Karnataka Election 2023: ರಾಜ್ಯದಲ್ಲಿ ಚುನಾವಣಾ ಆಯೋಗ ಅಕ್ರಮದ ಬಗ್ಗೆ ಗುಡುಗಿದ ವಿಜಯಲಕ್ಷ್ಮೀ ಶಿಬರೂರು

ಬೆಂಗಳೂರು, ಏಪ್ರಿಲ್ 14: ಯಾವುದೇ ಚುನಾವಣೆಯಾಗಿರಲಿ ಅಲ್ಲಿ ಚುನಾವಣಾ ಆಯೋಗದ ಪಾತ್ರ ಅತಿ ಮುಖ್ಯವಾದದ್ದು. ಒಂದು ದೇಶದಲ್ಲಿ ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯುವಲ್ಲಿ ಆಯೋಗದ ಪಾತ್ರವಿರುತ್ತದೆ. ಆದರೆ, ಅಂತಹ ಚುನಾವಣಾ ಆಯೋಗವೇ ಅಕ್ರಮದಲ್ಲಿ ತೋಡಗಿದರೇ?. ಚುನಾವಣಾ ಆಯೋಗದ ವಿರುದ್ಧ ಆರೋಪಗಳು ಕೇಳಿ ಬಂದರೆ ಹೇಗೆ?

ನಿಜ. ಇದು ನಂಬಲು ಸಾಧ್ಯವಾಗದ ಸುದ್ದಿಯಾದರೂ ಕೂಡ ರಾಜ್ಯದಲ್ಲಿ ಚುನಾವಣಾ ಆಯೋಗದಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಚುನಾವಣಾ ಆಯೋಗವೆಂದರೆ ಅದೊಂದು ನ್ಯಾಯಾಲಯವೆಂಬಂತೆ ಎಂದಿದ್ದ ಹೆಸರನ್ನು ಅದು ಕಳೆದುಕೊಳ್ಳುತ್ತಿದೆ. ಆಡಳಿತ ಪಕ್ಷ ಅಥವಾ ಪ್ರಭಾವಿ ರಾಜಕಾರಣಿಗಳ ಜೊತೆಗೆ ಸೇರಿ ತಮ್ಮ ಕೆಲಸ ಮರೆಯುತ್ತಿರುವ ಬಗ್ಗೆ ಕೆಲವು ಆರೋಪಗಳು ಬಂದಿದೆ. ಈ ಬಗ್ಗೆ ವಿಜಯ ಟೈಮ್ಸ್ ಲೈವ್ ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮೀ ಶಿಬರೂರು ಮಾಹಿತಿ ಹೊರಗೆಡವಿದ್ದಾರೆ.

Karnataka Elections 2023: Corruption In Election Commission?

ವಿಜಯಲಕ್ಷ್ಮೀ ಶಿಬರೂರು ಅವರ ಜೊತೆಗೆ, ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿದಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಜೊತೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ಸ್ವಜನಪಕ್ಷಾತ, ಪಾರದರ್ಶತೆ ಇಲ್ಲದಿರುವ ಬಗ್ಗೆ ಕೆಆರ್‌ಎಸ್ ಪಕ್ಷ ಪ್ರಶ್ನೆ ಮಾಡಿದ್ದು, ಈ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದೆ ಎಂಬ ಮಾಹಿತಿಯನ್ನು ಈ ವೇಳೆ ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿರುವ ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ, "ಇದೊಂದು ಶಾಂತಿಯುತ ಚುನಾವಣೆ ಅಷ್ಟೇ. ಇದೊಂದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲ. ನಾನು ನಾಲ್ಕು ಚುನಾವಣೆಗಳನ್ನು ಎದುರಿಸಿದ್ದೇನೆ. ನನ್ನ ಅನುಭವದಲ್ಲಿ ಹೇಳುವುದಾದರೇ ಇವೆಲ್ಲ ಶಾಂತಿಯುತ ಚುನಾವಣೆಗಳು ಅಷ್ಟೇ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲ. ಇಲ್ಲಿ ನೇರಾನೇರ ಹಣ ಹಂಚಿಕೆ, ಮದ್ಯ, ಬಿರಿಯಾನಿ ಹಂಚಿಕೆ, ಮತದಾರರ ಓಲೈಕೆ, ಆಮಿಷ ಒಡ್ಡುವುದು ನಡೆಯುತ್ತಿದೆ. ಇದಕ್ಕೆ ನೇರ ಕಾರಣ ಚುನಾವಣಾ ಆಯೋಗ " ಎಂದು ಆರೋಪಿಸಿದ್ದಾರೆ.

