ಕೊವ್ಯಾಕ್ಸಿನ್ ಲಸಿಕೆ ಬಗ್ಗೆ ಕಾಂಗ್ರೆಸ್ ಅನುಮಾನಕ್ಕೆ ರಾಜ್ಯ ಸರ್ಕಾರ ಕೊಟ್ಟ ಉತ್ತರ

ಬೆಂಗಳೂರು, ಜನವರಿ 04: ಭಾರತದಲ್ಲಿ ಕೊರೊನಾ ಸೋಂಕಿನ ಲಸಿಕಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದು, ರಾಜ್ಯಗಳಲ್ಲಿ ಪೂರ್ವಾಭ್ಯಾಸ ಆರಂಭವಾಗಿದೆ. ಇನ್ನು ಹತ್ತು ದಿನಗಳಲ್ಲಿ ಕೊರೊನಾ ಲಸಿಕೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಭಾರತದಲ್ಲಿ ಎರಡು ಕೊರೊನಾ ವೈರಸ್ ಲಸಿಕೆಗಳ ತುರ್ತು ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ.

Recommended Video

      ಭಾರತದ ವಿಜ್ಞಾನಿಗಳು ಇಡೀ ಪ್ರಪಂಚಕ್ಕೇ ಮಾದರಿ | Modi | Oneindia Kannada

      ಭಾನುವಾರ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ತುರ್ತು ಬಳಕೆಗೂ ಡಿಸಿಜಿಐ ಅನುಮತಿ ನೀಡಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರದ ಈ ಆತುರದ ಹೆಜ್ಜೆ ಅಪಾಯಕಾರಿ ಆಗಬಹುದು ಎಂದು ಟೀಕಿಸಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಮುಂದೆ ಓದಿ...

       ಅನುಮೋದನೆ ನಂತರ ಆತಂಕ

      ಅನುಮೋದನೆ ನಂತರ ಆತಂಕ

      ಕೊವ್ಯಾಕ್ಸಿನ್ ಗೆ ಅನುಮೋದನೆ ದೊರೆಯುತ್ತಿದ್ದಂತೆ ಈ ಲಸಿಕೆಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಇದಕ್ಕೆ ಉತ್ತರಿಸಿದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ವಿ.ಜಿ. ಸೋಮಾನಿ, ಭಾರತವು ಅನುಮೋದನೆ ನೀಡಿರುವ ಎರಡು ಕೊರೊನಾ ವೈರಸ್ ಲಸಿಕೆಗಳು ಶೇ 110ರಷ್ಟು ಸುರಕ್ಷಿತ ಎಂದು ತಿಳಿಸಿದ್ದಾರೆ. 'ಸುರಕ್ಷತೆಯ ಬಗ್ಗೆ ಸಣ್ಣ ಆತಂಕವಿದ್ದರೂ ನಾವು ಯಾವುದಕ್ಕೂ ಅನುಮೋದನೆ ನೀಡುವುದಿಲ್ಲ. ಭಾರತ್ ಬಯೋಟೆಕ್ ‌ನ ಕೋವ್ಯಾಕ್ಸಿನ್ ಮತ್ತು ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಿದ ಬಳಿಕ ಲಸಿಕೆಗಳ ಸುರಕ್ಷತೆಯ ಕುರಿತಾದ ಕಳವಳಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಲಸಿಕೆಗಳು ಶೇ 110ರಷ್ಟು ಸುರಕ್ಷಿತ' ಎಂದು ತಿಳಿಸಿದ್ದಾರೆ.

       ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್

      ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್

      ಕೊವ್ಯಾಕ್ಸಿನ್ ಗೆ ಅನುಮೋದನೆ ದೊರೆಯುತ್ತಿದ್ದಂತೆ ಕಾಂಗ್ರೆಸ್ ನಾಯಕರಾದ ಆನಂದ ಶರ್ಮಾ, ಶಶಿ ತರೂರ್, ಜೈರಾಮ್ ರಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು. ಲಸಿಕೆ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಿದ್ದರು. ಲಸಿಕೆ ಅನುಮೋದನೆಯಲ್ಲಿ ಶಿಷ್ಟಾಚಾರವನ್ನು ಪಾಲಿಸದ ಕುರಿತು, ಅಂಕಿಅಂಶಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಸೂಕ್ತವಾಗಿ ಪರಿಶೀಲಿಸದೇ ಲಸಿಕೆಗೆ ಅನುಮತಿ ನೀಡಿರುವುದು ಸರಿಯಲ್ಲ ಎಂದು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

