Congress Candidates: 16 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್, ಪಟ್ಟಿ ಇಲ್ಲಿದೆ

ಬೆಂಗಳೂರು, ಮಾರ್ಚ್ 21: ಕರ್ನಾಟಕದ ಬಹು ನಿರೀಕ್ಷಿತ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಯಾವಾಗ ಬೇಕಾದರು ಪ್ರಕಟಿಸುವ ನಿರೀಕ್ಷೆಯಿದೆ. ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 16 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಇದರಿಂದ ಇನ್ನೂ ನಾಲ್ಕು ಕ್ಷೇತ್ರಗಳು ಖಾಲಿ ಉಳಿದಿದ್ದು, ಆ ಹೆಸರುಗಳನ್ನೂ ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಫೈನಲ್ ಆದ ಪಕ್ಷದ 16 ಅಭ್ಯರ್ಥಿಗಳು ಇವರೇ!

* ಚಂದ್ರಪ್ಪ (ಚಿತ್ರದುರ್ಗ)

* ಮೃಣಾಲ್ ಹೆಬ್ಬಾಳ್ಕರ್ (ಬೆಳಗಾವಿ)

* ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ)

* ಸಂಯುಕ್ತಾ ಪಾಟೀಲ್ (ಬಾಗಲಕೋಟೆ)

* ವಿನೋದ್ ಅಸೂಟಿ (ಹುಬ್ಬಳ್ಳಿ - ಧಾರವಾಡ)

* ಪ್ರಭಾ ಮಲ್ಲಿಕಾರ್ಜುನ್ (ದಾವಣಗೆರೆ)

* ರಾಜಶೇಖರ್ ಇಟ್ನಾಳ್ (ಕೊಪ್ಪಳ)

* ರಾಧಾಕೃಷ್ಣ ದೊಡ್ಡಮನಿ (ಕಲಬುರಗಿ)

* ಸಾಗರ್ ಖಂಡ್ರೆ ಅಥವಾ ರಾಜಶೇಖರ್ ಪಾಟೀಲ್ (ಬೀದರ್)

* ಪದ್ಮರಾಜ್ (ದಕ್ಷಿಣ ಕನ್ನಡ)

* ಜಯಪ್ರಕಾಶ್ ಹೆಗ್ಡೆ (ಉಡುಪಿ)

* ಸೌಮ್ಯಾ ರೆಡ್ಡಿ (ಬೆಂಗಳೂರು ದಕ್ಷಿಣ)

* ಮನ್ಸೂರ್ ಅಲಿ ಖಾನ್ (ಬೆಂಗಳೂರು ಸೆಂಟ್ರಲ್)

*ಪ್ರೊ ರಾಜೀವ್ ಗೌಡ (ಬೆಂಗಳೂರು ಉತ್ತರ)

* ಲಕ್ಷ್ಮಣ್ (ಮೈಸೂರು)

* ಕುಮಾರ್ ನಾಯಕ್ (ರಾಯಚೂರು)

* ಡಾ ಅಂಜಲಿ ನಿಂಬಾಳ್ಕರ್ (ಉತ್ತರ ಕನ್ನಡ)

Congress Candidates for 16 Lok Sabha Constituencies were Finalised Check List

ಈ ಪಟ್ಟಿ ಇನ್ನು ಅಧಿಕೃತವಾಗಿಲ್ಲ. ಪಕ್ಷವು ಶೀಘ್ರದಲ್ಲೇ ಹೆಸರುಗಳನ್ನು ಪ್ರಕಟಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದ ಸಿಇಸಿಯ ಸಾಲು ಸಾಲು ಸಭೆಯಲ್ಲಿ 16 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಈ ಹಿಂದೆ ಮೊದಲ ಪಟ್ಟಿಯಲ್ಲಿ ಏಳು ಕ್ಷೇತ್ರಗಳ ಹೆಸರನ್ನು ಮೊದಲೇ ಪ್ರಕಟಿಸಲಾಗಿತ್ತು.

ಇನ್ನು, 17 ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ಅಂತಿಮವಾಗಿದ್ದು, ಉಳಿದ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಚರ್ಚೆ ನಡೆಸಲಾಗುವುದು. ಅಂತಿಮ ನಾಲ್ಕು ಕ್ಷೇತ್ರಗಳಲ್ಲಿ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

Congress Candidates for 16 Lok Sabha Constituencies were Finalised Check List

ಸಚಿವರ ಕುಟುಂಬದವರಿಗೆ ಲೋಕಸಭಾ ಚುನಾವಣಾ ಟಿಕೆಟ್ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಡಿಕೆ ಶಿವಕುಮಾರ್, "ರಾಜಕೀಯ ವ್ಯವಸ್ಥೆಯಲ್ಲಿ ಕೆಲಸ ಮಾಡಿರುವವರಿಗೂ ಹೊಸ ಅಭ್ಯರ್ಥಿಗಳನ್ನು ತರುವುದಕ್ಕೂ ವ್ಯತ್ಯಾಸವಿದೆ. ಇಡೀ ದೇಶದಲ್ಲಿ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗುತ್ತಿದೆ. ಈ ಬಾರಿ ಐವರು ಮೊದಲ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಇನ್ನು 50% ವಿದ್ಯಾವಂತ ಯುವಕರಿಗೆ ಅವಕಾಶ ನೀಡಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+