ಸರ್ಕಾರ ಹಿಜಾಬ್ ನಿಷೇಧ ಸುತ್ತೋಲೆ ಹಿಂಪಡೆಯಲಿದೆ: RSS ನಿಷೇಧದ ಎಚ್ಚರಿಕೆ ಕೊಟ್ಟ ಪ್ರಿಯಾಂಕ್ ಖರ್ಗೆ

ಬೆಂಗಳೂರು, ಮೇ 25: ರಾಜ್ಯದಲ್ಲಿ ಹಿಂಜಾಬ್ ನಿಷೇಧದ ಸುತ್ತೋಲೆಯನ್ನು ಹಿಂಪಡೆಯಲಿರುವ ಕಾಂಗ್ರೆಸ್ ಪಕ್ಷವು, ಶಾಂತಿ ಕದಡುವ ಪ್ರಯತ್ನಿಸಿದರೆ ಅದು ಭಜರಂಗದಳವೇ ಆಗಲಿ, ಸಂಘ ಪರಿಹಾರವೇ (RSS) ಆಗಲಿ ಗಂಭೀರವಾಗಿ ಪರಿಗಣಿಸುತ್ತೇವೆ. ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ನಿಷೇಧ ಸಹ ಮಾಡಬಹುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.

ಹಿಜಾಬ್ ನಿಷೇಧ ಕುರಿತು ಬುಧವಾರ ಮಾತನಾಡಿದ ಅವರು, ಕರ್ನಾಟಕದ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸುತ್ತೋಲೆಯನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದರು.

Withdraw Hijab Ban

ರಾಜ್ಯದಲ್ಲಿ ಶಾಂತಿ ಕದಡಿದರೆ ಭಜರಂಗದಳವೇ ಆಗಲಿ ಅಂತಹ ಸಂಘಟನೆಗಳನ್ನು ಕಾಂಗ್ರೆಸ್ ಸರ್ಕಾರ ನಿಷೇಧಿಸಲಿದೆ. ನಾವು ಕರ್ನಾಟಕವನ್ನು ಸ್ವರ್ಗವನ್ನಾಗಿ ಮಾಡುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ. ಶಾಂತಿ ಕದಡಿದರೆ, ಕಾನೂನು ಉಲ್ಲಂಘಿಸಿದರೆ ಅದು ಭಜರಂಗದಳ ಅಥವಾ ಯಾವುದೇ ಸಂಘ ಪರಿವಾರವೇ (RSS) ಆದರೂ ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದ್ದಾರೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಕಳೆದ ನಾಲ್ಕು ವರ್ಷಗಳಲ್ಲಿ ಕಾನೂನು ಮತ್ತು ಪೊಲೀಸರ ಭಯವಿಲ್ಲದೆ ಕೆಲವು ಅಂಶಗಳು ಸಮಾಜದಲ್ಲಿ ಮುಕ್ತವಾಗಿ ವಿಹರಿಸುತ್ತಿವೆ. ಇದರಿಂದ ಸಮಾಜಕ್ಕೆ ತೊಂದರೆ ಆದಲ್ಲಿ, ಕೋಮದ್ವೇಷ ಸೃಷ್ಟಿ, ಕಾನೂನು ಉಲ್ಲಂಘಿಸಿದಲ್ಲಿ ಕ್ರಮ ಜರುಗಿಸುತ್ತೇವೆ. ಶಾಂತಿ ಕಾಪಾಡುವ ಸಂಬಂಧ ಕಾಂಗ್ರೆಸ್ ಕೈಗೊಳ್ಳುವ ಕ್ರಮಗಳು ಬಿಜೆಪಿಗೆ ಸ್ವೀಕಾರ್ಹವಾಗದಿದ್ದಲ್ಲಿ ಅವರು ಬೇಕಾದರೆ ಪಾಕಿಸ್ತಾನಕ್ಕೆ ಹೋಗಬಹುದು ಎಂದು ಪ್ರಿಯಾಂಕ್ ಖರ್ಗೆ ಗುಡುಗಿದರು.

ಇದಷ್ಟೇ ಅಲ್ಲದೇ ಬಿಜೆಪಿ ಸರ್ಕಾರ ಹಿಂದೆ ರಾಜ್ಯದಲ್ಲಿ ಜಾರಿಗೊಳಿಸಿದ್ದ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನುಗಳು ಸೇರಿದಂತೆ ಎಲ್ಲಾ ಕಾನೂನುಗಳ ಹಿಜಾಬ್ ಆದೇಶ ಮತ್ತು ಪಠ್ಯಪುಸ್ತಕಗಳ ಪರಿಷ್ಕರಣೆ ಬಗ್ಗೆ ಕಾಂಗ್ರೆಸ್ ಪರಿಶೀಲಿಸುತ್ತದೆ.

Withdraw Hijab Ban

ಈ ಮೇಲಿನ ಕಾಯ್ದೆ, ಕಾನೂನು ಮತ್ತು ಆದೇಶಗಳಲ್ಲಿ ವಿವಾದಾಸ್ಪದ, ಕೋಮುವಾದ ಇಲ್ಲವೇ ಸಾಮಾಜಿಕ ರಚನೆಗೆ, ರಾಜ್ಯದ ಶಾಂತಿಯ ವಿರುದ್ಧವಿವೆ ಎಂಬುದು ಕಂಡು ಬಂದಲ್ಲಿ ಅವುಗಳನ್ನು ರದ್ದುಗೊಳಿಸುವ ಬಗ್ಗೆ ಚಿಂತನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಸರ್ಕಾರದ ನಿರ್ಧಾರ ಎತ್ತಿ ಹಿಡಿದಿದ್ದ ಕೋರ್ಟ್

ಕಳೆದ 2021ರಲ್ಲಿ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸಲು ಅನುಮತಿ ನೀಡಲಿಲ್ಲ. ಅಲ್ಲಿಂದ ಶುರುವಾರ ಹಿಜಾಬ್ ವಿವಾದ ಅದೇ ವರ್ಷ ಡಿಸೆಂಬರ್‌ನಲ್ಲಿ ಪ್ರತಿಭಟನೆ ಸ್ವರೂಪ ಪಡೆಯಿತು. ರಾಜ್ಯಾದ್ಯಂತ ಹಿಜಾಬ್ ಅಲೆ ಸೃಷ್ಟಿಯಾಗಿ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತು. ಇದರ ಪರಿಣಾಮ ವಿದ್ಯಾಭ್ಯಾಸ, ಪರೀಕ್ಷೆಗಳ ಮೇಲೂ ಬೀರಿತ್ತು.

ಇದೆಲ್ಲದರ ಬೆಳವಣಿಗೆ ನಂತರ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕರ್ನಾಟಕದ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು. ಈ ವಿಚಾರವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+