ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ದೇವತೆಗಳ ಅವಹೇಳನ ಮಾಡದಿದ್ರೆ ತಿಂದಿದ್ದು ಕರಗಲ್ವಾ?

|
Google Oneindia Kannada News

ಹಿಂದೂ ಧರ್ಮದವರೇ ಆದ ಕೆಲವರು ಮತ್ತು ಇತರ ಪಂಥದವರು ಹಿಂದೂ ದೇವತೆಗಳು, ಪೂಜಾಪದ್ದತಿ, ಧರ್ಮಗ್ರಂಥಗಳು, ಸಂತರು ಮತ್ತು ರಾಷ್ಟ್ರಪುರುಷರನ್ನು ವಿಡಂಬನೆ ಅಥವಾ ಅವಹೇಳನಕಾರಿಯಾಗಿ ಟೀಕಿಸುವುದನ್ನು ಮಾಡುತ್ತಲೇ ಇದ್ದಾರೆ.

ಹಿಂದೂಗಳ ಧಾರ್ಮಿಕ ಶ್ರದ್ಧೆಯ ಜೊತೆ ಅಣಕವಾಡುವ ಕೆಲಸಗಳನ್ನು ಮಾಡುವ ಈ ಘನಂದಾರಿಗಳಿಗೆ ಇದರಿಂದಾಗುವ ಲಾಭವೇನೋ? ಹಿಂದೂಗಳು, ಹಿಂದೂ ಸಂಪ್ರದಾಯವನ್ನು ಅವಹೇಳನ ಮಾಡುವುದು ಕೆಲವರಿಗೆ ಫ್ಯಾಷನ್ ಆಗಿದೆ ಎಂದು ಉಡುಪಿ ಪೇಜಾವರ ಹಿರಿಯ ಶ್ರೀಗಳು ಪ್ರೊ.ಕಲ್ಬುರ್ಗಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವಿಷಾದ ವ್ಯಕ್ತ ಪಡಿಸಿದ್ದರು.

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹಿಂದೂ ದೇವರುಗಳ ಚಿತ್ರಗಳು ಒಳ ಉಡುಪು, ಬಿಯರ್ ಬಾಟಲ್, ಪಾದರಕ್ಷೆ ಮುಂತಾದ ಕಡೆ ಕಾಣಿಸಿ, ವಿವಾದವಾಗಿ ನಂತರ ಕಂಪೆನಿಗಳು ಕ್ಷಮೆ ಕೇಳಿ ಹಿಂದಕ್ಕೆ ಪಡೆದ ಉದಾಹರಣೆಗಳೂ ನಮ್ಮ ಮುಂದಿವೆ.

ಹಿಂದೂ ಪಂಥದ ನಂಬಿಕೆಗಳಿಗೆ ಧಕ್ಕೆ ತರುವವರು ಪ್ರಮುಖವಾಗಿ ಹಿಂದೂಗಳೇ ಎನ್ನುವುದು ನೋವಿನ ವಿಚಾರ. ಇವರ ಹೇಳಿಕೆಗಳಿಗೆ ಪ್ರತಿರೋಧ ವ್ಯಕ್ತ ಪಡಿಸುವವರನ್ನು ಕೋಮುವಾದಿಗಳೆಂದು ಭಾಷ್ಯ ಬರೆಯುತ್ತಿರುವುದೂ ನಮ್ಮ ವ್ಯವಸ್ಥೆ.

ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಕಾನೂನು ಬಾಹಿರವಾದರೂ, ಇತರ ಧರ್ಮದ ಬಗ್ಗೆ ಕೊಂಕು ಮಾತನಾಡುವ ಹಕ್ಕನ್ನು ಇವರಿಗೆ ನೀಡಿದವರಾರು? ಇವರ ಬಾಯಿ ಚಪಲಕ್ಕೆ, ಅಥವಾ ಇವರ ಬಿಟ್ಟಿ ಜನಪ್ರಿಯತೆಯ ಲಾಲಸೆಗೆ ಹಿಂದೂ ಧರ್ಮದ ಪದ್ದತಿಗಳು ಆಹಾರವಾಗಬೇಕೇ?