      "ವದಂತಿಗಳಿಗೆ ಕಿವಿಗೊಡಬೇಡಿ"

      ಈ ಆರೋಪಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಸ್ಪಷ್ಟೀಕರಣ ನೀಡಿದೆ. ಕೊವ್ಯಾಕ್ಸಿನ್ ಲಸಿಕೆ ಬಹಳ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಲಸಿಕೆ ಕುರಿತಾಗಿ ಹಲವು ಊಹಾಪೋಹಗಳು ಹರಿದಾಡುತ್ತಿದ್ದು ಯಾವ ವದಂತಿಗಳಿಗೂ ಕಿವಿಗೊಡಬೇಡಿ ಎಂದು ಕರ್ನಾಟಕ ಬಿಜೆಪಿ ಸರ್ಕಾರ ಜನರಿಗೆ ಮನವಿ ಮಾಡಿದೆ. ಕೊವ್ಯಾಕ್ಸಿನ್ ಹೊಸದಾಗಿ ಕಾಣಿಸಿಕೊಂಡ ಕೊರೊನಾ ರೂಪಾಂತರದ ವಿರುದ್ಧವೂ ಕಾರ್ಯನಿರ್ವಹಿಸಲಿದೆ. N501Y, D614G ಅಥವಾ ಸ್ಪೈಕ್ ಪ್ರೊಟೀನ್ ಗಳಿಗಿಂತ ಹೆಚ್ಚುವರಿಯಾಗಿ ಇತರ ವಂಶವಾಹಿಗಳ ಇಮ್ಯುನೊಜೆನ್ಸ್ ಅನ್ನು ಲಸಿಕೆ ಹೊಂದಿರುವುದರಿಂದ ರೂಪಾಂತರಗಳ ವಿರುದ್ಧ ಹೋರಾಡುತ್ತದೆ ಎಂದು ತಿಳಿಸಿದೆ.

       ಬಿಜೆಪಿ ಸರ್ಕಾರದಿಂದ ಸ್ಪಷ್ಟೀಕರಣ

      ಬಿಜೆಪಿ ಸರ್ಕಾರದಿಂದ ಸ್ಪಷ್ಟೀಕರಣ

      ಕೊವ್ಯಾಕ್ಸಿನ್ ಹಂತ 1, 2ರ ವೈದ್ಯಕೀಯ ಪ್ರಯೋಗಗಳ ಕುರಿತು ದೊರೆಯ ಮಾಹಿತಿ ಪ್ರಕಾರ, ಈ ಲಸಿಕೆಯು ಪ್ರತಿಕಾಯಗಳನ್ನು ಉತ್ಪಾದಿಸಿ ದೀರ್ಘಕಾಲ ರೋಗನಿರೋಧಕ ಶಕ್ತಿ ಹೆಚ್ಚಿಸುವ CD4T ಲಿಂಫೋಸೈಟ್ ಗಳನ್ನು ಪರಿಣಾಮಕಾರಿಯಾಗಿಸುತ್ತದೆ. ಹಿಂದೆ ನಡೆಸಿದ ಲಸಿಕೆ ಪ್ರಯೋಗಗಳಲ್ಲಿ ಲಸಿಕೆಯಿಂದ ಯಾವುದೇ ದುಷ್ಪರಿಣಾಮಗಳು ವರದಿಯಾಗಿಲ್ಲ. 2ನೇ ಹಂತದ ಕೊವ್ಯಾಕ್ಸಿನ್ ಪ್ರಯೋಗದಲ್ಲಿ 380 ವಿಷಯ ಅಧ್ಯಯನ ನಡೆಸಲಾಗಿದೆ. ಪ್ರಯೋಗದಲ್ಲಿ 21280 ಸ್ವಯಂಸೇವಕರು ಭಾಗಿಯಾಗಿದ್ದಾರೆ. ಯಾವುದೇ ಗಂಭೀರ ಅಡ್ಡ ಪರಿಣಾಮ ವರದಿಯಾಗಿಲ್ಲ ಎಂದು ಬಿಜೆಪಿ ಸಮರ್ಥನೆ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+