ತನ್ನ ಅವಾಂತರವನ್ನು ಕಾಂಗ್ರೆಸ್ ತಲೆಗೆ ಕಟ್ಟುವುದು ಬಿಜೆಪಿಗೆ ಖಯಾಲಿ: ಕಾಂಗ್ರೆಸ್!
ಬೆಂಗಳೂರು: 5 ಕಾಂಗ್ರೆಸ್ ಗ್ಯಾರಂಟಿ ವಿಚಾರದಲ್ಲಿ ಬಿಜೆಪಿ ನಾಯಕರು ವಾಗ್ದಾಳಿ ನಡೆಸುವ ಸಂದರ್ಭದಲ್ಲೇ ಕೈಪಡೆ ಕಂಬ್ಯಾಕ್ ಮಾಡಿದೆ. ಅಂದಹಾಗೆ ಪ್ರಧಾನಿ ಮೋದಿ ಕಾರ್ಯಕ್ರಮ ಉದಾಹರಣೆಯಾಗಿ ತೆಗೆದುಕೊಂಡು ಬಿಜೆಪಿಗೆ ಈಗ ಕಾಂಗ್ರೆಸ್ ಬಿಸಿ ಮುಟ್ಟಿಸಿದೆ. ಹಾಗಾದರೆ ಈ ಜಗಳದಲ್ಲಿ ಪ್ರಧಾನಿ ಮೋದಿ ಹೆಸರು ಯಾಕೆ ಬಂತು? ಬನ್ನಿ ತಿಳಿಯೋಣ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭೀಕರ ಸೋಲು ಕಂಡಿತ್ತು. ಕಾಂಗ್ರೆಸ್ 135 ಸ್ಥಾನಗಳಲ್ಲಿ ಗೆದ್ದು ಸರ್ಕಾರ ರಚಿಸಿದೆ. ಹೀಗಾಗಿ ಎರಡೂ ಪಕ್ಷಗಳ ನಡುವೆ ಗ್ಯಾರಂಟಿ ವಾರ್ ಬಲು ಜೋರಾಗಿದೆ. ಅದ್ರಲ್ಲೂ ಇಂದಿನಿಂದ ಜಾರಿಗೆ ಬಂದಿರುವ ಫ್ರೀ ಬಸ್ ವಿಚಾರ ಬಿಜೆಪಿ ನಾಯಕರಿಗೆ ಅಸ್ತ್ರವಾಗಿ ಬದಲಾಗಿದೆ. ಹೀಗಾಗಿ ಫ್ರೀ ಬಸ್ ವಿಚಾರ ಹಿಡಿದು ಬಿಜೆಪಿ ಕೆಣಕುತ್ತಲೇ ಇತ್ತು. ಇದೀಗ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ತಿರುಗೇಟು ನೀಡಿದೆ. ಅದೂ ಪ್ರಧಾನಿ ಮೋದಿಯವರ ಕಾರ್ಯಕ್ರಮವನ್ನ ಉದಾಹರಣೆಯಾಗಿ ಇಟ್ಟುಕೊಂಡು. ಹಾಗಾದ್ರೆ ಬಿಜೆಪಿ ನಾಯಕರು ಬಸ್ ಬಾಡಿಗೆ ಕಟ್ಟಿಲ್ವಾ? ಕಾಂಗ್ರೆಸ್ ಆರೋಪ ಏನು? ಮುಂದೆ ಓದಿ.

ಬಸ್ ಬಾಡಿಗೆ ಕಟ್ಟಿಲ್ವಾ ಬಿಜೆಪಿ ಲೀಡರ್ಸ್?
