ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಾ ಭ್ರಷ್ಟಾಚಾರ : ಚನ್ನಬಸಪ್ಪ ಕೇಸ್ ಚಾರ್ಜ್‌ಶೀಟ್ ವಿವರ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಇಂಜಿನಿಯರ್ ಚನ್ನಬಸಪ್ಪ ಅವರು ಸಲ್ಲಿಸಿದ ದೂರಿನ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಈ ಪ್ರಕರಣದಲ್ಲಿ ಅಶ್ವಿನ್ ರಾವ್ ಮೊದಲ ಆರೋಪಿ.

ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಇಂಜಿನಿಯರ್‌ ಚನ್ನಬಸಪ್ಪ ಅವರು ಅಶ್ವಿನ್ ರಾವ್ ಮತ್ತು ಇತರರು ತಮ್ಮ ಬಳಿ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲೋಕಾಯುಕ್ತ ಈ ದೂರನ್ನು ಎಸ್‌ಐಟಿಗೆ ಹಸ್ತಾಂತರ ಮಾಡಿತ್ತು. [ಲೋಕಾ ಭ್ರಷ್ಟಾಚಾರ : 5 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್]

lokayukta

ಬುಧವಾರ ರಾತ್ರಿ ವಿಶೇಷ ತನಿಖಾ ದಳದ (ಎಸ್‌ಐಟಿ)ಯ ಮುಖ್ಯ ತನಿಖಾಧಿಕಾರಿ ಲಾಬೂರಾಮ್ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳ ನಿವಾಸದಲ್ಲಿ ಚನ್ನಬಸಪ್ಪ ಪ್ರಕರಣದ ಕುರಿತ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. [ಲೋಕಾಯುಕ್ತರನ್ನು ಬಂಧಿಸಲು ಸಕಾಲ]

ಒಟ್ಟು 1,610 ಪುಟಗಳ ಚಾರ್ಜ್ ಶೀಟ್‌ನಲ್ಲಿ ಚನ್ನಬಸಪ್ಪ ಮತ್ತು ಇತರ ಆರೋಪಿಗಳ ಕರೆಗಳ ವಿವರವುಳ್ಳ ಸಿಡಿ ಸೇರಿದಂತೆ ಇತರ ದಾಖಲೆಗಳಿವೆ. ಚನ್ನಬಸಪ್ಪ ಅವರ ವಿರುದ್ಧ ದಾಖಲಾದ ದೂರಿನ ಬಿ ರಿಪೋರ್ಟ್ ಹಾಕಿಸಲು 20 ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು. [ಸೆ.30ರ ತನಕ ಭಾಸ್ಕರರಾವ್ ರಜೆ]

ಈ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಮೊದಲ ಆರೋಪಿ. ವಿ.ಭಾಸ್ಕರ್ 2ನೇ ಆರೋಪಿ. ಅಶೋಕ್ ಕುಮಾರ್ 3ನೇ ಆರೋಪಿಯಾಗಿದ್ದರೆ, ಲೋಕಾಯುಕ್ತದ ಮಾಜಿ ಪಿಆರ್‌ಒ ಸೈಯದ್ ರಿಯಾಜ್ 4ನೇ ಆರೋಪಿಯಾಗಿದ್ದಾರೆ.

ಚಾರ್ಜ್‌ಶೀಟ್ ವಿವರ : ಭದ್ರಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಇಂಜಿನಿಯರ್‌ ಚನ್ನಬಸಪ್ಪ ಅವರ ನಿವಾಸದ ಮೇಲೆ 2013ರಲ್ಲಿ ಲೋಕಾಯುಕ್ತ ದಾಳಿ ನಡೆದಿತ್ತು. ಚನ್ನಬಸಪ್ಪ ಅವರ ಸ್ನೇಹಿತ ಶಿವಯೋಗಿ ಹಿರೇಮಠ್ ಮೂಲಕ ಅಶ್ವಿನ್ ರಾವ್ ಪರಿಚಯವಾಗಿತ್ತು. ಆಗ ಚನ್ನಬಸಪ್ಪ ಕುರಿತು ಅಶ್ವಿನ್‌ ರಾವ್‌ಗೆ ಮಾಹಿತಿ ನೀಡಿದ್ದರು. ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿಸಲು ಅಶ್ವಿನ್ ರಾವ್ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.

English summary
The Special Investigation Team (SIT) on Wednesday filed a charge-sheet against 4 accused in Channabasappa case (No 58/2015). Charge-sheet filed against Ashwin Rao, Sayad Riyaz, Ashok Kumar and V.Bhaskar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X