ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಕೇರ್ ಸೆಂಟರ್ ಆಗಲಿದೆ ಕರ್ನಾಟಕದ 14 ರೈಲು ನಿಲ್ದಾಣ

|
Google Oneindia Kannada News

ಬೆಂಗಳೂರು, ಮೇ 08 : ದೇಶದ 215 ರೈಲು ನಿಲ್ದಾಣಗಳನ್ನು 'ಕೋವಿಡ್ ಕೇರ್ ಸೆಂಟರ್' ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಇವುಗಳಲ್ಲಿ ಕರ್ನಾಟಕದ 14 ರೈಲು ನಿಲ್ದಾಣಗಳು ಸೇರಿದ್ದು, ಇಲ್ಲಿ ರೈಲ್ವೆ ಇಲಾಖೆ ನಿರ್ಮಾಣ ಮಾಡಿದ ಐಸೋಲೇಷನ್ ವಾರ್ಡ್‌ ಇರಲಿದೆ.

ಭಾರತೀಯ ರೈಲ್ವೆ ತುರ್ತು ಸಂದರ್ಭದಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ರೈಲು ಬೋಗಿಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಿದೆ. ಈ ವಾರ್ಡ್‌ಗಳನ್ನು 'ಕೋವಿಡ್ ಕೇರ್ ಸೆಂಟರ್' ಎಂದು ಕೇಂದ್ರ ಸರ್ಕಾರ ಗುರುತಿಸಿದೆ.

ಕೋವಿಡ್ - 19 ಚಿಕಿತ್ಸೆಗಾಗಿ 215 ರೈಲ್ವೆ ನಿಲ್ದಾಣ ಗುರುತಿಸಿದ ಕೇಂದ್ರಕೋವಿಡ್ - 19 ಚಿಕಿತ್ಸೆಗಾಗಿ 215 ರೈಲ್ವೆ ನಿಲ್ದಾಣ ಗುರುತಿಸಿದ ಕೇಂದ್ರ

ದೇಶದ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 215 ರೈಲು ನಿಲ್ದಾಣಗಳನ್ನು 'ಕೋವಿಡ್ ಕೇರ್ ಸೆಂಟರ್' ಎಂದು ಗುರುತಿಸಲಾಗಿದೆ. ಇವುಗಳಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಬರುವ 14 ನಿಲ್ದಾಣಗಳು ಸೇರಿವೆ. ಈ ಕೇರ್ ಸೆಂಟರ್‌ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು ಕನ್ನಡಿಗರಿಗಾಗಿ ದೆಹಲಿ-ಬೆಂಗಳೂರು ನಡುವೆ ವಿಶೇಷ ರೈಲು

ರೈಲ್ವೆ ಕೋಚ್‌ಗಳನ್ನು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲು ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಪ್ರಕಟಿಸಿದೆ. ಹದಿನಾಲ್ಕು ರೈಲು ನಿಲ್ದಾನಗಳ ವಿವರಗಳು ಇಲ್ಲಿವೆ...

ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ ಶ್ರಮಿಕ್ ವಿಶೇಷ ರೈಲಿನ ದರ; ರೈಲ್ವೆ ಇಲಾಖೆಯ ಸ್ಪಷ್ಟನೆ

14 ರೈಲು ನಿಲ್ದಾಣಗಳ ವಿವರ

14 ರೈಲು ನಿಲ್ದಾಣಗಳ ವಿವರ

ನೈಋತ್ಯ ರೈಲ್ವೆ ವ್ಯಾಪ್ತಿಗೆ ಬರುವ ಬೆಂಗಳೂರು, ಹುಬಳ್ಳಿ, ಮೈಸೂರು, ಯಶವಂತಪುರ, ಹರಿಹರ, ಶಿವಮೊಗ್ಗ ಟೌನ್, ಹೊಸಪೇಟೆ, ಹಾಸನ, ಅರಸೀಕೆರೆ, ಬಾಗಲಕೋಟೆ, ತಾಳಗುಪ್ಪ, ವಿಜಯಪುರ, ಬೆಳಗಾವಿ ಮತ್ತು ವಾಸ್ಕೋಡಗಾಮ ರೈಲು ನಿಲ್ದಾಣದಲ್ಲಿ ಐಸೋಲೇಷನ್ ವಾರ್ಡ್ ಹೊಂದಿರುವ ಬೋಗಿ ಇರಲಿದೆ.

320 ಕೋಚ್‌ಗಳಿವೆ

320 ಕೋಚ್‌ಗಳಿವೆ

ಭಾರತೀಯ ರೈಲ್ವೆ ನೈಋತ್ಯ ರೈಲ್ವೆಗೆ 312 ಕೋಚ್‌ಗಳನ್ನು ಐಸೋಲೇಷನ್ ವಾರ್ಡ್‌ಗಳಾಗಿ ಮಾಡುವ ಗುರಿಯನ್ನು ನೀಡಿತ್ತು. ನೈಋತ್ಯ ರೈಲ್ವೆ 320 ಕೋಚ್‌ಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಿದೆ.

ಚಿಕಿತ್ಸೆ ನೀಡಲು ವಾರ್ಡ್ ಸಿದ್ಧ

ಚಿಕಿತ್ಸೆ ನೀಡಲು ವಾರ್ಡ್ ಸಿದ್ಧ

ನೈಋತ್ಯ ರೈಲ್ವೆ ಸಿದ್ಧಪಡಿಸಿರುವ ಕೋಚ್‌ಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿವೆ. ತುರ್ತು ಸಂದರ್ಭಗಳಲ್ಲಿ ಇವುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರದ ಜೊತೆ ಈ ಕುರಿತು ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಯನ್ನು ರೈಲ್ವೆ ನೇಮಕ ಮಾಡಿದೆ. ರಾಜ್ಯ ಸರ್ಕಾರ ಬೇಡಿಕೆ ಇಟ್ಟಾಗ ಮಾತ್ರ ಈ ಕೋಚ್ ನೀಡಲಾಗುತ್ತದೆ.

ಕೋವಿಡ್ ಕೇರ್ ಸೆಂಟರ್

ಕೋವಿಡ್ ಕೇರ್ ಸೆಂಟರ್

ಕೋವಿಡ್ ಸೆಂಟರ್ ಎಂದು ಗುರುತಿಸಿರುವ ಕೋಚ್‌ಗಳನ್ನು ನಿಗದಿತ ನಿಲ್ದಾಣದಲ್ಲಿ ಇಡಲಾಗುತ್ತದೆ. ಈ ಕೋಚ್‌ಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ಸಿಬ್ಬಂದಿಗೆ ರೈಲ್ವೆಯೇ ಪಿಪಿಇ ಕಿಟ್ ನೀಡಲಿದೆ. ದೇಶಾದ್ಯಂತ 5231 ಕೋಚ್‌ಗಳು ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧವಿದೆ.

English summary
South Western Railways has modified 320 passenger coaches as isolation ward. Union govt called this ad Covid Care Centres and it will be placed at 14 stations in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X