Swamiji Prediction: ಈ ಕೆಲ್ಸ ಮಾಡಿದ್ರೆ ರಾಜ್ಯದಲ್ಲಿ ಸರ್ಕಾರ ಬೀಳೋದು ಗ್ಯಾರಂಟಿ: ಸ್ವಾಮೀಜಿ ಸ್ಫೋಟಕ ಭವಿಷ್ಯ
Swamiji Prediction: ರಾಜ್ಯ ರಾಜಕಾರಣದ ಬಗ್ಗೆ ಹಲವು ಸ್ವಾಮೀಜಿಗಳು ಭವಿಷ್ಯ ನುಡಿಯುತ್ತಲೇ ಇರುತ್ತಾರೆ. ಹಾಗೆಯೇ ಇದೀಗ ರಾಜ್ಯದಲ್ಲಿ ಜಾತಿಗಣತಿ ವರದಿ ಬಗ್ಗೆ ಸ್ವಾಮೀಜಿಯೊಬ್ಬರು ಸರ್ಕಾರ ಬೀಳುವ ಭವಿಷ್ಯವೊಂದನ್ನು ನುಡಿದಿದ್ದಾರೆ. ಹಾಗಾದ್ರೆ ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಇದೀಗ ರಾಜ್ಯದಲ್ಲಿ ಜಾತಿಗಣತಿ ವರದಿ ಬಗ್ಗೆ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ನಡುವೆಯೇ ಇದೀಗ ಈ ಬಗ್ಗೆ ರಂಭಾಪುರಿ ಶ್ರೀಗಳು ಭವಿಷ್ಯವೊಂದನ್ನು ನುಡಿದಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ರಾಜ್ಯದಲ್ಲಿ ಜಾತಿ ಗಣತಿ ಜಾರಿ ಆದರೆ, ಸರ್ಕಾರ ಪತನವಾಗಲಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ ಎಂದು ಹಾವೇರಿಯಲ್ಲಿ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಆದ್ದರಿಂದ ಜಾತಿಗಣವತಿ ವರದಿ ಪಾರದರ್ಶವಕಾಗಿ ಆಗಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದ್ದರಿಂದ ಜಾತಿಗಣತಿ ವರದಿ ಜಾರಿ ಆಗಬಾರದೆಂದು ಹೇಳಿದ್ದಾರೆ. ಜಾತಿಗಣತಿ ವರದಿ ಬಗ್ಗೆ ವಿವಿಧ ಸಮುದಾಯಗಳ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆ ಮಹತ್ವ ಪಡೆದುಕೊಂಡಿದ್ದು, ಸಭೆಯಲ್ಲಿ ಜಾತಿಗಣತಿ ವರದಿ ಕುರಿತ ನಿರ್ಧಾರ ಕುತೂಹಲ ಕೆರಳಿಸಿದೆ.
ಸ್ಫೋಟಕ ಭವಿಷ್ಯ: ಹಲವು ಸ್ವಾಮೀಜಿಗಳು ಆಗಾಗ ಭಯಾನಕ ಭವಿಷ್ಯಗಳನ್ನು ನುಡಿಯುತ್ತಲೇ ಇರುತ್ತಾರೆ. ಹಾಗೆಯೇ ಬಲ್ಗೇರಿಯಾದ ಬಾಬಾ ವಂಗಾ ಅವರು ಕೂಡ ಭವಿಷ್ಯವಾಣಿಗಳನ್ನು ನುಡಿದಿದ್ದು, ಇವುಗಳಲ್ಲಿ ಹಲವು ನಿಜವಾಗಿ ಎಂದು ಹಲವರು ಹೇಳುತ್ತಿದ್ದಾರೆ. ಹಾಗೆಯೇ 2025ರಲ್ಲಿ ಘಟನೆಗಳು ಸಂಭವಿಸುತ್ತವೆ ಎಂದು ಹೇಳಿದ್ದ ಸ್ಫೋಟಕ ಮಾತುಗಳು ಕೂಡ ಸತ್ಯವಾಗಿವೆ ಎಂದು ತಿಳಿದುಬಂದಿದೆ. ಹಾಗಾದ್ರೆ ಯಾವೆಲ್ಲಾ ನಿಜವಾಗಿವೆ ಎಂದು ಇಲ್ಲಿ ತಿಳಿಯಿರಿ.