ಕೆಲವೊಂದು ತೀರಾ ಆಕ್ಷೇಪಾರ್ಹ ಹೇಳಿಕೆಗಳನ್ನು ಸ್ಲೈಡಿನಲ್ಲಿ ನೀಡಲಾಗಿದೆ.

ಶ್ರೀರಾಮಚಂದ್ರ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದಾನೆ

ಶ್ರೀರಾಮಚಂದ್ರ ಯಾವ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಿದ್ದಾನೆ

ರಾಮ ಯಾರು ಅವನೇನು ಇಂಜಿನಿಯರಾ? ಯಾವ ಕಾಲೇಜಿನಲ್ಲಿ ಓದಿದ್ದಾನೆ? ರಾಮಾಯಣ ಎನ್ನುವುದು ಕಾಲ್ಪನಿಕ ಕಥೆ - ಡಿಎಂಕೆ ಮುಖ್ಯಸ್ಥ ಮುತ್ತುವೇಲು ಕರುಣಾನಿಧಿ (ಸೇತುಸಮುದ್ರಂ ಯೋಜನೆ ಉಲ್ಲೇಖಿಸಿ) ಯುಪಿಎ ಸರಕಾರದ ಅವಧಿಯಲ್ಲಿ ಈ ಹೇಳಿಕೆಯನ್ನು ನೀಡಿದ್ದರು.(ಕರುಣಾನಿಧಿ ಹೇಳಿಕೆ)

ರಾವಣನ ಪತ್ನಿ ಮಂಡೋದರಿ ನಂಬಿಕೆ ದ್ರೋಹಿ

ರಾವಣನ ಪತ್ನಿ ಮಂಡೋದರಿ ನಂಬಿಕೆ ದ್ರೋಹಿ

ರಾವಣ ಮಹಾನ್ ಪರಾಕ್ರಮಿ, ಯುದ್ದದಲ್ಲಿ ಅವನು ಎಂದೂ ಸೋಲುತ್ತಿರಲಿಲ್ಲ. ಆದರೆ ಅವನ ಹೆಂಡತಿ ಮಂಡೋದರಿ ಮತ್ತು ತಮ್ಮ ವಿಭೀಷಣನ ನಂಬಿಕೆ ದ್ರೋಹದಿಂದ ರಾಮನ ವಿರುದ್ದ ಯುದ್ದ ಸೋಲುವಂತಾಯಿತು - ಶ್ರೀಲಂಕಾದ ವಿಜಿತಾ ಯಾಪ ಪಬ್ಲಿಕೇಷನ್ಸ್ ಹೊರತಂದ 'ರಾವಣ, ದಿ ಕಿಂಗ್ ಆಫ್ ಲಂಕಾ' ಎನ್ನುವ ಪುಸ್ತಕದಲ್ಲಿ ಈ ರೀತಿ ಉಲ್ಲೇಖವಾತಿತ್ತು.(ಮಂಡೋದರಿ ನಂಬಿಕೆ ದ್ರೋಹಿ)

ಕನ್ನಡ ಚಿತ್ರಗಳಲ್ಲಿ ದೇವತೆಗಳ ಅವಹೇಳನ

ಕನ್ನಡ ಚಿತ್ರಗಳಲ್ಲಿ ದೇವತೆಗಳ ಅವಹೇಳನ

ಕನ್ನಡ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ, ಕನ್ನಡ ಚಲನಚಿತ್ರ, ಜಾಹೀರಾತು, ನಾಟಕಗಳಲ್ಲಿ ನಡೆಯುತ್ತಿರುವ ಹಿಂದೂ ದೇವ-ದೇವತೆಗಳ ಅವಹೇಳನದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿದ್ದವು. ಚಲನಚಿತ್ರ ಅಕಾಡೆಮಿ, ಫಿಲ್ಮ್ ಚೇಂಬರ್, ಸೆನ್ಸಾರ್ ಮಂಡಳಿಯ ಗಮನಕ್ಕೆ ತಂದು, ಸಿನೆಮಾದಲ್ಲಿನ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕುವಂತೆ ಆಗ್ರಹಿಸಲಾಗಿತ್ತು.

