ಸಂಪುಟ ವಿಸ್ತರಣೆ: ಉ.ಕರ್ನಾಟಕಕ್ಕೆ ಕಾಂಗ್ರೆಸ್‌ ಆದ್ಯತೆ, ಒಳಗುಟ್ಟೇನು?

ಬೆಂಗಳೂರು, ಡಿಸೆಂಬರ್ 22: ಹಲವು ಮುಂದೂಡಿಕೆಗಳ ಬಳಿಕ ಇಂದು (ಡಿಸೆಂಬರ್ 22) ರಂದು ಕಾಂಗ್ರೆಸ್ ಪಕ್ಷವು ಸಚಿವ ಸಂಪುಟ ವಿಸ್ತರಣೆಗೆ ಅಣಿಯಾಗಿದೆ.

ಇಂದು ಸಂಜೆ ಕಾಂಗ್ರೆಸ್‌ನ ಎಂಟು ಜನ ಶಾಸಕರು ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಸಂಜೆ 5:20 ಕ್ಕೆ ರಾಜಭವನದಲ್ಲಿ ಎಂಟು ಜನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಆರು ಖಾತೆ ಇದ್ದ ಕಾಂಗ್ರೆಸ್‌ ಪಕ್ಷವು ಹೆಚ್ಚು ಜನರಿಗೆ ಅವಕಾಶ ಕೊಡಲೆಂದೇ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟಿದೆ. ಆದರೆ ಸಂಪುಟಕ್ಕೆ ಹೊಸಬರನ್ನು ಸೇರಿಸಿಕೊಳ್ಳುವ ವಿಷಯದಲ್ಲಿ ಉತ್ತರ ಕರ್ನಾಟಕದ ಪರ ವಿಶೇಷ ಕಾಳಜಿ ತೋರಿರುವುದು ಸ್ಪಷ್ಟ.

ಇತ್ತೀಚಿನ ದಿನಗಳಲ್ಲಿ ಉತ್ತರ ಕರ್ನಾಟಕದ ನಿರ್ಲಕ್ಷ್ಯದ ವಿರುದ್ಧದ ಕೂಗು ದಿನೇ-ದಿನೇ ಬಲಗೊಳ್ಳುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡೇ ಕಾಂಗ್ರೆಸ್‌ ಪಕ್ಷವು ಈ ನಿರ್ಣಯ ತೆಗೆದುಕೊಂಡಿದೆ. ಸಂಪುಟಕ್ಕೆ ಸೇರುತ್ತಿರುವ ಎಂಟು ಜನರಲ್ಲಿ ಏಳು ಜನ ಉತ್ತರ ಕರ್ನಾಟಕದವೇ ಆಗಿದ್ದಾರೆ.

ಲಿಂಗಾಯತ ವಿಚಾರದಲ್ಲಿ ಮಾಡಿದ ತಪ್ಪು ತಿದ್ದುವ ಯತ್ನ

ಲಿಂಗಾಯತ ವಿಚಾರದಲ್ಲಿ ಮಾಡಿದ ತಪ್ಪು ತಿದ್ದುವ ಯತ್ನ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕೈಯಾಡಿಸಿ ಉತ್ತರ ಕರ್ನಾಟಕದಲ್ಲಿ ಭಾರಿ ಹೊಡೆತ ತಿಂದಿದ್ದ ಕಾಂಗ್ರೆಸ್‌ ಡ್ಯಾಮೇಜ್ ಸರಿಪಡಿಸಿಕೊಳ್ಳಲು ಸಹ ಈ ನಿರ್ಧಾರ ತಳೆದಿದೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಕೈ ಹಾಕಿ ಕೈಸುಟ್ಟುಕೊಂಡಿದ್ದ ಕಾಂಗ್ರೆಸ್‌ ಲಿಂಗಾಯತ ಪ್ರಾಬಲ್ಯದ ಉತ್ತರ ಕರ್ನಾಟಕ್ಕೆ ಹೆಚ್ಚಿನ ಆದ್ಯತೆ ನೀಡಿ ಮತ್ತೆ ಉ.ಕ ಜನರ ವಿಶ್ವಾಸ ಜಯಿಸುವ ಯತ್ನ ಮಾಡುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲ್‌ಗೆ ಸಚಿವ ಸ್ಥಾನ ನೀಡಿದೆ.