"ಚುನಾವಣಾ ಆಯೋಗ ಸ್ವತಂತ್ರವಾದ ಸಾಂವಿಧಾನಿಕ ಸಂಸ್ಥೆ. ಅದರೆ, ಅದಕ್ಕೆ ಚುನಾವಣೆಯನ್ನು ನಡೆಸಲು ಬೇಕಾದಷ್ಟು ನೌಕರರು ಇರುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡುತ್ತಿರುವವರನ್ನೇ ಚುನಾವಣಾ ಆಯೋಗದ ಕೆಲಸಕ್ಕೆ ನೇಮಕ ಮಾಡಲಾಗುತ್ತದೆ. ಚುನಾವಣಾ ಅಧಿಕಾರಿ, ನೋಡೆಲ್ ಆಫೀಸರ್‌ಗಳು, ವೀಕ್ಷಕರನ್ನಾಗಿ ನೇಮಿಸಲಾಗುತ್ತದೆ. ಇದೇ ಕಾರಣಕ್ಕೆ ಚುನಾವಣಾ ಅಕ್ರಮಗಳು ನಡೆಯುತ್ತಿವೆ ಎಂದು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ಆರೋಪಿಸಿದ್ದಾರೆ.

"ಇವರೆಲ್ಲಾ ಈಗಾಗಲೇ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗಿರುತ್ತಾರೆ. ಆದರೆ, ಇವರೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಾತರಿ ಪಡಿಸಬೇಕಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಿಂದ ಭ್ರಷ್ಟ ವ್ಯವಸ್ಥೆಯ ಪಾಲುದಾರರಾಗಿರುವ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಭ್ರಷ್ಟಾಚಾರ ಮಾಡುವುದು ಹೇಗೆ ಎಂಬ ಬಗ್ಗೆ ಚೆನ್ನಾಗಿ ತಿಳಿದಿದೆ. ಇವರಿಗೆ ಚುನಾವಣಾ ಆಯೋಗದ ಕೆಲವೆಂದರೆ ಅದರಲ್ಲಿ ನನಗೇನು ಸಿಗುತ್ತದೆ ಎಂಬುದನ್ನೇ ನೋಡುತ್ತಾರೆ. ಇನ್ನು, ಚುನಾವಣಾ ಆಯೋಗದ ನೇರ ಅಧೀನದಲ್ಲೇ ಇದ್ದರೂ ಕೂಡ ರಾಜ್ಯ ಸರ್ಕಾರದ ಅಧಿಕಾರಿಗಳು ಯಾರೋ ಒಬ್ಬ ಮಂತ್ರಿಯೋ, ಶಾಸಕರ ಜೊತೆಗೋ ಕೆಲಸ ಮಾಡಿದವರಾಗಿರುತ್ತಾರೆ" ಎಂದಿದ್ದಾರೆ.

"ಚುನಾವಣಾ ಆಕ್ರಮ ಮಾಡುತ್ತಿದ್ದರೂ ಕೂಡ ಈ ಅಧಿಕಾರಿಗಳು ಸುಮ್ಮನಿರುತ್ತಾರೆ. ಮುಂದೆ ಆತನೇ ಗೆದ್ದು ಬಂದು ತನಗೆ ಹಿಂಸೆ ಕೊಡಬಾರದು ಎಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿಲ್ಲ. ಇಂತಹವರೇ ಚುನಾವಣಾ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಇನ್ನು, ಈ ಅಧಿಕಾರಿಗಳ ಜೊತೆಗೆ ಬೇರೆ ರಾಜ್ಯಗಳಿಂದ ಐಎಎಸ್, ಐಒಇಎಸ್ ಮತ್ತು ಐಆರ್‌ಎಸ್ ಅಧಿಕಾರಿಗಳು ಬರುತ್ತಾರೆ. ಅವರು ತಮ್ಮ ಕೆಲಸ ಸರಿಯಾಗಿ ಮಾಡುವುದಿಲ್ಲ ಎಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

ಈ ವೇಳೆ ಆತಂಕಕಾರಿ ವಿಷಯವನ್ನು ಹೊರ ಹಾಕಿರುವ ವಿಜಯಲಕ್ಷ್ಮೀ ಶಿಬರೂರು, " ನನಗೆ ಬಂದ ಮಾಹಿತಿ ಪ್ರಕಾರ ಚುನಾವಣಾ ಅಧಿಕಾರಿಗಳು ಒಂದು ತಂಡ ಮಾಡಿಕೊಂಡಿದ್ದಾರೆ. ಈ ತಂಡ ಅಭ್ಯರ್ಥಿಗಳ ಬಳಿಗೆ ಹೋಗಿ, ನಮಗೆ ಇಷ್ಟು ಹಣ ಕೊಡಿ ನಿಮ್ಮ ಹತ್ತಿರಕ್ಕೆ ನಾವು ಬರುವುದಿಲ್ಲ. ನಿಮ್ಮ ಸ್ವ್ಯಾಡ್‌ಗೂ ನಾವು ಎಂಟ್ರಿಯಾಗುವುದಿಲ್ಲ ಎಂಬ ನೇರವಾದ ಆಫರ್‌ಗಳನ್ನು ನೀಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+