Covid-19 update: ಕರ್ನಾಟಕದಲ್ಲಿ ಕೊರೊನಾ ಏರುಗತಿ, ರಾಮನಗರದಲ್ಲಿ ವಿದ್ಯಾರ್ಥಿಗೆ ಪಾಸಿಟಿವ್
ರಾಮನಗರ, ಡಿಸೆಂಬರ್ 19: ಕೇರಳ ಸೇರಿದಂತೆ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೋರೊನಾ ಮತ್ತೆ ವಕ್ಕರಿಸಿದ್ದು, ಕೆಲವರಲ್ಲಿ ಕೋವಿಡ್-19 ಉಪತಳಿ ಪತ್ತೆಯಾಗಿದೆ. ಈ ಮೂಲಕ ಮತ್ತೆ ಜನರಲ್ಲಿ ಆರೋಗ್ಯ ಆತಂಕಕ್ಕೆ ಈ ಬೆಳವಣಿಗೆ ಕಾರಣವಾಗಿದೆ. ರಾಜ್ಯದಲ್ಲಿ ಇಂದು ಮಾರ್ಗಸೂಚಿಗಳನ್ನು ಸರ್ಕಾರ ಹೊರಡಿಸಿದೆ. ಇದೇ ವೇಳೆ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಪಾಸಿಟಿವ್ ಪ್ರಕರಣ ಬಂದ ಬೆನ್ನಲ್ಲೆ ಇದೀಗ ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗೆ ಕೊರೊನಾ ಇರುವುದು ದೃಢವಾಗಿದೆ.
ರಾಮನಗರ ಜಿಲ್ಲೆಯ ಬೈರಮಂಗಲ ತಾಲೂಕು ವ್ಯಾಪ್ತಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರಿಗೆ ಕೋವಿಡ್ ಸೋಂಕು ಇರುವುದು ಖಚಿತವಾಗಿದೆ. ಇವರು ಬೈರಮಂಗಲ ಸಮೀಪದ ಅಮೃತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳು ಮಂಡ್ಯದವರು ಎಂದು ತಿಳಿದು ಬಂದಿದೆ.

ಮಂಗಳವಾರ ಬೈರಮಂಗಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ತಪಾಸಣೆ ಕೈಗೊಳ್ಳಲಾಗಿತ್ತು. ಈವೇಳೆ ತಪಾಸಣೆಗೆ ಒಳಗಾದ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ.
ಇವರಿಗೆ ಕೊರೊನಾ ಪಾಸಿಟಿವ್ ವರದಿ ಬರುತ್ತಿದ್ದಂತೆ, ವಿದ್ಯಾರ್ಥಿಯನ್ನು ಐಸೋಲೇಷನ್ ಮಾಡಲಾಗಿದೆ. ವಿಶೇಷವೆಂದರೆ ಕೋವಿಡ್ ತುತ್ತಾಗಿರುವ ಈ ವಿದ್ಯಾರ್ಥಿ ಆರೋಗ್ಯವಾಗಿದ್ದು, ಸದ್ಯಕ್ಕೆ ಅವರಲ್ಲಿ ಯಾವುದೇ ಲಕ್ಷಣಗಳು ಇಲ್ಲದಾಗಿದೆ. ಹೀಗಿದ್ದರೂ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಾದ ಕೋವಿಡ್ ಸೋಂಕು ತಪಾಸಣೆ
ಸೋಂಕಿತ ವಿದ್ಯಾರ್ಥಿಯನ್ನು ಪ್ರತ್ಯೇಕವಾಗಿಟ್ಟು ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಜೊತೆಗೆ ಸೋಂಕಿತರ ಜತೆ ಸಂಪರ್ಕದಲ್ಲಿದ್ದ ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ 19 ತಪಾಸಣೆಗೆ ಒಳಪಡಿಸಲಾಗಿದೆ. ಇದರೊಂದಿಗೆ ರಾಮನಗರ ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಸೊಂಕು ತಪಾಸಣೆ ಹೆಚ್ಚಿಸಲಾಗುತ್ತಿದೆ.
ಕರ್ನಾಟಕ ರಾಜ್ಯ ಸರ್ಕಾರ ಕೋವಿಡ್ ಸಂಬಂಧ ಅಗತ್ಯ ಎಚ್ಚರಿಕೆ ವಹಿಸುತ್ತಿದೆ. ನೆರೆಯ ಕೇರಳದಲ್ಲಿ ಕೋವಿಡ್ ಗಣನೀಯ ಮಟ್ಟದಲ್ಲಿ ಹೆಚ್ಚಾಗಿದೆ. ಕೆಲವು ಸಾವುಗಳ ಸಂಭವಿಸಿದೆ. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡ ಕರ್ನಾಟಕ ಇಂದು ಮಂಗಳವಾರ (ಡಿ.19) ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಹಲವು ಮಹತ್ವದ ನೀರ್ಣಯ ಕೈಗೊಂಡಿದೆ.












Click it and Unblock the Notifications