ಎಸ್‌ಐಟಿ ವಶಕ್ಕೆ ಅಶ್ವಿನ್ ರಾವ್, ವಿ.ಭಾಸ್ಕರ್
ಬೆಂಗಳೂರು, ಆಗಸ್ಟ್ 6 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಅಶ್ವಿನ್ ರಾವ್ ಅವರನ್ನು ಆ.7ರಂದು ಕೋರ್ಟ್‌ಗೆ ಹಾಜರುಪಡಿಸಿ ಎಂದು ಲೋಕಾಯುಕ್ತ ಕೋರ್ಟ್ ಆದೇಶ ನೀಡಿದೆ. ವಿ.ಭಾಸ್ಕರ್ ಅವರನ್ನು ಆ.17ರ ತನಕ ಎಸ್‌ಐಟಿ ವಶಕ್ಕೆ ಒಪ್ಪಿಸಲಾಗಿದೆ.
ಗುರುವಾರ ಲೋಕಾಯುಕ್ತ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಎಸ್‌ಐಟಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಈ ವೇಳೆ ಅಶ್ವಿನ್ ರಾವ್ ಪರ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದರು. [ವಿ.ಭಾಸ್ಕರ್ ಬಂಧನ]

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಮತ್ತು ಹಾವೇರಿಯ ಲೋಕೋಪಯೋಗಿ ಇಂಜಿನಿಯರ್ ಚನ್ನಬಸಪ್ಪ ಅವರು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಎಸ್‌ಐಟಿ ಅಶ್ವಿನ್ ರಾವ್ ಅವರನ್ನು ಬಂಧಿಸಿದೆ. ಎರಡೂ ಪ್ರಕರಣಗಳಲ್ಲೂ ಅವರು ಜಾಮೀನಿಗಾಗಿ ಮನವಿ ಮಾಡಿದ್ದಾರೆ.[ತೆಲಂಗಾಣದಲ್ಲಿ ಅಶ್ವಿನ್ ರಾವ್ ಬಂಧನ]
ನ್ಯಾಯಾಧೀಶ ಜಿ.ವಿ.ಬೋಪಯ್ಯ ಅವರು ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಜಾಮೀನು ನೀಡಬಾರದು ಎಂದು ಎಸ್‌ಐಟಿ ಪರವಾಗಿ ವಾದ ಮಂಡನೆ ಮಾಡಿದ ಜನಾರ್ದನ್ ಅವರು ಕೋರ್ಟ್‌ಗೆ ಮನವಿ ಮಾಡಿದರು.
ಎಸ್‌ಐಟಿ ಅಶ್ವಿನ್ ರಾವ್ ಅವರನ್ನು ಹೆಚ್ಚಿನ ವಿಚಾರಣೆಗೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿತು. ವಾದ ಆಲಿಸಿದ ಕೋರ್ಟ್ ಆ.7ರ ಸಂಜೆ ನ್ಯಾಯಾಲಯಕ್ಕೆ ಪುನಃ ಹಾಜರುಪಡಿಸುವಂತೆ ಸೂಚಿಸಿ, ಜಾಮೀನು ಅರ್ಜಿಯ ವಿಚಾರಣೆಯನ್ನೂ ಮುಂದೂಡಿತು.
ವಿ.ಭಾಸ್ಕರ್ ಎಸ್‌ಐಟಿ ವಶಕ್ಕೆ : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಂಗಳೂರಿನಲ್ಲಿ ಬಂಧಿತನಾದ ವಿ.ಭಾಸ್ಕರ್ ಅವರನ್ನು ಆ.17ರ ತನಕ ಎಸ್‌ಐಟಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.












Click it and Unblock the Notifications