Voters Data Theft: ಐಎಎಸ್ ಅಧಿಕಾರಿಗಳು ಅಮಾನತಾಗಿದ್ದು ಏಕೆ- ದಮ್ಮು ಇದ್ದರೆ ಉತ್ತರಿಸಿ ಎಂದ ಕಾಂಗ್ರೆಸ್‌

ಬೆಂಗಳೂರು, ನವೆಂಬರ್‌ 26: ಮತದಾರರ ಮಾಹಿತಿ ಕಳ್ಳತನದ ಅಕ್ರಮದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತಾಗಿದ್ದು ಏಕೆ ಎಂದು ಮುಖ್ಯಮಂತ್ರಿ ಬೊಮ್ಮಾಯಿಯನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ಶನಿವಾರ ಸರಣಿ ಟ್ವೀಟ್‌ ಮಾಡಿರುವ ಕೆಪಿಸಿಸಿ, 'ಅಕ್ರಮ ನಡೆದೇ ಇಲ್ಲ ಎಂಬಂತೆ ಮಾತನಾಡುತ್ತಿದ್ದ ಬಸವರಾಜ ಬೊಮ್ಮಾಯಿ ಅವರೇ, ಮತದಾರರ ಮಾಹಿತಿ ಕಳ್ಳತನದ ಅಕ್ರಮದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತಾಗಿದ್ದು ಏಕೆ? ಸರ್ಕಾರದ ಹಸ್ತಕ್ಷೇಪ, ಬಿಜೆಪಿಯ ಹಿತಾಸಕ್ತಿ, ಮುಖ್ಯಮಂತ್ರಿಗಳ ಸಹಕಾರ ಇಲ್ಲದೆ ಐಎಎಸ್ ಮಟ್ಟದ ಅಧಿಕಾರಿಗಳು ಚಿಲುಮೆಗೆ ಸಹಕರಿಸಲು ಸಾಧ್ಯವೇ? ದಮ್ಮು ತಾಕತ್ತು ಇದ್ದರೆ ಉತ್ತರಿಸಿ' ಎಂದು ತಿಳಿಸಿದೆ.

ಬಿಜೆಪಿ ಸರ್ಕಾರದ ಪ್ರಮುಖ ಕಳ್ಳತನಗಳು ಎಂಬ ಶೀರ್ಷಿಕೆಯಡಿ ಟ್ವೀಟ್ ಕಾಂಗ್ರೆಸ್‌ ಪಟ್ಟಿಯನ್ನು ನೀಡಿದೆ,

*ಶಾಸಕರ ಕಳ್ಳತನ
*ಕಮಿಷನ್ ಕಳ್ಳತನ
*ಸರ್ಕಾರಿ ಹುದ್ದೆಗಳ ಕಳ್ಳತನ
*ಮತದಾರರ ಮಾಹಿತಿ ಕಳ್ಳತನ
ಬಿಜೆಪಿ ಒಮ್ಮೆಯೂ ಜನದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಳ್ಳ ಮಾರ್ಗದಲ್ಲಿ ಹೈಜಾಕ್ ಮಾಡಿ ಅಧಿಕಾರ ಹಿಡಿಯುವ ಬಿಜೆಪಿ ಬಗ್ಗೆ ಜನತೆ ಜಾಗ್ರತೆ ವಹಿಸಬೇಕು' ಎಂದು ಹೇಳಿದೆ.

Congress asks questions to basavaraj bommai regarding Voters Data Theft

ಹಗರಣಗಳ ಬಗ್ಗೆ ಬಿಜೆಪಿ ವರಸೆಗಳು ಎಂಬ ಶೀರ್ಷಿಕೆಯಡಿ ಟ್ವೀಟ್ ಕಾಂಗ್ರೆಸ್‌,
*ಮೊದಲು - ಅಕ್ರಮವೇ ನಡೆದಿಲ್ಲ ಎಂದು ನಿರಾಕರಿಸುವುದು

*ಹಗರಣ ಹೊರಬಂದನಂತರ - ಸಣ್ಣ ಲೋಪ ಎಂಬಂತೆ ಮಾತಾಡುವುದು

Congress asks questions to basavaraj bommai regarding Voters Data Theft

*ಹಗರಣದ ತೀವ್ರತೆ ಹೊರಬಂದಾಗ - ಪ್ರಭಾವಿಗಳ ರಕ್ಷಣೆಗೆ ತಂತ್ರ ಹೂಡುವುದು

PSI ಅಕ್ರಮದಿಂದ ಹಿಡಿದು ಚಿಲುಮೆ ಹಗರಣದವರೆಗೂ ಬಿಜೆಪಿ ನಡೆದುಕೊಂಡ ರೀತಿ ಇದು' ಎಂದು ಕಾಂಗ್ರೆಸ್‌ ಆರೋಪಿಸಿದೆ.

Congress asks questions to basavaraj bommai regarding Voters Data Theft

ಇದೇ ವೇಳೆ, ನಿಮ್ಮ ಹತ್ರ ಇದೆಯಾ ಉತ್ತರ ಎಂಬ ಹ್ಯಾಶ್‌ಟ್ಯಾಗ್‌ ಅಡಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಅಡಿಕೆ ಸಂಶೋಧನೆ ಕೇಂದ್ರ ಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ. ಎಲೆಚುಕ್ಕಿ ಎಂಬ ಮಾರಕ ರೋಗ ಅಡಿಕೆ ತೋಟಗಳನ್ನೇ ಸರ್ವನಾಶ ಮಾಡುತ್ತಿದೆ, ರೋಗ ನಿಯಂತ್ರಣದ ಸಂಶೋಧನೆಗೆ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಅಡಿಕೆ ಬೆಳೆಯ ಪ್ರಾಂತ್ಯದಲ್ಲಿರುವ ಬಿಜೆಪಿ ಸಂಸದರು, ಶಾಸಕರು ಈ ಬಗ್ಗೆ ಕನಿಷ್ಠ ಕಾಳಜಿ ವಹಿಸದಿರುವುದೇಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+