ಹೌದು, ಫ್ರೀ ಬಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಆರೋಪ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ತಿರುಗೇಟು ನೀಡಿದೆ. ಶಿವಮೊಗ್ಗದಲ್ಲಿ ಕೆಲತಿಂಗಳ ಹಿಂದೆ ನಡೆದ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ಆ ವೇಳೆ ಸಮಾರಂಭಕ್ಕೋಸ್ಕರ ಬುಕ್ ಮಾಡಿದ್ದ ಬಸ್‌ಗಳಿಗೆ ಇನ್ನೂ ಹಣ ಪಾವತಿ ಆಗಿಲ್ಲವಂತೆ! ಮೂರು ತಿಂಗಳು ಕಳೆದರೂ ಆಗ ಕಾರ್ಯಕ್ರಮಕ್ಕೆ ಬಾಡಿಗೆಗೆ ಪಡೆದಿದ್ದ ಬಸ್‌ಗಳಿಗೆ ಜಿಲ್ಲಾಡಳಿತ ಹಣ ಪಾವತಿ ಮಾಡಿಲ್ಲವಂತೆ. ಇದೇ ವಿಚಾರ ಹಿಡಿದು ಟ್ವೀಟ್ ಮಾಡಿರುವ ಕಾಂಗ್ರೆಸ್ ಬಿಜೆಪಿ ತಿರುಗೇಟು ನೀಡಿದೆ. ಆದರೆ ಟ್ವೀಟ್ ಮಾಡುವ ಭರದಲ್ಲಿ ಕಾಂಗ್ರೆಸ್ ಮಹಾ ಎಡವಟ್ಟು ಕೂಡ ಮಾಡಿಕೊಂಡಿದೆ.
ಖಾಸಗಿ, KSRTCಗೂ ವ್ಯತ್ಯಾಸ ಗೊತ್ತಿಲ್ವಾ?
ಅಂದಹಾಗೆ ಇಲ್ಲಿ ಕಾಂಗ್ರೆಸ್ ಟ್ವೀಟ್ ಮಾಡಿರುವ ಪ್ರಕಾರ, 'ತನ್ನ ಅವಧಿಯಲ್ಲಿ ಮಾಡಿದ ಅವಾಂತರವನ್ನು ಕಾಂಗ್ರೆಸ್ ತಲೆಗೆ ಕಟ್ಟುವುದು ಬಿಜೆಪಿಗೆ ಖಯಾಲಿಯಾಗಿದೆ.' ಎಂದಿರುವ ಕಾಂಗ್ರೆಸ್, 'KSRTC ಖಜಾನೆ ಖಲಿಯಾಗಿದೆ ಎಂದಿರುವ ಬಿಜೆಪಿ ಮೋದಿಯ ಚುನಾವಣಾ ಪ್ರಚಾರಕ್ಕೆ ಬಸ್ ಬಳಸಿಕೊಂಡು ಹಣ ನೀಡದೆ ಎದ್ದು ಹೋಗಿದ್ದೇಕೆ @BJP4Karnataka? KSRTCಗೆ ಯಾರು ಹಣ ಪಾವತಿಸುವಿರಿ? ಮೋದಿಯೋ, ಬೊಮ್ಮಾಯಿಯೊ?' ಅಂತಾ ಪ್ರಶ್ನೆ ಮಾಡಿದೆ. ಆದರೆ ಇಲ್ಲಿ ಹಣ ಕೊಡದೇ ಇರುವುದು ಖಾಸಗಿ ಬಸ್‌ಗೆ ಆದರೆ KSRTCಗೆ ಹಣ ಪಾವತಿ ಆಗಿದೆ. ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ KSRTCಗೆ ಹಣ ಪಾವತಿ ಮಾಡಿಲ್ಲ ಅಂತಾ ಎಡವಟ್ಟು ಟ್ವೀಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿದ ಎಡವಟ್ಟು ಟ್ವೀಟ್‌ಗೆ ತಿರುಗೇಟು ಕೂಡ ಸಿಗುತ್ತಿದೆ.
ತನ್ನ ಅವಧಿಯಲ್ಲಿ ಮಾಡಿದ ಅವಾಂತರವನ್ನು ಕಾಂಗ್ರೆಸ್ ತಲೆಗೆ ಕಟ್ಟುವುದು ಬಿಜೆಪಿಗೆ ಖಯಾಲಿಯಾಗಿದೆ.
— Karnataka Congress (@INCKarnataka) June 11, 2023
KSRTC ಖಜಾನೆ ಖಲಿಯಾಗಿದೆ ಎಂದಿರುವ ಬಿಜೆಪಿ ಮೋದಿಯ ಚುನಾವಣಾ ಪ್ರಚಾರಕ್ಕೆ ಬಸ್ ಬಳಸಿಕೊಂಡು ಹಣ ನೀಡದೆ ಎದ್ದು ಹೋಗಿದ್ದೇಕೆ @BJP4Karnataka?