ಶ್ರೀರಾಮ ಡ್ಯೂಡ್, ಕೌಸಲ್ಯೆ ಬಿಚ್

ಶ್ರೀರಾಮ ಡ್ಯೂಡ್, ಕೌಸಲ್ಯೆ ಬಿಚ್

ಹಿಂದೂ ಧರ್ಮೀಯರ ಆರಾಧ್ಯ ದೇವರಾದ ರಾಮ-ಸೀತೆಯರ ಕುರಿತಂತೆ ಬೀದರ್ ಜಿಲ್ಲಾಧಿಕಾರಿ ಡಾ. ಪಿ ಸಿ ಜಾಫರ್ ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಲೇಖನವೊಂದನ್ನು ಪೋಸ್ಟ್ ಮಾಡಿದ್ದರು. ನ.3, 2013ರಂದು ಡಿಸಿ ತಮ್ಮ ವೈಯಕ್ತಿಕ ಅಕೌಂಟ್‌ನಲ್ಲಿ ದೀಪಾವಳಿ ಹಬ್ಬದ ಕುರಿತಂತೆ ತಾಯಿ ಮಗನ ಮಧ್ಯೆ ನಡೆಯುವ ಸಂಭಾಷಣೆಯನ್ನು ಲಗತ್ತಿಸಿ ಶ್ರೀರಾಮನಿಗೆ 'ಡ್ಯೂಡ್‌', ಸೀತೆಗೆ 'ಬೇಬ್‌' ಹಾಗೂ ಕೌಸಲ್ಯೆಗೆ 'ಬಿಚ್‌' ಎಂದು ಸಂಬೋಧಿಸಿದ್ದರು.(ಬೀದರ್ ಡಿಸಿ)

ವಿಷ ಕಕ್ಕುವ ಅಕ್ಬರುದ್ದೀನ್ ಓವೈಸಿ

ವಿಷ ಕಕ್ಕುವ ಅಕ್ಬರುದ್ದೀನ್ ಓವೈಸಿ

ಹೈದರಾಬಾದ್ ಹಾಲಿ ಸಂಸದ ಮತ್ತು ಐಎಂಐಎಂ ಸಂಘಟನೆಯ ಮುಖ್ಯಸ್ಥ ಅಕ್ಬರುದ್ದೀನ್ ಓವೈಸಿ, ಹಿಂದೂಗಳ ವಿರುದ್ದ ವಿಷ ಕಕ್ಕುತ್ತಲೇ ಇರುತ್ತಾನೆ. ನೀವು (ಪೊಲೀಸರು) ಹದಿನೈದು ನಿಮಿಷ ಸುಮ್ಮನಿದ್ದರೆ ಹಿಂದೂಗಳನ್ನು ಸರ್ವನಾಶ ಮಾಡುತ್ತೇನೆ. ಇವತ್ತು ಹಿಂದೂಸ್ಥಾನದಲ್ಲಿರುವ ಎಲ್ಲಾ ಪ್ರಮುಖ ಕಟ್ಟಡಗಳು ಮುಸ್ಲಿಮರು ನೀಡಿದ ಬಳುವಳಿ ಎನ್ನುವ ಹೇಳಿಕೆ ನೀಡಿದ್ದರು.

ದೈವಗಳ ಕಲ್ಲಿನ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಏನೂ ಆಗುವುದಿಲ್ಲ

ದೈವಗಳ ಕಲ್ಲಿನ ಮೇಲೆ ಮೂತ್ರ ವಿಸರ್ಜನೆ ಮಾಡಿದರೆ ಏನೂ ಆಗುವುದಿಲ್ಲ

ಬೆತ್ತಲೆ ಪೂಜೆ ಯಾಕೆ ಮಾಡಬಾರದು? ಪಂಜುರ್ಲಿಯ (ಕರಾವಳಿ ಭಾಗದ ದೈವ) ಮೇಲೆ ಮೂತ್ರ ವಿಸರ್ಜನೆ ಮಾಡಿದರೂ ಏನೂ ಆಗುವುದಿಲ್ಲ ಎಂದು ಸಾಹಿತಿ ಯು ಆರ್ ಅನಂತಮೂರ್ತಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.
(ಅನಂತಮೂರ್ತಿ ಆಕ್ಷೇಪಾರ್ಹ ಹೇಳಿಕೆ)

