ಕಾಂಗ್ರೆಸ್ ಪ್ರಣಾಳಿಕೆ ರಚಿಸಲು ನಿಮ್ಮ ಸಲಹೆ ನೀಡಿ!
ಬೆಂಗಳೂರು. ಜ.3 : 2014ರ ಲೋಕಸಭೆ ಚುನಾವಣೆ ಸಿದ್ಧತೆಯನ್ನು ಆರಂಭಿಸಿರುವ ಕಾಂಗ್ರೆಸ್, ಚುನಾವಣಾ ಪ್ರಣಾಳಿಕೆ ಸಿದ್ಧತೆಯನ್ನು ಆರಂಭಿಸಿದೆ. ಪಕ್ಷದ ಪ್ರಣಾಳಿಕೆ ರಚನೆಗೆ ಸಂಬಂಧಿಸಿದಂತೆ ದೇಶದ ಪ್ರತಿಯೊಬ್ಬ ನಾಗರೀಕನೂ ತನ್ನ ಅಭಿಪ್ರಾಯ ತಿಳಿಸಲು ಪಕ್ಷ ಅನುಕೂಲ ಒದಗಿಸಿದೆ. ಅದಕ್ಕಾಗಿ ವೆಬ್ ಸೈಟ್ ಅನ್ನು ಆರಂಭಿಸಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಹ್ಯಾಟ್ರಿಕ್ ಸಾಧಿಸಲು ಯೋಜನೆ ರೂಪಿಸಿರುವ ಕಾಂಗ್ರೆಸ್, ಬಿಜೆಪಿಯಂತೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಪಕ್ಷದ ಪ್ರಣಾಳಿಕೆ ಕುರಿತು ಜನರ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.

www.incmanifesto.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಜನರು ಪಕ್ಷದ ಲೋಕಸಭೆ ಚುನಾವಣೆ ಪ್ರಣಾಳಿಕೆ ಹೇಗಿರಬೇಕೆಂದು ಅಭಿಪ್ರಾಯ ತಿಳಿಸಬಹುದಾಗಿದೆ. ದೇಶಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಜನರು ಪಕ್ಷಕ್ಕೆ ತಿಳಿಸಬಹುದಾಗಿದೆ.
ಮತ್ತೊಂದು ಕಡೆ ಪ್ರಣಾಳಿಕೆ ರಚಿಸುವ ಜವಾಬ್ದಾರಿ ವಹಿಸಿಕೊಂಡಿರುವ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶದ ವಿವಿಧ ನಗರಗಳಲ್ಲಿ ಐಟಿ ಉದ್ಯಮಿಗಳು, ಸಾಹಿತಿಗಳು, ಬಹರಗಾರರು ಮುಂತಾದವರ ಜೊತೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಎಲ್ಲಾ ವ್ಯಕ್ತಿಗಳ ಜೊತೆ ವೈಯಕ್ತಿಕವಾಗಿ ಮಾತುಕತೆ ನಡೆಸಲು ಸಾಧ್ಯವಿಲ್ಲದ ಕಾರಣ ವೆಬ್ ಸೈಟ್ ಆರಂಭಿಸಲಾಗಿದೆ. [ಪ್ರಣಾಳಿಕೆ ತಯಾರಿಗಾಗಿ ಬೆಂಗಳೂರಿಗೆ ರಾಹುಲ್ ಗಾಂಧಿ]
2014ರ ಲೋಕಸಭೆ ಚುನಾವಣೆ ಪ್ರಣಾಳಿಕೆ ಸಿದ್ಧತೆ ಕುರಿತು ಐಟಿ ಉದ್ಯಮಿಗಳು, ಸಾಹಿತಿಗಳು, ಲೇಖಕರು ಮುಂತಾದವರ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜ.11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ.ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಣಾಳಿಕೆ ಕುರಿತು ಸಂವಾದ ನಡೆಸಲಿದ್ದಾರೆ.












Click it and Unblock the Notifications