ ಎಂದರು.

ನಮ್ಮ‌ NDA ಸಂಬಂಧಕ್ಕೆ ಯಾವುದೇ ಚ್ಯುತಿ ಬರಬಾರದು. ನಮ್ಮಿಂದ ಯಾವುದೇ ಪ್ರಶ್ನೆ ಎದುರಾಗಬಾರದು ಎಂದಿದ್ದಾರೆ. ಯಾವುದೇ ಉದ್ವೇಗಕ್ಕೆ ಒಳಗಾಗಿ ಸಾವರ್ಜನಿಕ ಚರ್ಚೆಗೆ ತೀರ್ಮಾನ ಮಾಡಬಾರದು.ಇಂದು ಸಂಜೆ 7 ಗಂಟೆಗೆ NDA ನಾಯಕರ ಸಭೆ ಇದೆ. ಆರ್ ಅಶೋಕ್, ವಿಜಯೇಂದ್ರ ಜೆಡಿಎಸ್ ಬಿಜೆಪಿ ರಾಜ್ಯ ನಾಯಕರೆಲ್ಲರೂ ಭಾಗಿಯಾಗ್ತಾರೆ. ಅಲ್ಲಿ ಅಭ್ಯರ್ಥಿ ಯಾರು ಅಂತ ಚರ್ಚೆ ಆಗ್ತಾರೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+