ಬಲ್ಗೇರಿಯಾದ ಬಾಬಾ ವಂಗಾ 12 ವರ್ಷಗಳ ಕಾಲ ಸಾಮಾನ್ಯ ಜೀವನವನ್ನು ನಡೆಸಿದ ನಂತರ, ಅವರು ಭವಿಷ್ಯ ನುಡಿಯುವಲ್ಲಿ ಪರಿಣಿತರಾಗಿದ್ದು, ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿರುವ ಉದಾಹರಣೆಗಳಿವೆ ಎಂದು ಹಲವರು ಹೇಳುತ್ತಿದ್ದಾರೆ. ಹಾಗೆಯೇ ಇದೀಗ 2025ರಲ್ಲೂ ಅವರು ಹೇಳಿದಂತೆ ಕೆಲವು ಘಟನೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಂಗಾ ದಶಕಗಳ ಹಿಂದೆಯೇ ಅನೇಕ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಅವರು ನುಡಿದಿರುವ ಅನೇಕ ಭವಿಷ್ಯಗಳು ಇಲ್ಲಿಯವರೆಗೆ ನಿಜವಾಗಿವೆ ಎಂದು ತಿಳಿದುಬಂದಿದೆ. ಅವರು 2025ರ ವರ್ಷದಲ್ಲಿ ಕೆಲವು ಸ್ಫೋಟಕ ಭವಿಷ್ಯಗಳನ್ನು ನುಡಿದಿದ್ದರು. 2025ರಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ವಿನಾಶಕಾರಿ ಭೂಕಂಪಗಳು ಸಂಭವಿಸುತ್ತವೆ ಹಲವು ವರ್ಷಗಳ ಹಿಂದೆಯೇ ಹೇಳಿದ್ದರು.
ಅಲ್ಲದೆ, ದೊಡ್ಡ ಪ್ರಮಾಣದಲ್ಲಿ ವಿನಾಶ ಸಂಭವಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಪ್ರಾಣ ಕಳೆದುಕೊಳ್ಳುತ್ತಾರೆ ಅಂತಲೂ ಹೇಳಿದ್ದರು. ಅವರು ನುಡಿದ ಭವಿಷ್ಯದಂತೆ ಕಳೆದ ಕೆಲವು ದಿನಗಳಲ್ಲಿ ಅಮೆರಿಕದಿಂದ ಏಷ್ಯಾ ಖಂಡದವರೆಗೆ ಬಹಳಷ್ಟು ಭೂಕಂಪನದ ಅನುಭವ ಆಗಿರುವ ಬಗ್ಗೆ ವರದಿಯಾಗಿದೆ. ಇನ್ನು ಭಾರತದಲ್ಲಿಯೂ ದೆಹಲಿಯಿಂದ ಬಿಹಾರ ಮತ್ತು ಬಂಗಾಳದವರೆಗೆ ಭೂಮಿ ಕಂಪಿಸಿದೆ. ಇದೀಗ ಈ ಎಲ್ಲಾ ದುರಂತಗಳನ್ನು ಗಮನಿಸಿದಾಗ ಬಾಬಾ ವಂಗಾ ನುಡಿದ ಭವಿಷ್ಯಗಳು ನಿಜವಾಗಿದ್ದು, ಜನರಲ್ಲಿ ಆತಂಕ ಉಂಟಾಗಿದೆ.
ಬಾಬಾ ವಂಗಾ ಅವರು 2025ರಲ್ಲಿ ವಿಶ್ವದ ಅನೇಕ ದೇಶಗಳು ವಿನಾಶಕಾರಿ ಭೂಕಂಪಗಳನ್ನು ಎದುರಿಸುತ್ತವೆ ಎಂದು ಭವಿಷ್ಯ ನುಡಿದಿದ್ದರು. ಈಗಾಗಲೇ ಹಲವೆಡೆ ಭೂಕಂಪನವಾಗಿದ್ದು, ಮುಂದಿನ ದಿನಗಳಲ್ಲಿ ಅವರು ನುಡಿದಿರುವ ಭವಿಷ್ಯದಂತೆ ಎಲ್ಲೆಲ್ಲಿ ಭೂಕಂಪನ ಉಂಟಾಗಲಿದೆಯೋ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಅಲ್ಲದೇ ಈ ಪ್ರಾಕೃತಿಕ ವಿಕೋಪದಿಂದ ಅಪಾರ ಜೀವ ಮತ್ತು ಆಸ್ತಿ ನಷ್ಟ ಅನುಭವಿಸುವ ಭಯದಲ್ಲಿ ಜನರಿದ್ದಾರೆ.
ಈ ಎಲ್ಲಾ ಭವಿಷ್ಯವಾಣಿಗಳನ್ನು ಗಮನಿಸಿದಾಗ ಬಾಬಾ ವಂಗಾ ಭವಿಷ್ಯವಾಣಿಗಳು ನಿಜವಾಗುತ್ತಿವೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಅಲ್ಲದೇ ಒಂದೆಡೆ ಆತಂಕವೂ ಮನೆ ಮಾಡಿದೆ. ಜನವರಿಯಿಂದ ಇಲ್ಲಿಯವರೆಗೆ, ಭಾರತದ ಹಲವು ಭಾಗಗಳಲ್ಲಿ ಭೂಕಂಪನ ಸಂಭವಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಸಹ, ಈ ವರ್ಷ ಭೂಮಿಯು ಹಲವು ಬಾರಿ ಕಂಪಿಸಿದ ಬಗ್ಗೆ ವರದಿಯಾಗಿದೆ. ಅಲ್ಲದೆ, ಬಿಹಾರದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂವರೆಗೆ ಭೂಕಂಪನ ಸಂಭವಿಸಿದೆ. ಏಷ್ಯಾ, ಅಮೆರಿಕ ಮತ್ತು ಇತರ ಖಂಡಗಳ ವಿವಿಧ ದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.












Click it and Unblock the Notifications