ಉತ್ತರ ಕರ್ನಾಟಕ ಭದ್ರ ಮಾಡಿಕೊಳ್ಳುವ ಯತ್ನ

ಉತ್ತರ ಕರ್ನಾಟಕ ಭದ್ರ ಮಾಡಿಕೊಳ್ಳುವ ಯತ್ನ

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿಯೊಂದಿಗೆ ಕಾಂಗ್ರೆಸ್ ಸ್ಪರ್ಧಿಸುವುದು ಬಹುತೇಕ ಸ್ಪಷ್ಟ. ಹಾಗಾಗಿ ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್‌ ಬಲವಾಗಿದ್ದು ಅಲ್ಲಿ ಅದರ ಬೆಂಬಲದೊಂದಿಗೆ ಕಾಂಗ್ರೆಸ್ ಸುಲಭವಾಗಿ ಬಿಜೆಪಿಯನ್ನು ಮಣಿಸುತ್ತದೆ. ಆದರೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಬಲಹೀನ ಹಾಗಾಗಿ ಇಲ್ಲಿ ನೇರವಾಗಿ ಬಿಜೆಪಿ-ಕಾಂಗ್ರೆಸ್ ನಡುವೆ ಸ್ಪರ್ಧೆ ನಡೆಯುತ್ತದೆ. ಈ ಕಾರಣದಿಂದ ಕಾಂಗ್ರೆಸ್‌ ಉತ್ತರ ಕರ್ನಾಟಕದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಉತ್ತರ ಕರ್ನಾಟಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಬಹು ಕಾಲದಿಂದಲೂ ಒತ್ತಾಯ

ಬಹು ಕಾಲದಿಂದಲೂ ಒತ್ತಾಯ

ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲೇಬೇಕು ಎಂದು ಸರ್ಕಾರ ರಚನೆ ಆದಾಗಿನಿಂದಲೂ ಒತ್ತಾಯಗಳು ಕೇಳಿಬರುತ್ತಲೇ ಇವೆ. ಅದರಂತೆ ಈ ಬಾರಿ ಸಚಿವ ಸ್ಥಾನ ಆಕಾಂಕ್ಷಿಗಳು ಸಹ ಉತ್ತರ ಕರ್ನಾಟದವರೇ ಹೆಚ್ಚಿಗಿದ್ದರು ಹಾಗಾಗಿ ಸಹಜವಾಗಿಯೇ ಕಾಂಗ್ರೆಸ್‌ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.

ಉತ್ತರ ಕರ್ನಾಟಕದಿಂದ ಹೊಸದಾಗಿ ಮಂತ್ರಿ ಆದವರಿವರು

ಉತ್ತರ ಕರ್ನಾಟಕದಿಂದ ಹೊಸದಾಗಿ ಮಂತ್ರಿ ಆದವರಿವರು

ಬಳ್ಳಾರಿ ಸಂಡೂರಿನ ಈ.ತುಕಾರಾಂ, ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಎಂ.ಬಿ.ಪಾಟೀಲ್, ಬೆಳಗಾವಿಯ ಸತೀಶ್ ಜಾರಕಿಹೊಳಿ, ಹೂವಿನ ಹಡಗಲಿಯ ಪರಮೇಶ್ವರ ನಾಯ್ಕ, ಧಾರವಾಡ ಜಿಲ್ಲೆ ಕುಂದಗೋಳದ ಸಿ.ಎಸ್.ಶಿವಳ್ಳಿ, ಬೀದರ್‌ನ ರಹೀಂ ಖಾನ್, ಬಾಗಲಕೋಟೆಯ ಆರ್‌.ಬಿ.ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ದೊರೆತಿದೆ. ದಕ್ಷಿಣ ಕರ್ನಾಟಕದ ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ ನಾಗರಾಜ್‌ಗೆ ಸಚಿವ ಸ್ಥಾನ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+