ಕಾಂಗ್ರೆಸ್ ಸರ್ಕಾರಕ್ಕೆ ಡಿಎಂಕೆ ಇಂಡಿಯಾ ಬಣದಿಂದ ಹೊರಬರುವ ಆತಂಕ: ವಾಟಾಳ್ ನಾಗರಾಜ್
ಬೆಂಗಳೂರು, ಅಕ್ಟೋಬರ್ 11: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಂಘಟನೆಯ ಸದಸ್ಯರು ಬುಧವಾರ ರಾಜಭವನ ಘೇರಾವ್ ಪ್ರತಿಭಟನೆ ನಡೆಸಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿಯ ನಿರ್ದೇಶನವನ್ನು ವಿರೋಧಿಸಿ ಕರ್ನಾಟಕ ಸರ್ಕಾರವು ನೆರೆಯ ತಮಿಳುನಾಡಿಗೆ ನೀರು ಹಂಚಿಕೆ ಮಾಡುವಂತೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ''ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮೌನವಾಗಿದ್ದು, ತಮಿಳುನಾಡಿನಲ್ಲಿ (ಎಂಕೆ) ಸ್ಟಾಲಿನ್ ಸರ್ಕಾರವು ಡಿಎಂಕೆಯನ್ನು ಇಂಡಿಯಾ ಬಣದಿಂದ ಹಿಂದೆಗೆದುಕೊಳ್ಳಬಹುದು ಎಂಬ ಭಯದಲ್ಲಿದೆ ಮತ್ತು ಆದ್ದರಿಂದ ನೆರೆಯ ರಾಜ್ಯಕ್ಕೆ ಕಾವೇರಿ ನೀರು ಬಿಡಲು ಒಪ್ಪಿಗೆ ನೀಡಿದೆ ಎಂದರು.
ಈ ಸರ್ಕಾರವು ಹೀಗೆ ನೀರು ಬಿಡುವುದನ್ನು ಮುಂದುವರೆಸಿದರೆ, ಬೆಂಗಳೂರಿನ ಜನರಿಗೆ ಶೀಘ್ರದಲ್ಲೇ ನೀರು ಇರಲ್ಲ. ಈಗಲೇ ರೈತರು ತಮ್ಮ ಹೊಲಗಳಿಗೆ ನೀರುಣಿಸಲು ನೀರಿಲ್ಲದೆ ಪರದಾಡುತ್ತಾರೆ. ಹೀಗಾಗಿ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಶೀಘ್ರವಾಗಿ ನಿಲ್ಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.
ತಮಿಳುನಾಡಿನಲ್ಲಿ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್ ಮಾತನಾಡಿ, ಕರ್ನಾಟಕವು ಕಾವೇರಿಯಿಂದ ನೀರನ್ನು ಬಿಡುಗಡೆ ಮಾಡಬೇಕು. ಯಾವುದೇ ರಾಜ್ಯವು ನದಿಯ ಏಕೈಕ ಮಾಲೀಕತ್ವವನ್ನು ಪಡೆಯಲು ಸಾಧ್ಯವಿಲ್ಲ. ಅವರು ಕಾವೇರಿ ಮಂಡಳಿಯ ಆದೇಶವನ್ನು ಪಾಲಿಸಬೇಕು. ಅಂತರಾಷ್ಟ್ರೀಯವಾಗಿ ಒಪ್ಪಿಕೊಂಡಿರುವ ಒಪ್ಪಂದದ ಪ್ರಕಾರ ಪೂರೈಕೆ ನದಿಯ ತಗ್ಗು ಪ್ರದೇಶಗಳಿಗೆ ನೀರು ಕೊಡಲು ನಿರಾಕರಿಸುವಂತಿಲ್ಲ.
ಡಿಎಂಕೆ ಮತ್ತು ಕಾಂಗ್ರೆಸ್ ನಡುವೆ ಒಡಕು ಮೂಡಿಸಲು ಬಿಜೆಪಿ ಬಯಸಿದೆ. ಇದು ಎರಡು ರಾಜ್ಯಗಳ ನಡುವಿನ ವಿಚಾರ ಮತ್ತು ಎರಡು ಪಕ್ಷಗಳ ನಡುವಿನ ರಾಜಕೀಯ ವಿವಾದವನ್ನಾಗಿ ಪರಿವರ್ತಿಸಲು ಬಿಜೆಪಿ ಬಯಸಿದೆ. ಕೇಂದ್ರ ಜಲ ಆಯೋಗ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕಾವೇರಿ ನೀರು ಬಿಡುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಪಾಲಿಸಿದ ಕರ್ನಾಟಕವು ತಮಿಳುನಾಡಿಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುತ್ತಿದೆ. ಪ್ರಾಧಿಕಾರವು ಮತ್ತೆ ಸಭೆ ಸೇರುವ ಅಕ್ಟೋಬರ್ 15 ರವರೆಗೆ ಆದೇಶ ಜಾರಿಯಲ್ಲಿರುತ್ತದೆ. ಮಂಗಳವಾರ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನಾಕಾರರು ಹೊಸಕೋಟೆ ಟೋಲ್ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ತಮಿಳುನಾಡಿಗೆ ಆಂಧ್ರಪ್ರದೇಶಕ್ಕೆ ಸಂಪರ್ಕ ತಡೆದಿದ್ದರು.
ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದ ಕೆಲ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೂ ಮುನ್ನ ಅಕ್ಟೋಬರ್ 5 ರಂದು ಕಾವೇರಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಸದಸ್ಯರನ್ನು ಮಂಡ್ಯ ಪೊಲೀಸರು ವಶಕ್ಕೆ ಪಡೆದಿದ್ದರು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸುದೀರ್ಘ ಹಗ್ಗಜಗ್ಗಾಟ ನಡೆಸಿವೆ. ಈ ನದಿಯು ಎರಡು ರಾಜ್ಯಗಳ ಜನರಿಗೆ ಜೀವನಾಧಾರದ ಪ್ರಮುಖ ಮೂಲವಾಗಿದೆ.












Click it and Unblock the Notifications