‘ಮೋದಿ ಕೇವಲ ಕರ್ನಾಟಕ, ತಮಿಳುನಾಡಿಗೆ ಪ್ರಧಾನಿ ಅಲ್ಲ...’
ಕರ್ನಾಟಕದಲ್ಲಿ ಕಾವೇರಿ ವಿಚಾರಕ್ಕೆ ಕರ್ನಾಟಕ ಬಂದ್ ಕರೆದಿರುವ ಸಮಯಕ್ಕೆ ಬಿಜೆಪಿ & ಕಾಂಗ್ರೆಸ್ ನಡುವೆ ಕೂಡ ರಾಜಕೀಯ ತಿಕ್ಕಾಟ ಜೋರಾಗಿತ್ತು. ಬೆಳಗ್ಗೆಯಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಘಟಕಗಳು, ಆರೋಪ & ಪ್ರತ್ಯಾರೋಪ ಮಾಡಿವೆ. ಅದರಲ್ಲೂ ಕರ್ನಾಟಕ ಬಿಜೆಪಿ ಇಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಡಿದ ಆರೋಪಕ್ಕೆ ಕರ್ನಾಟಕ ಕಾಂಗ್ರೆಸ್ ಘಟಕ ಕೂಡ ಪ್ರತ್ಯುತ್ತರ ನೀಡಿದೆ.
ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರವಾಗಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಲಿ ಎಂಬ ಕೂಗು ಕೇಳಿಬಂದಿದೆ. ಆದರೆ ಈ ವಿಚಾರಕ್ಕೆ ಕೂಡ ಕಾಂಗ್ರೆಸ್ & ಬಿಜೆಪಿ ನಡುವೆ ಫೈಟ್ ಶುರುವಾಗಿದೆ. ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಲಿ ಅಂತಾ ಕಾಂಗ್ರೆಸ್ ನಾಯಕರು ಒತ್ತಾಯ ಮಾಡುತ್ತಿದ್ದರೆ, ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಯಾಕೆ ಮಧ್ಯಪ್ರವೇಶ ಮಾಡಬೇಕು? ಎಂದು ಕರ್ನಾಟಕದ ಬಿಜೆಪಿ ನಾಯಕರು ಪ್ರಶ್ನೆಯನ್ನ ಮಾಡ್ತಿದ್ದಾರೆ. ಈ ವಿಷಯಕ್ಕೆ ಇಂದು ಬಿಜೆಪಿ & ಕಾಂಗ್ರೆಸ್ ಮಧ್ಯೆ ಮಾತಿನ ಮಹಾಯುದ್ಧ ನಡೆದಿದೆ.

'ಮೋದಿ ಕೇವಲ ಕರ್ನಾಟಕ...'
ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, '"ಮೋದಿ ಕೇವಲ ಕರ್ನಾಟಕ, ತಮಿಳುನಾಡಿಗೆ ಪ್ರಧಾನಿ ಅಲ್ಲ, ಇತರ ರಾಜ್ಯಗಳ ಜಲ ವಿವಾದಗಳನ್ನೂ ಅವರು ಬಗೆಹರಿಸಬೇಕಿದೆ" ಇದು ಕನ್ನಡಿಗರಿಂದ ಆಯ್ಕೆಯಾದ ಕೇಂದ್ರ ಸಚಿವೆಯೊಬ್ಬರ ಮಾತು. ಕಾವೇರಿ ವಿಚಾರದಲ್ಲಿ ಬಿಜೆಪಿ ಅದೆಷ್ಟು ದುರಹಂಕಾರದ ಧೋರಣೆ ಹೊಂದಿದೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ. ಪ್ರಧಾನಿ ಮೋದಿಗೆ ಫೋಟೋಶೂಟ್ ಮಾಡಿಸುವುದಕ್ಕೆ ಸಮಯ ಸಾಲದು ಸಮಸ್ಯೆ ಬಗೆಹರಿಸಲು ಸಮಯ ಎಲ್ಲಿದೆ ಎನ್ನುವುದು ಈ ಮಾತಿನ ಅರ್ಥವೇ?' ಎಂದು ಪ್ರಶ್ನೆ ಮಾಡುವ ಮೂಲಕ ಬಿಜೆಪಿ ನಾಯಕರನ್ನ ಕೆಣಕಿದೆ.
"ಮೋದಿ ಕೇವಲ ಕರ್ನಾಟಕ, ತಮಿಳುನಾಡಿಗೆ ಪ್ರಧಾನಿ ಅಲ್ಲ, ಇತರ ರಾಜ್ಯಗಳ ಜಲ ವಿವಾದಗಳನ್ನೂ ಅವರು ಬಗೆಹರಿಸಬೇಕಿದೆ" ಇದು ಕನ್ನಡಿಗರಿಂದ ಆಯ್ಕೆಯಾದ ಕೇಂದ್ರ ಸಚಿವೆಯೊಬ್ಬರ ಮಾತು.
— Karnataka Congress (@INCKarnataka) September 29, 2023
ಕಾವೇರಿ ವಿಚಾರದಲ್ಲಿ ಬಿಜೆಪಿ ಅದೆಷ್ಟು ದುರಹಂಕಾರದ ಧೋರಣೆ ಹೊಂದಿದೆ ಎಂಬುದಕ್ಕೆ ಈ ಹೇಳಿಕೆಯೇ ಸಾಕ್ಷಿ.
ಪ್ರಧಾನಿ ಮೋದಿಗೆ ಫೋಟೋಶೂಟ್ ಮಾಡಿಸುವುದಕ್ಕೆ ಸಮಯ ಸಾಲದು… pic.twitter.com/vtAuJeVwEU
ಹಾಗೇ ತನ್ನ ಟ್ವೀಟ್‌ನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಜ್ಯ ಕಾಂಗ್ರೆಸ್ ಘಟಕ, 'ಚುನಾವಣೆ ಬಂದಾಗ ಮಾತ್ರ ಅವರು ಕರ್ನಾಟಕವೇ ನನ್ನ ಕರ್ಮಭೂಮಿ ಎಂದು ಸುಳ್ಳಿನ ಭಾಷಣ ಬಿಗಿಯುವ ಪ್ರಧಾನಿಯೇ @ShobhaBJP ಅವರೇ? ಪ್ರಧಾನಿ ಹುದ್ದೆಯ ಹೊಣೆಗಾರಿಕೆ ರಾಜ್ಯಗಳ ನಡುವಿನ ಸಮಸ್ಯೆ ಬಗೆಹರಿಸುವುದೇ ಹೊರತು ಚುನಾವಣೆ ರೋಡ್ ಶೋಕಿ ಮಾಡುವುದಲ್ಲ ಎಂಬುದರ ಅರಿವು ಮೋದಿಯವರಿಗೂ ಇಲ್ಲ, ಅವರ ಪಕ್ಷದವರಿಗೂ ಇಲ್ಲ.' ಎಂದು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

'ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ..'
ಇನ್ನು ಕಾಂಗ್ರೆಸ್ ರೀತಿಯೇ ಬಿಜೆಪಿ ಕೂಡ ಕಾವೇರಿ ವಿಚಾರವನ್ನ ಅಸ್ತ್ರ ಮಾಡಿಕೊಂಡಿದ್ದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಚಾಟಿ ಬೀಸಿ, 'ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ ಸತ್ತರೂ ಪರವಾಗಿಲ್ಲ, ಸ್ಟಾಲಿನ್ ಸರ್ಕಾರಕ್ಕೆ ನೀರು ಬಿಡುವುದೊಂದೆ ಸಾಧನೆ ಎಂಬಂತೆ @siddaramaiah ಅವರ ಸರ್ಕಾರ ಕೆ.ಆರ್.ಎಸ್., ಕಬಿನಿ ಡ್ಯಾಂ ಖಾಲಿ ಆದ ಮೇಲೆ ಇದೀಗ ರಾಮನಗರ ಜಿಲ್ಲೆಯ ಸಣ್ಣ ಪುಟ್ಟ ಜಲಾಶಯಗಳ ಮೇಲಿ ಕಣ್ಣಿಟ್ಟು ನಾವು ಕಾಂಗ್ರೆಸ್ಸಿಗರು ಸ್ಟಾಲಿನ್ ಗುಲಾಮರು ನೀರು ಹರಿಸುವುದು ಶತಸಿದ್ಧ ಎನ್ನುವ ಭಂಡತನಕ್ಕೆ ಬಿದ್ದಿದ್ದಾರೆ.' ಎಂದು ಆರೋಪ ಮಾಡಿತ್ತು.
ಕನ್ನಡಿಗರು ಕುಡಿಯುವುದಕ್ಕೆ ನೀರಿಲ್ಲದೆ ಸತ್ತರೂ ಪರವಾಗಿಲ್ಲ, ಸ್ಟಾಲಿನ್ ಸರ್ಕಾರಕ್ಕೆ ನೀರು ಬಿಡುವುದೊಂದೆ ಸಾಧನೆ ಎಂಬಂತೆ @siddaramaiah ಅವರ ಸರ್ಕಾರ ಕೆ.ಆರ್.ಎಸ್., ಕಬಿನಿ ಡ್ಯಾಂ ಖಾಲಿ ಆದ ಮೇಲೆ ಇದೀಗ ರಾಮನಗರ ಜಿಲ್ಲೆಯ ಸಣ್ಣ ಪುಟ್ಟ ಜಲಾಶಯಗಳ ಮೇಲಿ ಕಣ್ಣಿಟ್ಟು ನಾವು ಕಾಂಗ್ರೆಸ್ಸಿಗರು ಸ್ಟಾಲಿನ್ ಗುಲಾಮರು ನೀರು ಹರಿಸುವುದು ಶತಸಿದ್ಧ… https://t.co/hZ141PeEYK
— BJP Karnataka (@BJP4Karnataka) September 29, 2023
ಹಾಗೇ ತನ್ನ ಟ್ವೀಟ್‌ನಲ್ಲಿ ಆರೋಪ ಮುಂದುವರಿಸಿದ ಬಿಜೆಪಿ 'ಕನ್ನಡಿಗರಿಗೆ, ಕರ್ನಾಟಕಕ್ಕೆ ಮಹಾ ದ್ರೋಹ ಬಗೆದು ಸ್ಟಾಲಿನ್ ಗುಲಾಮರಂತೆ ವರ್ತಿಸುತ್ತಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಅಧಿಕಾರದಲ್ಲಿರಲು ಅಸಮರ್ಥರು, ತಕ್ಷಣವೇ ರಾಜೀನಾಮೆ ಕೊಡಬೇಕು. ಅಧಿಕಾರದ ದಾಹವಿದ್ದರೆ, ತಮಿಳುನಾಡಿಗೆ ಹೋಗಿ ಸ್ಟಾಲಿನ್ ಸಂಪುಟ ಸೇರಿಕೊಳ್ಳಬಹುದು..!' ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪವನ್ನೂ ಮಾಡಿತ್ತು.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು












Click it and Unblock the Notifications