'ವಿಶ್ವದಲ್ಲೇ ಈ ಕೆಲಸ ಮಾಡಿದ್ದು ನಮ್ಮ ಸರ್ಕಾರ ಮಾತ್ರ' ಎಂದ ಯತೀಂದ್ರ; ಏನದು?
ಸಿಎಂ ಸಿದ್ದರಾಮಯ್ಯ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಬೆನ್ನುತಟ್ಟಿಕೊಂಡಿದ್ದಾರೆ. ಇಡೀ ವಿಶ್ವದಲ್ಲಿ ಜನರ ಖಾತೆಗಳಿಗೆ ಹಣ ಹಾಕುತ್ತಿರುವ ಏಕೈಕ ಸರ್ಕಾರ ಅಂದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಹೊಗಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿರುವ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಮಾತ್ರವೇ ಪ್ರಾಧಿಕಾರದ ಹಣ ಬಳಕೆ ಆಗಿದೆ. ಅದರಲ್ಲಿ ತಪ್ಪೇನಿದೆ? ಎಂದೂ ಯತೀಂದ್ರ ಪ್ರಶ್ನಿಸಿದ್ದಾರೆ. ಜನರಿಗೆ ಒಳ್ಳೆಯದು ಮಾಡುವುದಕ್ಕಾಗಿಯೇ ಬಳಸಲು ಆ ಹಣ ಇದೆ. ಹಾಗಾಗಿ ಅದನ್ನು ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ. ಎದುರಾಳಿ ಪಕ್ಷಗಳು ಸುಖಾಸುಮ್ಮನೆ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಇಡೀ ವಿಶ್ವದಲ್ಲೇ ಜನಗಳ ಖಾತೆಗೆ ಹಣ ಜಮೆ ಮಾಡುತ್ತಿರುವ ಏಕೈಕ ಸರ್ಕಾರ ಅಂದರೆ ನಮ್ಮ ಕಾಂಗ್ರೆಸ್ ಮಾತ್ರವೇ. ಇಂತಹ ಯೋಜನೆಗಳನ್ನು ಸಹಿಸಿಕೊಳ್ಳಲಾಗದೆ ಸುಮ್ಮನೆ ನಮ್ಮ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಯತೀಂದ್ರ ದೂರಿದ್ದಾರೆ.
ನಮ್ಮ ಸರ್ಕಾರದ ಮೇಲೆ ಮಾತನಾಡಲು ಅವರಿಗೆ ಬೇರೆ ವಿಚಾರಗಳು ಸಿಗುವುದಿಲ್ಲ. ನಮ್ಮ ತಂದೆಯವರ ಮೇಲೆ ಮಾಡಲಾಗುತ್ತಿರುವ ಎಲ್ಲ ಆರೋಪಗಳೆಲ್ಲ ಸುಳ್ಳು. ಪ್ರತಿಯೊಂದಕ್ಕೂ ಸುಮ್ಮನೆ ಆರೋಪ ಮಾಡಿದರೆ ಹೇಗೆ? ನಮ್ಮ ತಂದೆ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೊಡಿ ಎಂದು ಮನಬಂದಂತೆ ಕೇಳುತ್ತಿದ್ದಾರೆ. ಆದರೆ, ಅವರು ಯಾಕೆ ರಾಜೀನಾಮೆ ಕೊಡಬೇಕು? ಈ ರೀತಿ ಸುಳ್ಳು ಆರೋಪಗಳಿಗೆಲ್ಲ ರಾಜೀನಾಮೆ ಕೊಡುತ್ತಾ ಹೋದರೆ ಏನರ್ಥ? ಎಂದು ಕಿಡಿಕಾರಿದ್ದಾರೆ.

ಒಂದು ತನಿಖೆ ಮಾಡಬೇಕಾದರೆ ಮಾಡುವ ಆರೋಪಗಳಲ್ಲಿ ಹುರುಳಿರಬೇಕು. ಹಾಗಾದರೆ ಯಾವ ಮುಖ್ಯಮಂತ್ರಿ ಇದ್ದಾಗಲೂ ಯಾರಾದರೂ ಬಂದು ಈ ರೀತಿ ಆಧಾರರಹಿತವಾಗಿ ಆರೋಪ ಮಾಡಿದ ತಕ್ಷಣ ರಾಜೀನಾಮೆ ಕೊಡಲು ಸಾಧ್ಯವೇ ? ಹಾಗೆಲ್ಲ ಮಾಡಲು ಸಾಧ್ಯವಿಲ್ಲ. ಆರೋಪಗಳಲ್ಲಿ ಹುರುಳಿರಬೇಕು.
ಕೆಲವು ರಾಜಕಾರಣಿಗಳು ಮಾಡುವ ತಪ್ಪು ತುಂಬಾ ದೊಡ್ಡದಾಗಿ ಕಾಣುತ್ತದೆ. ಪ್ರತಿ ವೃತ್ತಿಯಲ್ಲೂ ಅಂತಹವರು ಇದ್ದೇ ಇರುತ್ತಾರೆ. ತಪ್ಪು ಮಾಡುವ ಮೂಲಕ ತಮ್ಮ ವೃತ್ತಿಗೆ ಕಪ್ಪುಚುಕ್ಕೆ ತರುವವರು ಇರುತ್ತಾರೆ. ಇನ್ನು ನಮ್ಮ ರಾಜಕೀಯದಲ್ಲಿ ಅಂತಹವರು ಬಹಳಷ್ಟು ಜನರೇ ಇದ್ದಾರೆ. ಅವರು ಮಾಡುವ ತಪ್ಪಿನಿಂದ ಎಲ್ಲ ರಾಜಕಾರಣಿಗಳಿಗೂ ಕೆಟ್ಟ ಹೆಸರು ಬರುತ್ತಿದೆ. ಆದರೆ, ಯಾರೇ ತಪ್ಪು ಮಾಡಿದ್ರೂ ಸರ್ಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೆ ಎಂದು ಯತೀಂದ್ರ ಹೇಳಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವ ನಾಯಕರಿಗೆ ಯತೀಂದ್ರ ಸಿದ್ದರಾಮಯ್ಯ ಅವರು ಈ ರೀತಿ ಕೌಂಟರ್ ನೀಡಿದ್ದಾರೆ. ಜಾತಿ ನಿಂದನೆ, ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಆರೋಪದಲ್ಲಿ ಜೈಲು ಸೇರಿರುವ ಬಿಜೆಪಿ ಶಾಸಕ ಅವರು ಪ್ರಕರಣ ಕುರಿತು ಪ್ರತಿಕ್ರಿಯಿಸಿ, ನನಗೆ ಆ ಪ್ರಕರಣದ ಬಗ್ಗೆ ಅಷ್ಟೇನೂ ಗೊತ್ತಿಲ್ಲ ಎಂದಿದ್ದಾರೆ.












Click it and Unblock the Notifications