KSRTC ಗೆ ಯಾರು ಹಣ ಪಾವತಿಸುವಿರಿ? ಮೋದಿಯೋ, ಬೊಮ್ಮಾಯಿಯೊ? pic.twitter.com/90lK07efBG
ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಿಡಿ!
ಇಷ್ಟೆಲ್ಲದರ ನಡುವೆ ಇದೇ ಫ್ರೀ ಬಸ್ ವಿಚಾರ ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಮತ್ತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. 'ನೋಡಿದ ತಕ್ಷಣ ಹೆಂಗಸರು ಯಾರು, ಗಂಡಸರು ಯಾರು ಅಂತ ಗೊತ್ತಾಗುತ್ತೆ. ಗುರುತಿನ ಚೀಟಿ ಇಟ್ಕೊಂಡು ಓಡಾಡಬೇಕು ಅಂತ ಕಂಡಿಷನ್ ಹಾಕಿದ್ದು ಸರಿಯಲ್ಲ ಎಂದು ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಸರಕಾರದ ಬಗ್ಗೆ ಕಿಡಿಕಾರಿದ್ದಾರೆ! ಜನರ ಇದೇ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ, ಇದೀಗ ತಮ್ಮದೇ ಪಕ್ಷದ ಹಿರಿಯರಾದ ಮಾನ್ಯ ಶಿವಶಂಕರಪ್ಪನವರ ಪ್ರಶ್ನೆಗಾದರೂ @siddaramaiahರವರು ಉತ್ತರಿಸುತ್ತಾರೆಯೇ?' ಎಂದು ತಿರುಗೇಟು ನೀಡಿದೆ ಬಿಜೆಪಿ.
‘ನೋಡಿದ ತಕ್ಷಣ ಹೆಂಗಸರು ಯಾರು, ಗಂಡಸರು ಯಾರು ಅಂತ ಗೊತ್ತಾಗುತ್ತೆ. ಗುರುತಿನ ಚೀಟಿ ಇಟ್ಕೊಂಡು ಓಡಾಡಬೇಕು ಅಂತ ಕಂಡಿಷನ್ ಹಾಕಿದ್ದು ಸರಿಯಲ್ಲ’ ಎಂದು ಹಿರಿಯರಾದ ಶಾಮನೂರು ಶಿವಶಂಕರಪ್ಪನವರು ಸರಕಾರದ ಬಗ್ಗೆ ಕಿಡಿಕಾರಿದ್ದಾರೆ!
— BJP Karnataka (@BJP4Karnataka) June 11, 2023
ಜನರ ಇದೇ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ, ಇದೀಗ ತಮ್ಮದೇ ಪಕ್ಷದ ಹಿರಿಯರಾದ ಮಾನ್ಯ ಶಿವಶಂಕರಪ್ಪನವರ… https://t.co/zrCf6sJ8Xh
ಹೀಗೆ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಗ್ಯಾರಂಟಿ ವಾರ್ ನಿಲ್ಲುವ ಸಾಧ್ಯತೆ ಕಾಣುತ್ತಿಲ್ಲ. ಅದರಲ್ಲೂ ಇಂದಿನಿಂದ ಜಾರಿಯಾಗಿರುವ ಫ್ರೀ ಬಸ್ ಯೋಜನೆ ಬಗ್ಗೆ ಕೈ-ಕಮಲ ಇದೇ ರೀತಿ ಮತ್ತಷ್ಟು ದಿನಗಳ ಕಾಲ ಫೈಟ್ ಮಾಡೋದು ಗ್ಯಾರಂಟಿ.

ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಇದು ಒಂದು ರೀತಿ ಎಂಟರ್‌ಟೈನ್‌ಮೆಂಟ್ ಆಗಿಯೂ ಬದಲಾಗುತ್ತಿದೆ ಅಂದ್ರೆ ತಪ್ಪಾಗೋದಿಲ್ಲ! ಆದರೆ ರಾಜ್ಯದ ಮತದಾರರು ಮಾತ್ರ ಯಾವಾಗ ಈ ಜಗಳಕ್ಕೆ ಅಂತ್ಯ ಹಾಡ್ತಾರೆ ಅಂತಾ ಕಾಯ್ತಿದ್ದಾರೆ.












Click it and Unblock the Notifications