ಗಣೇಶ ಒಬ್ಬ ಕ್ರೂರಿ, ರೌಡಿ

ಗಣೇಶ ಒಬ್ಬ ಕ್ರೂರಿ, ರೌಡಿ

ಹಿಂದೂಗಳು ಪ್ರಥಮ ಪೂಜೆ ಸಲ್ಲಿಸುವ ಗಣೇಶ ಒಬ್ಬ ರೌಡಿ, ಕ್ರೂರಿ - 'ಢುಂಢಿ ಅರಣ್ಯಕನೊಬ್ಬ ಗಣಪತಿಯಾದ ಕಥೆ' ಪುಸ್ತಕದಲ್ಲಿ ಲೇಖಕರು ಈ ರೀತಿ ಉಲ್ಲೇಖಿಸಿದ್ದರು. ನಂತರ ಚಾಮುಂಡೇಶ್ವರಿ ಹೇಗೆ ಅಭಿಸಾರಿಕೆಯಾಗಿದ್ದಳು ಎಂಬುದನ್ನು ಜಾನಪದ ಗೀತೆಗಳ ಮೂಲಕ ಹಾಡಲಾಗಿದೆ ಎಂದು ಹೇಳಿಕೆ ನೀಡಿ ಯೋಗೀಶ್ ಮಾಸ್ಟರ್ ತೀವ್ರ ಟೀಕೆಗೆ ಗುರಿಯಾಗಿದ್ದರು.(ಗಣೇಶ ಒಬ್ಬ ಕ್ರೂರಿ, ರೌಡಿ)

ಪ್ರೊ. ಕಲ್ಬುರ್ಗಿ ವಿವಾದಕಾರಿ ಹೇಳಿಕೆ

ಪ್ರೊ. ಕಲ್ಬುರ್ಗಿ ವಿವಾದಕಾರಿ ಹೇಳಿಕೆ

ದೇವತೆಗಳು ಮೂರ್ತ ಸ್ವರೂಪ, ಹಾಗಾಗಿ ದೇವತೆಗ ವಿಗ್ರಹ ಅಥವಾ ಮೂರ್ತಿಗಳ ಮೇಲೆ 'ಮೂತ್ರ' ಮಾಡಿದರೆ ತಪ್ಪೇನು? ವಿಗ್ರಹಗಳಿಗೆ ಭಕ್ತರನ್ನು ಕಾಪಾಡುವ ಶಕ್ತಿ ಇಲ್ಲ, ಪೂಜೆ ನಿಲ್ಲಿಸಿದರೆ ಏನೂ ತಪ್ಪಿಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಯದ ವಿಶ್ರಾಂತ ಕುಲಪತಿ ಪ್ರೊಫೆಸರ್ ಕಲುಬುರ್ಗಿ ಇತ್ತೀಚೆಗೆ ಹೇಳಿದ್ದರು.
(ಕಲ್ಬುರ್ಗಿ ವಿವಾದಕಾರಿ ಹೇಳಿಕೆ)

ಶಿರಡಿ ಸಾಯಿಬಾಬ ದೇವರಲ್ಲ

ಶಿರಡಿ ಸಾಯಿಬಾಬ ದೇವರಲ್ಲ

ಶಿರಡಿ ಸಾಯಿಬಾಬ ದೇವರಲ್ಲ. ನಮ್ಮಂತೇ ಸಾಮಾನ್ಯ ಮನುಷ್ಯ. ಹಾಗಾಗಿ ಅವನನ್ನು ಯಾರೂ ನಂಬ ಬೇಕಾಗಿಲ್ಲ - ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಹೇಳಿದ್ದರು.
(ಬಾಬ ದೇವರಲ್ಲ)

English summary
Various controversial statement and article on Hindu pooja system and mythology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X