ಕಾಂಗ್ರೆಸ್‌ ದ್ದು ಡಬಲ್‌ ಸ್ಟೇರಿಂಗ್‌ ಸರ್ಕಾರ: ಸಿದ್ದರಾಮಯ್ಯ ಸರ್ಕಾರದ ವಿರುದ್ದ ಬಿಜೆಪಿ ಹೇಳಿದ್ದೇನು?

ಬೆಂಗಳೂರು, ಜುಲೈ 28: ಪೂರ್ಣ ಬಹುಮತ ಪಡೆದ ಸರ್ಕಾರವೊಂದರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಇರುವಂಥ ಗೊಂದಲ ಈಗಲೇ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಎಂಬ ಎರಡು ಶಕ್ತಿ ಕೇಂದ್ರಗಳನ್ನು ಹೊಂದಿರುವ ಕಾಂಗ್ರೆಸ್‌ ದ್ದು ಡಬಲ್‌ ಸ್ಟೇರಿಂಗ್‌ ಸರ್ಕಾರ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ಅವಾಸ್ತವಿಕ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಡಬಲ್ ಸ್ಟೇರಿಂಗ್ ಸರ್ಕಾರ, ಅಧಿಕಾರ ಹಿಡಿದ ದಿನದಿಂದಲೂ, ಒಳಜಗಳದಲ್ಲಿ ನಿರತವಾಗಿ, ರಾಜ್ಯದ ಆಡಳಿತ ಚಕ್ರವನ್ನು ಗೊಂದಲದ ಗೂಡನ್ನಾಗಿಸಿದೆ.ಸಂಪೂರ್ಣ ಬಹುಮತ ಬಂದರೂ ಮುಖ್ಯಮಂತ್ರಿಯ ಆಯ್ಕೆಗೆ ಹೈಡ್ರಾಮಾ ನಡೆಸುವ ಮೂಲಕ ಆರಂಭಗೊಂಡ ಕಾಂಗ್ರೆಸ್‌ನ ಈ ಗೋಳಿನ ಧಾರಾವಾಹಿ ಇನ್ನೂ ನಿಂತಿಲ್ಲ.

congress-is-double-steering-government

ಸಿಎಂ ಮತ್ತು ಡಿಸಿಎಂ ಜೊತೆಗೆ ಪ್ರಮಾಣವಚನ ಸ್ವೀಕರಿಸುವ ಸಚಿವರುಗಳು ಯಾರು ಎಂಬುದಕ್ಕೆ ಸಹ ಪುನಃ ತೂ ತೂ ಮೈ ಮೈ ನಡೆಸಿಕೊಂಡು, ನೀ ಕೊಡೆ, ನಾ ಬಿಡೆ ಎಂಬಂತೆ ಪ್ರಮಾಣವಚನ ಸಂದರ್ಭ ‌ಸಹ ಗೊಂದಲದಲ್ಲಿಯೇ ನಡೆದು ಹೋಯಿತು. ಇನ್ನು ಮಂತ್ರಿಮಂಡಲ ರಚನೆ ಸಂದರ್ಭದಲ್ಲಿಯೂ ಸಹ ಡಿಕೆಶಿ ಬಣದ ಹಿಂದುಳಿದ ವರ್ಗದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ತೀವ್ರ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಶಾಸಕರಲ್ಲದ ಎನ್.ಎಸ್. ಬೋಸರಾಜುಗೆ ಮಂತ್ರಿ ಪಟ್ಟ ಕಟ್ಟಿ, ಡಿ.ಕೆ. ಶಿವಕುಮಾರ್ ಅವರ ಆಪ್ತರು ಸಚಿವ ಸಂಪುಟದಲ್ಲಿ ಇರದಂತೆ ಮಾಡಿದರು.

ಸ್ಪೀಕರ್ ಆಯ್ಕೆಯಲ್ಲಿಯೂ ಗೊಂದಲಮಯ ವಾತಾವರಣವನ್ನು ನಿರ್ಮಿಸಿ, ಅಲ್ಲಿಯೂ ಸಹ ಬಣಗಳ ಮೇಲಾಟ ನಿರ್ಮಾಣವಾಯಿತು. ಆ ಬಳಿಕ ಸಚಿವ ಎಂ.ಬಿ. ಪಾಟೀಲ್ ಸಿದ್ದರಾಮಯ್ಯ 05 ವರ್ಷದ ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಹೇಳಿಕೆ ನೀಡಿದರು ಎಂಬ ಕಾರಣಕ್ಕೆ, ವಿಧಾನಸೌಧ ಎಂಬುದನ್ನು ಸಹ ನೋಡದೇ, ಡಿ.ಕೆ.ಶಿ ಬಣ ಹಾಗೂ ಸಿದ್ದರಾಮಯ್ಯ ಬಣ ಪರಸ್ಪರ ನಿಂದಿಸಿಕೊಂಡು, ಕಾಂಗ್ರೆಸ್ ಪಕ್ಷ ಒಡೆದ ಮನೆಯಾಗಿದೆ ಎಂಬುದನ್ನು ರಾಜ್ಯಕ್ಕೆ ತೋರಿತ್ತು.

congress-is-double-steering-government

ಆ ನಂತರ ಸರ್ಕಾರ ಆರಂಭಿಸಿದ ವರ್ಗಾವಣೆ ದಂಧೆಯಲ್ಲಿ ಶ್ಯಾಡೋ ಸಿಎಂ ಯತೀಂದ್ರರ ಹಸ್ತಕ್ಷೇಪದಿಂದ, ಡಿಸಿಎಂ ಸೇರಿದಂತೆ ಸಚಿವರು ಸಿಎಂ ವಿರುದ್ಧ ತಿರುಗಿಬಿದ್ದು ಅಸಮಾಧಾನ ತೋರಿದ್ದರು. ಸರ್ಕಾರಕ್ಕೆ ಎರಡು ತಿಂಗಳು ತುಂಬುವ ಒಳಗೆ ಸಚಿವರ ದುರ್ವರ್ತನೆ ವಿರುದ್ಧ ಶಾಸಕರೇ ಸಿಎಂಗೆ ಪತ್ರ ಬರೆದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗದ ಬಿ.ಕೆ. ಹರಿಪ್ರಸಾದ್, ನನಗೆ ಸಿಎಂ ಮಾಡುವುದು ಗೊತ್ತು, ಇಳಿಸುವುದೂ ಗೊತ್ತು ಎಂದು ಹರಿಹಾಯ್ದಿದ್ದಾರೆ.

ಹೊರಗಡೆ ಕೈ-ಕೈ ಹಿಡಿದು ಫೋಟೋಗಳಿಗೆ ಫೋಸು ಕೊಡುವವರು, ಒಳಗಡೆ ಪರಸ್ಪರ ಮುಖವನ್ನೂ ನೋಡಿಕೊಳ್ಳದ ಹಂತಕ್ಕೆ ಕಾಂಗ್ರೆಸ್ ನಾಯಕರು ತಲುಪಿದ್ದಾರೆ. ಇವರ ಕೈಗೆ ಅಧಿಕಾರ ನೀಡಿದ ತಪ್ಪಿಗೆ, ಕರ್ನಾಟಕದ ಮತದಾರ ಕಣ್ಣೀರಿನಲ್ಲಿ 'ಕೈ' ತೊಳೆಯುವಂತಾಗಿದೆ. ರಾಜ್ಯದ ಅಭಿವೃದ್ಧಿ ಹಳ್ಳ ಹಿಡಿಯುತ್ತಿದೆ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+