ಮೋದಿ ಅಲೆ ಮಂಗಮಾಯ? ಬಿಜೆಪಿ ಕಾರ್ಯಕರ್ತರಿಗೆ ‘ಎಲ್ಲಿದ್ದೀರಪ್ಪಾ’ ಅಂತಿದೆ ಕಾಂಗ್ರೆಸ್!
ಅದೇನ್ ಕಥೆಯೋ ಏನೋ.. ಅತ್ತ ಎಕ್ಸಿಟ್ ಪೋಲ್ ಭವಿಷ್ಯ ಸುಳ್ಳಾಗಿ ಹೋಗಿದೆ, ಹಾಗೇ ಬಿಜೆಪಿ ಪಕ್ಷ ಕೂಡ ಹೀನಾಯ ಹಿನ್ನಡೆ ಕಂಡಿದೆ. ಹೀಗಿದ್ದಾಗ ಕಾಂಗ್ರೆಸ್ ನಾಯಕರು, ಬಿಜೆಪಿ ಪಕ್ಷದ ಮುಖಂಡರು & ಕಾರ್ಯಕರ್ತರಿಗೆ ಹೊಸ ಸವಾಲು ಎಸೆಯುತ್ತಿದ್ದಾರೆ. ಹಾಗಾದ್ರೆ ಈಗ ನಿಜವಾಗಿಯೂ ಮೋದಿ ಅಲೆ ಮಾಯ ಆಗೋಯ್ತಾ? ಮುಂದೆ ಓದಿ.
ಬಿಜೆಪಿ 400 ಸ್ಥಾನಗಳಲ್ಲಿ ಗೆದ್ದು ಬೀಗುವ ವಿಶ್ವಾಸ ಹೊಂದಿತ್ತು. ಕೇವಲ 2 ತಿಂಗಳ ಹಿಂದೆ ಚುನಾವಣೆ ಶುರುವಾದ ಸಮಯದಲ್ಲಿ ಬಿಜೆಪಿಗೆ ಧೈರ್ಯ ಇತ್ತು. ಈ ಬಾರಿ ಹೊಸ ದಾಖಲೆ ನಿರ್ಮಾಣ ಮಾಡಿ, 400 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಗುರಿ ಇಟ್ಟುಕೊಂಡಿದ್ದರು ಬಿಜೆಪಿ ನಾಯಕರು. ಆದರೆ ಈಗ ಆಗಿರುವುದೇ ಬೇರೆ, ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವುದು ಬಿಡಿ ಈಗಿನ ಸ್ಥಿತಿ ನೋಡಿದರೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುವುದು ಕೂಡ ಕಷ್ಟವಾಗಿದೆ. ಹೀಗಿದ್ದಾಗಲೇ ಕಾಂಗ್ರೆಸ್ ನಾಯಕರು ಬಿಜೆಪಿ ಮುಖಂಡರಿಗೆ ಏನ್ ಹೇಳ್ತಿದ್ದಾರೆ ಗೊತ್ತಾ? ಆ ಬಗ್ಗೆ ತಿಳಿಯಲು ಮುಂದೆ ಓದಿ.

'ಎಲ್ಲಿದ್ದೀರಪ್ಪಾ' ಅಂತಿದೆ ಕಾಂಗ್ರೆಸ್!
ಹೌದು, ಬಿಜೆಪಿ 2024ರ ಲೋಕಸಭೆ ಚುನಾವಣೆಯಲ್ಲಿ ಭಾರಿ ಹಿನ್ನಡೆ ಕಂಡ ಹಿನ್ನೆಲೆ ಈಗ ಫುಲ್ ಟ್ರೋಲ್ ಮಾಡಲಾಗುತ್ತಿದೆ. ಅದರಲ್ಲೂ ಬಿಜೆಪಿ 400 ಸ್ಥಾನಗಳಲ್ಲಿ ಗೆಲುವು ಕಂಡು, ಭರ್ಜರಿ ಅಬ್ಬರದೊಂದಿಗೆ ಸರ್ಕಾರ ರಚಿಸಲಿದೆ ಅಂತಾ ಊರೆಲ್ಲಾ ಹೇಳಿಕೊಂಡು ಬಂದಿದ್ದ ಬಿಜೆಪಿ ಕಾರ್ಯರ್ತರು ಈಗ ಮನೆಯಲ್ಲಿ ಕೂತಿದ್ದಾರೆ. ಹೊರಗೆ ಬಂದು ಅವರು ಮಾತನಾಡಲಿ ಅಂತಿದ್ದಾರೆ ಕಾಂಗ್ರೆಸ್ ನಾಯಕರು. ಈ ಮೂಲಕ ಹೊಸದಾಗಿ ಕಿಚ್ಚು ಹೊತ್ತಿಕೊಂಡಿದ್ದು, ಈ ಕಿಚ್ಚು ಎರಡೂ ಪಕ್ಷಗಳ ನಡುವೆ ಧಗಧಗಿಸುವ ಸಾಧ್ಯತೆ ದಟ್ಟವಾಗಿದೆ.
ಸರ್ಕಾರ ರಚಿಸಲು ಸರ್ಕಸ್ ಶುರು!
ಎಕ್ಸಿಟ್ ಪೋಲ್ ಭವಿಷ್ಯ ಈಗ ಸುಳ್ಳಾಗಿ ಹೋಗಿದೆ. ಅದರಲ್ಲೂ ಇಷ್ಟು ದಿನ ಕಾಂಗ್ರೆಸ್ ಪಕ್ಷ 50 ನಂಬರ್ ದಾಟಲ್ಲ ಎಂದು ಹೇಳುತ್ತಿದ್ದ ಅಂಕಿ & ಅಂಶ ಉಲ್ಟಾ ಆಗಿದೆ. ಹೀಗಿದ್ದಾಗಲೇ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಸರ್ಕಸ್ ಕೂಡ ಶುರುವಾಗಿದೆ. ಯಾಕಂದ್ರೆ ಇನ್ನೇನು ಎರಡೂ ಮೈತ್ರಿಕೂಟಗಳು ಬಹುಮತಕ್ಕೆ ಹತ್ತಿರದಲ್ಲೇ ಇವೆ. ಹೀಗಾಗಿ ಸರ್ಕಾರ ರಚನೆ ಮಾಡಲು ಸರ್ಕಸ್ ಶುರುವಾಗಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರನ್ನ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿ, 400 ಸ್ಥಾನ ಎಲ್ಲಿ? ಅಂತಾ ಕೇಳುತ್ತಿದ್ದಾರೆ.
ಒಟ್ನಲ್ಲಿ ಈ ತಿಕ್ಕಾಟ ಮತ್ತಷ್ಟು ದಿನಗಳ ಕಾಲ ಮುಂದುವರಿಯಲಿದೆ. ಅದ್ರಲ್ಲೂ ತಿಕ್ಕಾಟದ ನಡುವೆ ಕೇಂದ್ರದಲ್ಲಿ ಸರ್ಕಾರ ರಚನೆಗೆ ಕೂಡ ಸರ್ಕಸ್ ಶುರುವಾಗಿದೆ. ಮುಂದಿನ ದಿನಗಳಲ್ಲಿ ಈ ಕಿರಿಕ್ ಇನ್ನಷ್ಟು ಜೋರಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಕೂಡ ಈಗ ಅಲ್ಲಗಳೆಯಲು ಆಗುವುದಿಲ್ಲ.












Click it and Unblock the Notifications