ಬ್ರೇಕಿಂಗ್ ನ್ಯೂಸ್: ಕರ್ನಾಟಕದಲ್ಲಿ ಒಂದೇ ದಿನ 45 ಮಂದಿಗೆ ಕೊರೊನಾ!

ಬೆಂಗಳೂರು, ಮೇ.08: ನೊವೆಲ್ ಕೊರೊನಾ ವೈರಸ್ ಸೋಂಕಿತರ ಗಣನೀಯ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಒಂದೇ ದಿನ ರಾಜ್ಯದಲ್ಲಿ 45 ಮಂದಿಗೆ ಮಹಾಮಾರಿ ಅಂಟಿಕೊಂಡಿದ್ದು, ಸೋಂಕಿತರ ಸಂಖ್ಯೆ 750ಕ್ಕೆ ಏರಿಕೆಯಾಗಿದೆ.

ದಾವಣಗೆರೆಯಲ್ಲೇ 14 ಮಂದಿಗೆ ಸೋಂಕು ಪತ್ತೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಜನರಿಗೆ ಬೆಳಗಾವಿಯಲ್ಲಿ 11 ಮಂದಿಗೆ ಹಾಗೂ ಬೆಂಗಳೂರಿನಲ್ಲಿ 07 ಮತ್ತು ಬಳ್ಳಾರಿಯಲ್ಲಿ ಒಬ್ಬರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ 47 ರಿಂದ 61ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 72 ರಿಂದ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ ಕಂಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ರಿಂದ 24ಕ್ಕೆ ಏರಿದ್ದರೆ, ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆಯು 156 ರಿದಂ 163ಕ್ಕೆ ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 705 ರಿಂದ 750ಕ್ಕೆ ಏರಿಕೆಯಾಗಿದೆ.

ರಾಜ್ಯದ ಮೂರು ಜಿಲ್ಲೆಗಳ ಪಾಲಿಗೆ ಕರಾಳ ಶುಕ್ರವಾರ

ರಾಜ್ಯದ ಮೂರು ಜಿಲ್ಲೆಗಳ ಪಾಲಿಗೆ ಕರಾಳ ಶುಕ್ರವಾರ

ಒಂದೇ ಒಂದು ದಿನಗಳಲ್ಲಿ ಮೂರು ಜಿಲ್ಲೆಗಳ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಕೊರೊನಾ ವೈರಸ್ ರಣಕೇಕೆಗೆ ದಾವಣಗೆರೆ, ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ತತ್ತರಿಸಿ ಹೋಗಿವೆ. ಒಂದೇ ದಿನ ಹತ್ತಕ್ಕಿಂತ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಒಂದೇ ದಿನ ಮೂರು ಜಿಲ್ಲೆಗಳಲ್ಲಿ 37 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಿಸಿದೆ.

5 ತಿಂಗಳ ಹಸಗೂಸಿಗೆ ಕೊರೊನಾ ವೈರಸ್ ಪಾಸಿಟಿವ್!

5 ತಿಂಗಳ ಹಸಗೂಸಿಗೆ ಕೊರೊನಾ ವೈರಸ್ ಪಾಸಿಟಿವ್!

ಕೊರೊನಾ ವೈರಸ್ ಹೆಮ್ಮಾರಿ ಪುಟ್ಟ ಮಕ್ಕಳನ್ನೂ ಬಿಟ್ಟಿಲ್ಲ. ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ 5 ತಿಂಗಳ ಹಸುಗೂಸಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. 10 ವರ್ಷದೊಳಗಿನ ಆರು ಮಕ್ಕಳಿಗೆ ಇಂದು ಒಂದೇ ದಿನ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಪೋಷಕರಲ್ಲಿ ಭೀತಿಯನ್ನು ಹೆಚ್ಚಿಸಿದೆ.

ಒಂದೇ ದಿನ 24 ಮಂದಿ ಮಹಿಳೆಯರಿಗೆ ಕೊರೊನಾ!

ಒಂದೇ ದಿನ 24 ಮಂದಿ ಮಹಿಳೆಯರಿಗೆ ಕೊರೊನಾ!

ಕರ್ನಾಟಕದಲ್ಲಿ ಒಂದೇ ದಿನ 45 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದರೆ ಈ ಪೈಕಿ ಮಹಿಳೆಯರಲ್ಲೇ ಹೆಚ್ಚಾಗಿ ಸೋಂಕು ಪತ್ತೆಯಾಗಿದೆ. ಶುಕ್ರವಾರ ಬಿಡುಗಡೆಯಾದ ಬೆಳಗ್ಗಿನ ಹೆಲ್ತ್ ಬುಲೆಟಿನ್ ನಲ್ಲಿ 45 ಮಂದಿ ಸೋಂಕಿತರ ಪೈಕಿ 24 ಮಂದಿ ಮಹಿಳೆಯರೇ ಎಂದು ತಿಳಿದು ಬಂದಿದೆ.

ಒಬ್ಬರಿಂದ 10 ಮಂದಿಗೆ ಕೊರೊನಾ ವೈರಸ್ ಸೋಂಕು

ಒಬ್ಬರಿಂದ 10 ಮಂದಿಗೆ ಕೊರೊನಾ ವೈರಸ್ ಸೋಂಕು

ಎರಡು ದಿನಗಳಿಂದ ಒಂದೇ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗದ ದಾವಣಗೆರೆಯಲ್ಲಿ ಇಂದು ಒಂದೇ ದಿನ 14 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಅದರಲ್ಲೂ ಪೇಶೆಂಟ್ ನಂಬರ್.533ರಿಂದಲೇ ಹತ್ತು ಜನರಿಗೆ ಕೊರೊನಾ ವೈರಸ್ ತಗಲಿರುವುದು ಪತ್ತೆಯಾಗಿದೆ. ಪೇಶೆಂಟ್ ನಂಬರ್.566ರಿಂದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+